“ವಿಶ್ವ ನಸುಗೆಂಪು ಹಿಜಾಬ್” ದಿನ (pink hijab day)

 

pink hijab dayಅಕ್ಟೋಬರ್ ೨೮, ೨೦೦೯ “ವಿಶ್ವ ನಸುಗೆಂಪು ಹಿಜಾಬ್” ದಿನ (pink hijab day). ಈ ದಿನದ ಉದ್ದೇಶ ಮಹಿಳೆಯರಲ್ಲಿ ಸ್ತನ ಕ್ಯಾನ್ಸರ್ ಬಗ್ಗೆ ಅರಿವು ಮೂಡಿಸುವುದಾಗಿದೆ. ವಿಶ್ವದ ಹಿಜಾಬ್ ( ಮುಸ್ಲಿಂ ಸಾಂಸ್ಕೃತಿಕ ಉಡುಗೆ ) ಧರಿಸುವ ಮುಸ್ಲಿಂ    ಹೆಣ್ಣುಮಕ್ಕಳ ನೇತೃತ್ವದಲ್ಲಿ ಈ ದಿನ ಆಚರಿಸಲಾಗುತ್ತಿದೆ. ಈ ದಿನ ವಿಶ್ವದ ಮುಸ್ಲಿಂ ಹೆಣ್ಣುಮಕ್ಕಳು ನಸುಗೆಂಪು ಬಣ್ಣದ ಹಿಜಾಬ್ ಧರಿಸಿ ಸ್ತ್ರೀಯರನ್ನು ಭಯಾನಕವಾಗಿ ಕಾಡುತ್ತಿರುವ ಸ್ತನ ಕ್ಯಾನ್ಸರ್ ಬಗ್ಗೆ ಅರಿವು ಮೂಡಿಸಿ ಚಂದಾ ಸಂಗ್ರಹಣೆ ಮಾಡಿ ಕ್ಯಾನ್ಸರ್ ಸಂಘಟನೆಗಳಿಗೆ ಕೊಡುವುದರ ಜೊತೆ ಮುಸ್ಲಿಂ ಹೆಣ್ಣುಮಕ್ಕಳ ಮತ್ತು ಸ್ತ್ರೀಯರ ಬಗೆಗಿರುವ ತಪ್ಪು ಕಲ್ಪನೆಗಳನ್ನು ಹೋಗಲಾಡಿಸುವತ್ತ ಪ್ರಯತ್ನ ಮಾಡಲಿದ್ದಾರೆ.

 

ಹಿಜಾಬ್ ಕಂಡ ಕ್ಷಣ ಈಕೆಯೆಲ್ಲೋ ಶೋಷಣೆಗೆ ಒಳಪಟ್ಟ, ಮುಲ್ಲಾಗಳ ನಿಯಂತ್ರಣದಲ್ಲಿರುವ, ನಿರಕ್ಷರಕುಕ್ಷಿ ಆಗಿರಬಹುದು ಎನ್ನುವ ಅಭಿಪ್ರಾಯ ಹಲವರಲ್ಲಿದೆ. ಹಿಜಾಬ್ ಧರಿಸಿ ಉನ್ನತ ವ್ಯಾಸಂಗ ಪಡೆದು ಯಶಸ್ವಿಗಳಾದ ಮುಸ್ಲಿಮ ಮಹಿಳೆಯರು ಅಸಂಖ್ಯ. ಬಾಹ್ಯ ಸೌಂದರ್ಯವನ್ನು ಪ್ರದರ್ಶಿಸಿ ಅಂತರಂಗದ ಸೌಂದರ್ಯವನ್ನು ಕಳೆಯಲು ಇಚ್ಛಿಸದ ಮುಸ್ಲಿಂ ಮಹಿಳೆ ಯಾವುದೇ ಭಯವಿಲ್ಲದೆ ಹಿಜಾಬ್ ಧರಿಸುತ್ತಾಳೆ. modernity ಹೆಸರಿನಲ್ಲಿ ಹೆಣ್ಣು ಕನಿಷ್ಠ ವಸ್ತ್ರ ಧರಿಸಲು ಉತ್ತೇಜಿಸುವ ಮುಂದುವರಿದ ರಾಷ್ಟ್ರಗಳಲ್ಲೂ ಮುಸ್ಲಿಂ ಮಹಿಳೆಗೆ ಹಿಜಾಬ್ ಹಿನ್ನಡೆಯಾಗಿಯೋ, ತೊಡಕಾಗಿಯೋ ಕಂಡಿಲ್ಲ. ಸ್ವ ಇಷ್ಟದಿಂದ ಮತ್ತು ಸ್ವಾಭಿಮಾನದಿಂದ ಆಕೆ ತನ್ನ ಸೃಷ್ಟಿಕರ್ತನ ನಿರ್ದೇಶಗಳನ್ನು ಪಾಲಿಸುತ್ತಾಳೆ ಮತ್ತು ತನ್ನ ಹೆಣ್ತನವನ್ನು ಮೆರೆಯುತ್ತಿದ್ದಾಳೆ.    

 www.pinkhijabday.net  

ಒಂದು ದೊಡ್ಡ ಜಾಡಿ ಮತ್ತು ಎರಡು ಕಪ್ಪು ಕಾಫಿ

ಒಬ್ಬ ಪ್ರೊಫೆಸರ್ ತಮ್ಮ ತತ್ವಶಾಸ್ತ್ರದ ತರಗತಿಯಲ್ಲಿ ತಮ್ಮೊಂದಿಗೆ ಒಂದಿಷ್ಟು ವಸ್ತುಗಳನ್ನು ತರುತ್ತಾರೆ. ವಿದ್ಯಾರ್ಥಿಗಳೊಂದಿಗೆ ಮಾತನಾಡುತ್ತಾ ಒಂದು ದೊಡ್ಡ ಜಾಡಿಯೊಳಗೆ ( jar ) ಚೆಂಡುಗಳನ್ನು ಹಾಕಿ ಜಾಡಿ ತುಂಬಿತಾ ಎಂದು ಕೇಳುತ್ತಾರೆ. ವಿದ್ಯಾರ್ಥಿಗಳು ಹೌದು ತುಂಬಿತು ಎನ್ನುತ್ತಾರೆ. ನಂತರ ಪ್ರೊಫೆಸರ್ ಒಂದಿಷ್ಟು ಸಣ್ಣ ಸಣ್ಣ ಕಲ್ಲುಗಳನ್ನು ಜಾಡಿಯೊಳಕ್ಕೆ ಹಾಕಿ ಮತ್ತೊಮ್ಮೆ ಕೇಳುತ್ತಾರೆ ಜಾಡಿ ತುಂಬಿತಾ ಎಂದು. ವಿದ್ಯಾರ್ಥಿಗಳು ಹೌದು ಎನ್ನುತ್ತಾರೆ. ಮುಂದುವರೆದ ಪ್ರೊಫೆಸರ್ ಜಾಡಿಯೊಳಗೆ ಒಂದಿಷ್ಟು ಮರಳನ್ನು ಹಾಕಿ ಅಲ್ಲಾಡಿಸಿ ಕೇಳುತ್ತಾರೆ ಅದೇ ಪ್ರಶ್ನೆಯನ್ನು. ವಿದ್ಯಾರ್ಥಿಗಳು ಹೌದು ಸಾರ್ ಜಾಡಿ ತುಂಬಿದೆ ಎನ್ನುತ್ತಾರೆ. ಕೊನೆಗೆ ಪ್ರೊಫೆಸರ್ ಚೆಂಡುಗಳು, ಕಲ್ಲುಗಳು ಮತ್ತು ಮರಳು ತುಂಬಿದ ಜಾಡಿಯೊಳಗೆ ಎರಡು ಕಪ್ಪು ಕಾಫಿ ಹಾಕಿ ತುಮ್ಬಿಸಿದಾಗ ವಿದ್ಯಾರ್ಥಿಗಳು ಗೊಳ್ಳೆಂದು ನಗುತ್ತಾರೆ. ವಿದ್ಯಾರ್ಥಿಗಳನ್ನು ಉದ್ದೇಶಿ ಮಾತನಾಡುವ ಪ್ರೊಫೆಸರ್ ಹೇಳುತ್ತಾರೆ ಈ ಜಾಡಿ ನಿಮ್ಮ ಜೀವನದ ಹಾಗೆ. ಚೆಂಡುಗಳು ಜೀವನದ ಪ್ರಮುಖ ಅಂಗಗಳು; ನಿಮ್ಮ ದೇವರು, ಕುಟುಂಬ, ಮಕ್ಕಳು, ನಿಮ್ಮ ಆರೋಗ್ಯ ಮತ್ತು ಇತರೆ ಅಮೂಲ್ಯ ವಸ್ತುಗಳು. ಬೇರೆಲ್ಲೇ ನಷ್ಟ ಬಂದರೂ ಇವುಗಳಿದ್ದರೆ ನಿಮ್ಮ ಜೀವನ ನಡೆಯುತ್ತದೆ. ಕಲ್ಲುಗಳು ನಿಮ್ಮ ಉದ್ಯೋಗ, ಕಾರು ಮತ್ತು ಮನೆ ಇದ್ದ ಹಾಗೆ. ಮರಳು ಚಿಕ್ಕ ಪುಟ್ಟ ಸಂಗತಿಗಳು. ನೀವು ಮೊದಲಿಗೇ ಮರಳನ್ನು ಜಾಡಿಯೊಳಕ್ಕೆ ತುಂಬಿದರೆ ಚೆಂಡುಗಳಿಗೂ ಮತ್ತು ಕಲ್ಲುಗಳಿಗೂ ಸ್ಥಳವಿರುವುದಿಲ್ಲ ಜಾಡಿಯಲ್ಲಿ. ಬದುಕೂ ಸಹ ಹೀಗೆಯೇ. ಪ್ರಥಮವಾಗಿ ನೀವು ನಿಮ್ಮ ಬಗ್ಗೆ, ಕುಟುಂಬದ ಬಗ್ಗೆ, ಮಕ್ಕಳ ಮತ್ತು ಆರೋಗ್ಯದ ಬಗ್ಗೆ ಹೆಚ್ಚು ಗಮನ ಹರಿಸಬೇಕು. ಸಣ್ಣ ವಿಷಯಗಳ ಬಗ್ಗೆ ಹೆಚ್ಚು ಗಮನ ನೀಡಿದರೆ ಬದುಕಿನ ದೊಡ್ಡ ಆನಂದಗಳನ್ನು ನಿರ್ಲಕ್ಷ್ಯ ಮಾಡಿದಂತೆ. ಮಕ್ಕಳೊಂದಿಗೆ ಆಡಿ, ಮಡದಿಯ ಕಡೆ ಗಮನ ನೀಡಿ, ಬದುಕನ್ನು ಚೆನ್ನಾಗಿ ಅನುಭವಿಸಿ. ಬಾಕಿಯೆಲ್ಲ ಮರಳು, ಗೌಣ. ಈ ಮಾತನ್ನು ಮುಗಿಸಿ ಪ್ರೊಫೆಸರ್ ಹೊರಡಲು ನಿಂತಾಗ ವಿದ್ಯಾರ್ಥಿಯೊಬ್ಬಳು ಕೇಳುತ್ತಾಳೆ, ಹೌದು ಸಾರ್ ಆದರೆ ಆ ಎರಡು ಕಪ್ಪು ಕಾಫಿ ಯಾವುದನ್ನು ಪ್ರತಿನಿಧಿಸುತ್ತವೆ? ಇದನ್ನು ಕೇಳಿ ಪ್ರೊಫೆಸರ್ ನಗುತ್ತಾ ಹೇಳುತ್ತಾರೆ. ಒಳ್ಳೆಯ ಪ್ರಶ್ನೆ:

ನಿಮ್ಮ ಬದುಕು ಎಷ್ಟೇ ತುಂಬಿದೆ, ತೃಪ್ತಿಕರ ಎಂದು ನಿಮಗನ್ನಿಸಿದರೂ ನಿಮ್ಮ ಮಿತ್ರರೊಂದಿಗೆ ಕಾಫಿ ಕುಡಿಯಲು ಸಮಯ ಇದ್ದೇ ಇರುತ್ತದೆ. ಇದನ್ನು ಕೇಳಿ ವಿದ್ಯಾರ್ಥಿಗಳು ಮೂಕವಿಸ್ಮಿತರಾಗಿ ಧನ್ಯತಾ ಭಾವದಿಂದ ಹೊರನಡೆಯುತ್ತಾರೆ.

how ever busy you are, stop once in a while and smell the grass, ಅಲ್ವಾ

a lesson for life…

A PSALM OF LIFE

                   

    TELL me not, in mournful numbers,
        Life is but an empty dream ! —
    For the soul is dead that slumbers,
        And things are not what they seem.

    Life is real !   Life is earnest!
        And the grave is not its goal ;
    Dust thou art, to dust returnest,
        Was not spoken of the soul.

    Not enjoyment, and not sorrow,
        Is our destined end or way ;
    But to act, that each to-morrow
        Find us farther than to-day.

    Art is long, and Time is fleeting,
        And our hearts, though stout and brave,
    Still, like muffled drums, are beating
        Funeral marches to the grave.

    In the world’s broad field of battle,
        In the bivouac of Life,
    Be not like dumb, driven cattle !
        Be a hero in the strife !

    Trust no Future, howe’er pleasant !
        Let the dead Past bury its dead !
    Act,— act in the living Present !
        Heart within, and God o’erhead !

    Lives of great men all remind us
        We can make our lives sublime,
    And, departing, leave behind us
        Footprints on the sands of time ;

    Footprints, that perhaps another,
        Sailing o’er life’s solemn main,
    A forlorn and shipwrecked brother,
        Seeing, shall take heart again.

    Let us, then, be up and doing,
        With a heart for any fate ;
    Still achieving, still pursuing,
        Learn to labor and to wait.

ಅಲ್ಲಿರುವುದು ನಮ್ಮ ಮನೆ, ಇಲ್ಲಿಗೆ ಬಂದೆ ಸುಮ್ಮನೆ. ಈ ಸಾಲುಗಳನ್ನು ಕೇಳಿರಬಹುದು ನೀವು. ಆಧ್ಯಾತ್ಮಿಕದೆಡೆ ಮನಸ್ಸನ್ನು ತಿರುಗಿಸುವ ಈ ಸಾಲು ಎಷ್ಟು ಅರ್ಥಗರ್ಭಿತ. ಆದರೆ ಇಲ್ಲಿಗೆ ಬಂದೆ ಸುಮ್ಮನೆ ಎಂದರೆ ವೃಥಾ ಕಾಲ ಕಳೆದು ನಮ್ಮ ಸಮಯ ಬಂದಾಗ ಜಾಗ ಖಾಲಿ ಮಾಡುವುದು ಎಂದೇನಲ್ಲ. “ಅಲ್ಲಿರುವ ನಮ್ಮ ಮನೆಗೆ” ಹೋಗಲು ತಯಾರಿ ಇಲ್ಲಿಯೇ, ಭೂಳಕದಲ್ಲಿ, ಆಗಬೇಕು. ಇಲ್ಲದಿದ್ದರೆ ಪರಮಾತ್ಮನ ಮುಂದೆ ಬರಿಗೈಲಿ ಹೋಗಬೇಕಾಗುತ್ತದೆ.

ಎಲ್ಲ ಧರ್ಮಗಳ ಸಾರವೂ ಇದೇ. ಇಲ್ಲಿರುವವರೆಗೂ ಒಳ್ಳೆಯ ಕಾರ್ಯಗಳನ್ನು ಮಾಡಿ ಭಗವಂತನನ್ನು ಸಂಪ್ರೀತಿಗೊಳಿಸುವುದು.

ಮೇಲಿನ ಆಂಗ್ಲ ಕವಿತೆ ಬರೆದ Henry Wadsworth Longfellow (1807-1882) ಬದುಕು ಒಂದು ಬರೀ ಜಟಕಾ ಬಂಡಿ ಅಲ್ಲ, ಖಾಲಿ ಖಾಲಿ ಸ್ವಪ್ನವೂ ಅಲ್ಲ ಎಂದು ನಮ್ಮನ್ನು ಎಚ್ಚರಿಸುತ್ತಾರೆ. ” ಸತ್ಯವೂ, ಶ್ರದ್ಧಾಪೂರ್ವಕವೂ ಆದುದು ಬದುಕು ಮತ್ತು ಗೋರಿಯಲ್ಲ ಅದರ ಗುರಿ” ಎಂದು longfellow ಬದುಕನ್ನು  ಬಣ್ಣಿಸುತ್ತಾರೆ.

In the world’s broad field of battle,
        In the bivouac of Life,
    Be not like dumb, driven cattle !
        Be a hero in the strife
“ಪ್ರಪಂಚದ (ಜೀವನದ?) ಯುದ್ಧ ಭೂಮಿಯಲ್ಲಿ,
ಬದುಕಿನ ಡೇರೆಯಲ್ಲಿ (bivouac ಎಂದರೆ ಸೈನಿಕರು ಹಾಕುವ ಡೇರೆ ),
ಆಕಳ ಹಾಗೆ ಹೆಡ್ದನಂತೆ ಆಗದೆ 
ಸಮರದಲ್ಲಿ ವೀರನಾಗು”

“ರಾಮ ಮಂದಿರದ ಬಗ್ಗೆ ಮುಸ್ಲಿಮರು ಹಿಂದೂಗಳ ಭಾವನೆಗಳನ್ನು ಗೌರವಿಸಬೇಕು”

r_babri_demolition“ರಾಮ ಮಂದಿರದ ಬಗ್ಗೆ ಮುಸ್ಲಿಮರು ಹಿಂದೂಗಳ ಭಾವನೆಗಳನ್ನು ಗೌರವಿಸಬೇಕು” ಎಂದು ದ್ವಾರಕ ಪೀಠದ ಶಂಕರಾಚಾರ್ಯ ಶ್ರೀ ಸ್ವಾಮಿ ಸ್ವರೂಪಾನಂದ ಸರಸ್ವತಿ ಎಂದು ಮನವಿ ಮಾಡಿಕೊಂಡಿದ್ದಾರೆ ಎಂದು times of india ದಲ್ಲಿ ಸುದ್ದಿ. ಖಂಡಿತ. ವಿವಿಧ ಧರ್ಮಗಳ ಜನ ಬದುಕುತ್ತಿರುವ ಭಾರತದಲ್ಲಿ ಎಲ್ಲರೂ ಧರ್ಮ ಸಹಿಷ್ಣುತೆಯನ್ನು ಮೆರೆಯಬೇಕು. ಅಯೋಧ್ಯೆಯ ವಿವಾದವನ್ನು ಎಲ್ಲರೂ ಕುಳಿತು ದ್ವೇಷದ ಮನಸ್ಥಿತಿ ಬಿಟ್ಟು ಮಾತನಾಡಿದರೆ ಖಂಡಿತ ಅದಕ್ಕೆ ಪರಿಹಾರ ಸಿಗುವ ಸಾಧ್ಯತೆ ಇದೆ. “ಕ್ರೈಸ್ತರಿಗೆ ವ್ಯಾಟಿಕನ್ ಮತ್ತು ಮುಸ್ಲಿಮರಿಗೆ ಪವಿತ್ರ ಮಕ್ಕ ಇರುವಂತೆ ಹಿಂದೂಗಳಿಗೆ ರಾಮ ಜನ್ಮ ಭೂಮಿ ಪವಿತ್ರವಾದುದು” ಎಂದು ಸ್ವಾಮೀಜಿ ಹೇಳಿದರು. ಈ ಸಮಸ್ಯೆಯನ್ನು ಶಾಂತಿಯುತವಾಗಿ ಬಗೆಹರಿಯಬೇಕು ಎಂದೂ ಅವರು ಒತ್ತಿ ಹೇಳಿದರು. ಆದರೆ ರಾಜಕಾರಣಿಗಳ ಕೈಯಲ್ಲಿ ಯಾವುದಾದರೂ ಸಮಸ್ಯೆ ನೀತಿಯುತವಾಗಿ, ಶಾಂತಿಯುತವಾಗಿ ಪರಿಹಾರವಾಗಿದ್ದಿದೆಯೇ? ಮುಸ್ಲಿಮರ ಮನ ಗೆದ್ದು ಮಂದಿರ ಕಟ್ಟುವ ಬದಲು ಕೆಲವು ಸಂಘಟನೆಗಳು ಮನಸ್ಸನ್ನು ಒಡೆಯುವ ಕೆಲಸ ಸೊಗಸಾಗಿ ಮಾಡಿದವು. ಸಾಕಷ್ಟು ರಕ್ತಪಾತವನ್ನೂ ಹರಿಸಿದವು. ಶತಮಾನಗಳಿಂದ ಶಾಂತವಾಗಿ ಬದುಕುತ್ತಿದ್ದ ಜನರ ನಡುವೆ ಹಗೆತನದ ಗೋಡೆ ಕಟ್ಟಿ ನಿಲ್ಲಿಸಿದವು. ಪೂರ್ವ ಪಶಿಮ ಜರ್ಮನಿಗಳ ನಡುವೆ ನಿಂತಿದ್ದ ಬರ್ಲಿನ್ ಗೋಡೆ ಜನರ ಪ್ರೀತಿ, ಒಟ್ಟಿಗೆ ಬಾಳುವ ಅದಮ್ಯ ಆಸೆಯ ಮುಂದೆ ನೆಲ ಕಚ್ಚಿತು. ಆದರೆ ಹಿಂದೂ ಮುಸ್ಲಿಮರ ನಡುವಿನ ದ್ವೇಷದ ಗೋಡೆ? ಆ ಗೋಡೆ ಕರಗಳು ಸಂಘಟನೆಗಳು ಮಾತ್ರವಲ್ ಮಾಧ್ಯಮಗಳೂ ಬಿಡುತ್ತಿಲ್ಲ.

 ದೇವರಿಗೆ ಒಂದು ಮಂದಿರ ಕಟ್ಟಲು ಧರ್ಮ ಗುರುಗಳ ಅವಶ್ಯಕತೆ ಮಾತ್ರ ಇರುವುದು. ಅಲ್ಲಿ ಖಾದಿಗಳು ಬಂದು ತಿಳಿ ನೀರನ್ನು ರಾಡಿ ಎಬ್ಬಿಸುವುದು ಬೇಡ. ಆದರೆ ಈ ನೀತಿಯನ್ನು ಹೇಳುವವರಾದರೂ ಯಾರು? ಅಯೋಧ್ಯೆಯ ಬಗ್ಗೆ ನಿರ್ಭಿಡೆಯಿಂದ ಮಾತನಾಡಿದ ಗುರುಗಳೆಂದರೆ ಶೃಂಗೇರಿಯ ಶಾರದಾ ಪೀಠದ ಶ್ರೀ ಭಾರತಿ ತೀರ್ಥರು. ಸಮಾಜದ ಸಮಸ್ಯೆ ಪರಿಹಾರಕ್ಕೆ ಯಾವ ಧರ್ಮವೂ ರಕ್ತ ಪಾತವಾಗಲು ಅನುಮತಿಸದು,ಸಂಕುಚಿತ ಮತ್ತು ಹಗೆತನದ ಭಾವದಿಂದ ಕೆಲವರು ಈ ಸಮಸ್ಯೆಯನ್ನು ಇನ್ನಷ್ಟು ಜತಿಳಗೊಲಿಸುತ್ತಿದ್ದಾರೆ ಎಂದು ಸ್ವಾಮಿಗಳು ನೊಂದು ನುಡಿದಿದ್ದರು. ದ್ವಾರಕಾ ಪೀಠದ ಸ್ವರೂಪಾನಂದ ಸರಸ್ವತಿಗಳು ಮಸ್ಜಿದ್ ಧ್ವಂಸ ಮಾಡಿದ್ದನ್ನೂ, ವಿಹಿಂಪದ ರಾಜಕೀಯವನ್ನೂ ಟೀಕಿಸಿದ್ದರು.

 ೧೨೦೦ ವರ್ಷಗಳ ಇತಿಹಾಸ ಇರುವ ಚತುರ್ಪೀಠಗಳ  ಶಂಕಾರಾಚಾರ್ಯರು ಮುಸ್ಲಿಂ ಗುರುಗಳೊಂದಿಗೆ ಕುಳಿತು ಮಾತನಾಡಲಿ. ೬೦ – ೭೦ ವರ್ಷಗಳ ಇತಿಹಾಸ ಇರುವ ಸಂಘಟನೆಗಳು ಅವರ ಮಾರ್ಗದರ್ಶನದಲ್ಲಿ ನಡೆಯಲಿ. 

 ಬಾಬ್ರಿ ಮಸ್ಜಿದ್ ಅನ್ನು ಧ್ವಂಸಗೊಳಿಸಿ ವಿಶ್ವದ ಎದುರಿಗೆ ನಾವು ನಮ್ಮ ಜಾತ್ಯಾತೀತ ಮೌಲ್ಯಗಳೊಂದಿಗೆ ನಗ್ನರಾಗಿ  ನಗೆಪಾಟಲಿಗೀಡಾಗಿದ್ದು  ಸಾಕು. ವಿಶಾಲ ಹೃದಯ ಮೆರೆಯಲು ಇದು ಸಕಾಲ. ನೆಲಕ್ಕುರುಳಿದ ಮಸೀದಿ ತಲೆಯೆತ್ತಲು ಸಾಧ್ಯವಿಲ್ಲ. ನಮಾಜ್ ಮಾಡಲು ನಾಲ್ಕು ಗೋಡೆಗಳ ಕಟ್ಟಡವೇ ಬೇಕೆಂದೇನಿಲ್ಲ. ಇಡೀ ವಿಶ್ವವನ್ನೇ ನನ್ನನ್ನು ಆರಾಧಿಸಲು ಹರಡಿ ಇಟ್ಟಿದ್ದೇನೆ ಎಂದು ಕರುಣಾಮಯನೂ  ದಯಾಮಯನೂ ಆದ ಅಲ್ಲಾಹ್ ತನ್ನ ಪವಿತ್ರ ಗ್ರಂಥದಲ್ಲಿ ಹೇಳಿದ್ದಾನೆ. ಹಿಂದೂಗಳು ನಮ್ಮ ಹಿರಿಯ ಸೋದರರು. ಹಿಂದೂ ಅಂದರೆ ಬರೀ RSS, VHP ಮತ್ತು ಇತರೆ ಸಂಘಟನೆಗಳಿಗೆ ಸೇರಿದವರಲ್ಲ. ನಮ್ಮನ್ನು ಎಲ್ಲ ರೀತಿಯಲ್ಲಿ ಬೆಂಬಲಿಸುವ, ಸಹಕರಿಸುವ ಹಿಂದೂಗಳಿಂದ ನಮ್ಮ ಬದುಕು ಸರಾಗವಾಗಿ ನಡೆಯುತ್ತಿದೆ. 

 ಮಸೀದಿಯ ಸ್ಥಳ ತೆರವುಗೊಳಿಸಿ ಅಲ್ಲಿ ಒಂದು ಬೃಹತ್ತಾದ ಕಾಂಬೋಡಿಯಾ ದೇಶದಲ್ಲಿರುವ “ಅಂಗ್ಕೊರ್ ವಾತ್” (Angkor Vat ) ಮಾದರಿಯ ರಾಮ ಮಂದಿರ ನಿರ್ಮಾಣವಾಗಲು ನಾವು ಮುಸ್ಲಿಂ ಸಹೋದರರು ಅನುವು ಮಾಡಿಕೊಟ್ಟು ಹಿಂದೂ ಮುಸ್ಲಿಮರ ಮಧ್ಯೆ ಕಂದಕ ನಿರ್ಮಿಸಲು ಹೊರಟ ಶಕ್ತಿಗಳನ್ನು ಪರಾಭವಗೊಳಿಸೋಣ. ಮತ್ತು ಮುಂದೆ ಇಂಥ ಪರಿಸ್ಥಿತಿ ನಿರ್ಮಾಣವಾಗಲು ಯಾರಿಗೂ ಆಸ್ಪದ ಕೊಡದಿರುವಂತೆ ನಮ್ಮ ಹಿಂದೂ ಸಹೋದರರಲ್ಲಿ ಮನವಿ ಮಾಡಿಕೊಳ್ಳೋಣ.         

 

 

 

ದ್ವೇಷದ ಗಂಟನ್ನು ಬಂಗಾಳ ಕೊಲ್ಲಿಗೆ ಎಸೆದು…

ಮತ್ತೊಂದು ಸುತ್ತಿನ ಚುನಾವಣೆ, ಮಗುದೊಂದು ಸುತ್ತಿನ ಅಚ್ಚರಿ. ಮಹಾರಾಷ್ಟ್ರ, ಅರುಣಾಚಲ ಪ್ರದೇಶ ದಲ್ಲಿ ಕಾಂಗ್ರೆಸ್ಸಿಗೆ ಗೆಲುವು ಮತ್ತು ಹರಿಯಾಣದಲ್ಲಿ ಮುನ್ನಡೆ. ಭಾಜಪಕ್ಕೆ ಮತ್ತದೇ ಪೆಚ್ಚು ಮೋರೆ, ಇಲೆಕ್ಟ್ರಾನಿಕ್ ಮತ ಎಣಿಕೆಯ ಯಂತ್ರಗಳ ಮೇಲೆ ತಗಾದೆ, ಆತ್ಮಾವಲೋಕನ. ಒಂದೇ ಸಮನೆ ಚುನಾವಣೆಗಳನ್ನು ಗೆಲ್ಲುತ್ತಿರುವ ಕಾಂಗ್ರೆಸ್ ಪ್ರಜಾಪ್ರಭುತ್ವಕ್ಕೆ ಮಾರಕವಾಗಬಹುದೇ, ಇದು ಯಕ್ಷ ಪ್ರಶ್ನೆ. ಜನಾದೇಶದ ಮೇಲೆ ಈ ರೀತಿಯ ಹಿಡಿತ ಬಹು ಪಕ್ಷ ರಾಜಕಾರಣಕ್ಕೆ ಮಾರಕವಾಗಬಹುದೇ? ಒಂದೊಮ್ಮೆ ವೆಸ್ಟ್ ಇಂಡೀಸಿನ ಮಾರಕ ಬೌಲಿಂಗಿಗೆ ನಮ್ಮ ವಿಕೆಟುಗಳು ತಪ ತಪನೆ ಉದುರುತ್ತಿದ್ದ ಹಾಗೆ ಭಾಜಪದ ಕೈಗಳಿಂದ ಒಂದೊಂದೇ ರಾಜ್ಯಗಳು ತಪ್ಪಿ ಭಾರತೀಯ ರಾಜಕಾರಣದಿಂದ ಭಾಜಪ ಜಪ್ತಿ ಆಗಬಹುದೇ? ಕಾಂಗ್ರೆಸ್ಸಿನ ಮೇಲೆ ನನಗೆ ವಿಶೇಷವಾದ ಒಲವೇನೂ ಇಲ್ಲದಿದ್ದರೂ ( ಜಸ್ವಂತ್ ಸಿಂಗರ india, pakistan, partition ಪುಸ್ತಕ ಓದಿದ ನಂತರ ) ಭಾಜಪದ ರಾಜನೀತಿ ರಾಜ ಧರ್ಮ ಪಾಲಿಸುವುದರಲ್ಲಿ ತೋರುವ ಅಸಡ್ಡೆ ಆ ಪಕ್ಷ ಹಿನ್ನಡೆ ಅನುಭವಿಸಿದಾಗ ನನ್ನಲ್ಲಿ ಒಂದು ರೀತಿಯ ಪುಳಕ ಎಂದರೂ ಸರಿಯೇ. ದ್ವೇಷ, ರೋಷ, ಹಗೆತನ, ಮತ್ಸರಗಳೇ ಬಂಡವಾಳ ವಾಗಿಟ್ಟುಕೊಂಡು ಭಾರತೀಯ ಮತದಾರನಿಗೆ ಎಷ್ಟು ಸಮಯ ಮೂರ್ಖರನ್ನಾಗಿಸಲು ಸಾಧ್ಯ ಎಂದು ಚಿಂತನ ಭೈಟಕ್ ನಲ್ಲಿ ಚರ್ಚಿಸಬೇಕು. ನಮ್ಮ ಮತದಾರ ಬಡವನಿರಬಹುದು, ನಿರಕ್ಷರಕುಕ್ಷಿ ಇರಬಹುದು, ಹೆಂಡ ಸೀರೆ ರವಿಕೆಗೆ ಮಾರು ಹೋಗಬಹುದು. ಆದರೆ ತನಗೆ ಬೇಕಾದ್ದನ್ನು ಪಡೆದು ಬೇಕಾದ ಪಕ್ಷಕ್ಕೆ ಮಾತ್ರ ಮತ ಕೊಡುವನು. ಇಲ್ಲಿ ನಾವು ethics ನ ಪಾಠ ಹೇಳಿ ಪ್ರಯೋಜನವಿಲ್ಲ. ಎಥಿಕ್ಸ್ ಕುಡಿಕೆ ತುಂಬಾ ಹಣ ಇಟ್ಟುಕೊಂಡು ಕೆಲಸವಿಲ್ಲದೆ ನಡೆಯುವವರಿಗೆ ಮಾತ್ರ. ಯಾವ ಸಮಯ ಯಾವ ರೀತಿ ಮತ ಚಲಾಯಿಸಬೇಕು ಎನ್ನುವ ಕಲೆಯನ್ನು ಮನೋಹರವಾಗಿ ರೂಢಿಸಿಕೊಂಡಿರುವ ನಮ್ಮ ಮತದಾರನ ಮೇಲೆಯೇ ಒಂದು ದೊಡ್ಡ ಗ್ರಂಥ ಬರೆಯಬಹುದು. ಸೋತು ಸೋತು ಕಳೆಯಲು ಬೇಕಷ್ಟು ಸಮಯ ಹೊಂದಿರುವ ಅಡ್ವಾಣಿ ಮತ್ತು ಗೆಳೆಯರು ಈ ಕೆಲಸ ಆರಂಭಿಸಿ ಒಂದಿಷ್ಟು ಪುಡಿಗಾಸನ್ನಾದರೂ ಸಂಪಾದಿಸಬಹುದು. ಭಾರತೀಯ ರಾಜಕಾರಣಕ್ಕೆ ಒಂದು ಹೊಸ ರೂಪ ಕೊಟ್ಟು ಕಾಂಗ್ರೆಸ್ಸಿನ victory march ಗೆ ಬ್ರೇಕ್ ಹಾಕಲು ಭಾಜಪ ಶ್ರಮಿಸಲಿ. ದ್ವೇಷದ ಗಂಟನ್ನು ಬಂಗಾಳ ಕೊಲ್ಲಿಗೆ ಎಸೆದು ಭಾರತದಲ್ಲಿ ಹುಟ್ಟಿದ ಪ್ರತಿಯೊಬ್ಬನಿಗೂ ಮಾನವಾಗಿ, ಸಮಾನತೆಯಿಂದ ಬದುಕುವ ಹಕ್ಕಿನ ಸಾಮಾನ್ಯ ಜ್ಞಾನವನ್ನು ಮನಗಂಡು, ಕಾರ್ಯರೂಪಕ್ಕೆ ತರುವಲ್ಲಿ ಭಾಜಪ ಶ್ರಮಿಸಿದರೆ ಚುನಾವಣೆ ಗೆಲ್ಲಲು ಕಾಲ ಇನ್ನೂ ಮಿಂಚಿಲ್ಲ ಎನ್ನಬಹುದು.

ಪ್ರತಿ ಭಾನುವಾರ ನೀಡಿ ಉತ್ತರ, ಪ್ರಶ್ನೆಗಳಿಗೆ

ಆಧುನಿಕ ಬದುಕಿನ ಹುಚ್ಚು ಓಟ ಕೆಲವೊಮ್ಮೆ ನಿಜವಾದ ಅರ್ಥವನ್ನು ಕಂಡುಕೊಳ್ಳುವುದಕ್ಕೆ ಆಸ್ಪದ ನೀಡುವುದಿಲ್ಲ. ಹೇಗೆ ಸಾಧ್ಯ ಹೇಳಿ, ಸಮಯವೇ ಸಿಗುವುದಿಲ್ಲವಲ್ಲ. ಎಷ್ಟೋ ಸಲ ಸಮಯ ಬರೀ ಮನೆಯಿಂದ ಕೆಲಸಕ್ಕೆ, ಕೆಲಸದಿಂದ ಮನೆಗೆ ಮರುಳುವುದರಲ್ಲೇ ಕಳೆದುಹೋಗುತ್ತದೆ. ಈ ಜಂಜಾಟದಲ್ಲಿ ನಮ್ಮ ಗುರಿಗಳು ನಮ್ಮ ಕಣ್ಣಿಂದ ಮರೆಯಾಗಿ ಗೋಲ್ ಪೋಸ್ಟ್ ಇಲ್ಲದ ಮೈದನಾದಲ್ಲಿ ದಿಕ್ಕೆಟ್ಟ ಚೆಂಡು ಅಲೆಯುವಂತೆ ನಮ್ಮ ಗುರಿಗಳು ಸಾಕಾರ ಕಾಣದೆ ಹೋಗುತ್ತವೆ. ಹಾಗಾದರೆ ಇದಕ್ಕೆ ಪರಿಹಾರ ಇಲ್ಲವೇ? ಇದೆ, ಖಂಡಿತ ಇದೆ ಪರಿಹಾರ. ನನ್ನದಲ್ ಎಂದು ಸ್ವಲ್ಪ ಸಮಯ ಬದಿಗಿಟ್ಟು ನಮ್ಮ ದಿನಚರಿಯ “stock taking” ತೆಗೆದುಕೊಳ್ಳುವುದು. marcandangel ವೆಬ್ ತಾಣದಲ್ಲಿ ೨೦ ಪ್ರಶ್ನೆಗಳಿವೆ ಪ್ರತಿ ಭಾನುವಾರ ಉತ್ತರಿಸಲು. ನಮಗೆ ತೋಚಿದ್ದನ್ನು ಆರಿಸಿಕೊಂಡು, ಬೇಕಿದ್ದರೆ ಮತ್ತಷ್ಟನ್ನು ಸೇರಿಸಿಕೊಂಡು ಉತ್ತರಿಸುವ, ಮತ್ತು ಪ್ರಶ್ನೆಗಳನ್ನು ಕಾರ್ಯರೂಪಕ್ಕೆ ತರುವ ಪ್ರಯತ್ನ ಮಾಡಿದರೆ ಖಾಸಗಿ ಮತ್ತು ವ್ರುತ್ತಿಮಯ ಜೀವನದಲ್ಲಿ ಯಶಸ್ಸನ್ನು ಕಾಣಬಹುದು. ೧. ಕಳೆದ ವಾರದಲ್ಲಿ ನಾನು ಕಲಿತದ್ದೇನು? ಕ್ಲಿಷ್ಟಕರವಾದರೂ ಇದು ನಿಮ್ಮ ಪ್ರಶ್ನೆಯೇ ಆದ್ದರಿಂದ ಮುಜುಗುರ ಬೇಡ. ೨. ಕಳೆದ ವಾರದ ನನ್ನ ಸಾಧನೆ. ಹಿಮಾಲಯ ಹತ್ತಿರಬೇಕೆನ್ದೇನೂ ಇಲ್ಲ. ಎಂಥ ಚಿಕ್ಕ ಸಾಧನೆಯೂ ಸಾಧನೆಯೇ. ೩. ನಿಮ್ಮ ಅವಿಸ್ಮರಣೀಯ ದಿನ. ಏನಿರಬಹುದು, ಯೋಚಿಸಿ. ಒಂದಲ್ಲ ಒಂದು ಖಂಡಿತ ಇದ್ದೆ ಇರುತ್ತದೆ. ೪. ಯಾರಿಗಾದರೂ ಸಹಾಯ ಮಾಡಿದ್ದೆನೆಯೇ? ೫. ಮುಂದಿನ ಮೂರು ವರ್ಷಗಳಿಗೆ ನನ್ನ ಗುರಿಗಳೇನು? ಹೊಸ ಪದವಿ, MBA? ೬. ನನ್ನ ಭಯ, ಅಡಚಣೆಗಳೇನು? ೭. ನನ್ನ ಬದುಕು ಇನ್ನು ಒಂದೇ ವಾರದಲ್ಲಿ ಮುಗಿಯುವುದಿದ್ದರೆ ನಾನೇನು ಮಾಡಬಲ್ಲೆ? ಹೀಗೆ ಹತ್ತು ಹಲವು ಪ್ರಶ್ನೆಗಳನ್ನು ಕೇಳಿ, ಪ್ರಾಮಾಣಿಕವಾಗಿ ಉತ್ತರಿಸಿ. ಈ ಉತ್ತರ ಅಥವಾ ಪ್ರಶ್ನೆಗಳನ್ನು ನಿಮ್ಮ ಅತ್ತೆ ಅಥವಾ ಮಡದಿ (ಕುಹಕದ ಭಯವಿದ್ದರೆ ) ಕಾಣುವಂತೆ ಇಡುವ ಅಗತ್ಯವಿಲ್ಲ. ನೆನಪಿಡಿ, ಸಾಧಿಸಲು MBA ಆಗಿರಬಹುದು, ಕಂಪ್ಯೂಟರ್ ಕಲಿಯುವುದೇ ಆಗಿರಬಹುದು ಮನಸ್ಸಿದ್ದರೆ ಖಂಡಿತ ಇದೆ ಮಾರ್ಗ.

MARSHAL LAW IN KANPUR

ರಾಜನ್ ಬಾಲ ಅವರ ಅಕಾಲಿಕ ಮರಣ ಕ್ರಿಕೆಟ್ ಪ್ರೇಮಿಗಳಿಗೆ ದುಃಖಕರ ಸುದ್ದಿ. ಕ್ರಿಕೆಟ್ನಷ್ಟೇ  ಮನೋಹರ ಅವರ ವರ್ಣನಾ ಶೈಲಿ. ಡೆಕ್ಕನ್ ಹೆರಾಲ್ಡ್ ಪತ್ರಿಕೆಗೆ ಬರೆಯುತ್ತಿದ್ದ ಅವರು ಕ್ರಿಕೆಟ್ ಆಟವನ್ನು ಮನೋಜ್ಞವಾಗಿ ವರ್ಣಿಸಿ ನಮ್ಮನ್ನು ರಂಜಿಸುತ್ತಿದ್ದರು. ಭಾರತ ೧೯೮೩ ರ prudential world cup ಗೆದ್ದ ಹೊಸತು. ಕ್ರಿಕೆಟ್ ವಿಶ್ವವೇ ದಿಗ್ಭ್ರಾಂತವಾಗಿಸಿದ ಗೆಲುವು ಭಾರತದ್ದು. ಫೈನಲ್ ಪಂದ್ಯದಲ್ಲಿ ಬಲಿಷ್ಟ ವೆಸ್ಟ್ ಇಂಡೀಸ್ ತಂಡವನ್ನು ೪೩ ರನ್ನುಗಳಿಂದ ಸೋಲಿಸಿದ ಭಾರತ ಹೊಸ world champion. ಈ ಸೋಲಿನಿಂದ ಕಂಗೆಟ್ಟ ವೆಸ್ಟ್ ಇಂಡೀಸ್ ಭಾರತಕ್ಕೆ ತಕ್ಕ ಪಾಠ ಕಲಿಸಲು ಭಾರತ ಪ್ರಯಾಣ ಮಾಡಿ ೬ ಟೆಸ್ಟ್ ಮತ್ತು ೬ ಏಕ ದಿನ ಪಂದ್ಯಗಳಲ್ಲಿ ಭಾರತವನ್ನು ಹಿಗ್ಗಾ ಮುಗ್ಗಾ ಬಡಿದು ತೃಪ್ತಿ ಪಟ್ಟುಕೊಂಡಿತು. ಈ ಸರಣಿಯ ಪ್ರಥಮ ಟೆಸ್ಟ್ ಪಂದ್ಯ ಕಾನ್ಪುರದಲ್ಲಿ. ವೆಸ್ಟ್ ಇಂಡೀಸ್ ನ ಮಾರಕ ವೇಗಿ ಮಾಲ್ಕಂ ಮಾರ್ಷಲ್ ಚೊಚ್ಚಲ ಓವರಿನ ೨ ಚೆಂಡುಗಳಲ್ಲಿ ಭಾರತದ ದಾಂಡಿಗರನ್ನು ಉರುಳಿಸಿ ಭಾರತ ಚೇತರಿಸಿಕೊಳ್ಳದಂತೆ ಮಾಡಿದರು. ದಿನದ ಆಟ ಮುಗಿದಾಗ ಭಾರತದ ಸ್ಥಿತಿ ಶೋಚನೀಯ. ಮಾರನೆ ದಿನ ಡೆಕ್ಕನ್ ಹೆರಾಲ್ಡ್ ಪತ್ರಿಕೆಯಲ್ಲಿ  ರಾಜನ್ ಬಾಲ ಮಾರ್ಷಲ್ ಅವರ ಬೌಲಿಂಗ್ ಬಣ್ಣಿಸಿದ್ದು ಹೀಗೆ:

MARSHAL LAW IN KANPUR

ಈ ವರದಿ ಬರೆದು ೨೬ ವರ್ಷಗಳು ಸಂದರೂ ರಾಜನ್ ಬಾಲ ಎಂದ ಕೂಡಲೇ MARSHAL LAW ನೆನಪಾಗುತ್ತದೆ.     

ಗೋರಿಬರಹ

ಜೇಡ ಹೇಳಿಕೊಳ್ಳುವಂಥ ರೂಪವಂತನಲ್ಲದಿದ್ದರೂ ಅವನ (ಅವಳ?) ತಾಣಗಳು (website) “amazing” ಎಂದು ಕರೆಸಿಕೊಳ್ಳುವಷ್ಟು ವಿಸ್ಮಯಕಾರಕ. ಕನ್ನಡ ಭಾಷೆ ಸಂಸ್ಕೃತಿಯ ಸೇವೆಯಲ್ಲಿ ಒಂದೆರಡು ವೆಬ್ತಾಣಗಳು ಮನ ಸೆಳೆದಿದ್ದವು. ಅವುಗಳಲ್ಲಿ ಒಂದು (ಕೆಂಡಸಂಪಿಗೆ) ಮುದುಡಿಕೊಂಡಿತು ಮತ್ತೊಂದು (ಸಂಪದ) ತನ್ನ ಮನೆ ರಿಪೇರಿಗೆ ಎಂದು ಚಾಲ್ತಿಯಲ್ಲಿ ಇಲ್ಲ. ನಮ್ಮ ಭಾಷೆಯ ಬಗ್ಗೆ ನಮಗಿರುವ ಕಾಳಜಿ ಅಭಿಮಾನ ಇವುಗಳ ಕೊರತೆ ಕಾರಣವಿರಬಹುದೆ ಈ ತಾಣಗಳು ಎಡರು ತೊಡರುಗಳನ್ನು ಅನುಭವಿಸಲು ತೊಡಗಿದ್ದು? ಕೆಂಡಸಂಪಿಗೆ ಲಭ್ಯವಿಲ್ಲದ್ದಕ್ಕೆ ಯಾವುದೇ ಕಾರಣಗಳನ್ನು ಕೊಡಲಾಗಿಲ್ಲ. ಶುರುವಾದ ಒಂದೆರಡು ವರ್ಷಗಳಲ್ಲೇ ಈ ಉತ್ಸಾಹಿ ಸಾಹಿತ್ಯ ಪ್ರೇಮಿಗಳ ಯತ್ನದಿಂದ ಆರಂಭವಾದ ತಾಣಗಳು ಮುಚ್ಚಿ ಹೋದರೆ ಅತ್ಯಂತ ಖೇದಕರ ವಿದ್ಯಮಾನ ಎನ್ನಬಹುದು. ಇಷ್ಟೊಂದು ಸಮೃದ್ಧ ಭಾಷೆ ಕನ್ನಡ ಮತ್ತಷ್ಟು ಶ್ರೀಮಂತಗೊಂಡು  ರಾರಾಜಿಸಲು ಮತ್ತು ಹೊಸ ತಲೆಮಾರಿನ net savvy ಸಮೂಹ ಸಾಹಿತ್ಯಾಭಿರುಚಿ ಬೆಳೆಸಿಕೊಂಡು ತಾವೂ ಬೆಳೆಯುವ ಹಾಗೆ ಮಾಡುವತ್ತ ಸಹಕರಿಸುತ್ತಿದ್ದ ವೆಬ್ತಾಣಗಳು epitaph (ಗೋರಿಬರಹ) ಬರಹ ಹೊತ್ತು ನಮ್ಮೆಡೆಯಿಂದ   ಕಣ್ಮರೆಯಾಗಬಾರದು.