ಮುಂಬೈಯಲ್ಲಿ ಪಾಕಿಗಳು ನಡೆಸಿದ ನರಸಂಹಾರ

ಮುಂಬೈಯಲ್ಲಿ ಪಾಕಿಗಳು ನಡೆಸಿದ ನರಸಂಹಾರ ಈ ದೇಶದ ವಿರುದ್ಧ ಸಾರಿದ ಯುದ್ಧ. ನಮ್ಮ ಪ್ರತಿಷ್ಠೆ, ಗೌರವ ಹಾಗೂ ಸ್ವಾಭಿಮಾನವನೆಲ್ಲ ಈ ಒಂದು ಘಟನೆ ಮಣ್ಣು ಪಾಲು ಮಾಡಿ ಬಿಟ್ಟಿತು. ದಕ್ಷ ಅಧಿಕಾರಿ ಹೇಮಂತ್ ಕರ್ಕರೆ, ಅನಾಥವಾದ ಆ ಯಹೂದಿ ಹಸುಳೆ ಮತ್ತು ೨ ವರ್ಷದ ಆಮಿನ; ಇವರ ಮುಖಗಳು ಕಣ್ಣಿನಿಂದ ಮರೆಯಾಗುತ್ತಿಲ್ಲ. ಈ ಕೃತ್ಯ ಎಸಗಿದ ಪಿಪಾಸುಗಳಿಗೆ ದೇವರು ಅದ್ಯಾವ ಶಿಕ್ಷೆ ಇಟ್ಟಿದ್ದಾನೋ?

ಆದರೆ ಈ ಮಹಾ ದುರಂತ ಹಾಗೇ ನಮ್ಮ ನೆನಪಿನಿಂದ ಮರೆಯಾಗಲು ಬಿಡಕೂಡದು. update-gallery1

ನಾವೀಗ ಮಾಡಬೇಕಾದದ್ದಿಷ್ಟೇ. ಶತ್ರು ಪಾಕಿಸ್ತಾನದ ಹಿಡಿತದಲ್ಲಿರೋ ಕಾಶ್ಮೀರವನ್ನು ಆಕ್ರಮಿಸಿ ಹಿಂದಕ್ಕೆ ಪಡೆದು ಶತ್ರು ರಾಷ್ಟ್ರದ ೨೫ ಕಿಲೋಮೀಟರು ಪ್ರದೇಶವನ್ನು buffer zone ಆಗಿ ಘೋಷಿಸಿ ಇನ್ನು ಮುಂದೆ ಒಂದೇ ಒಂದು ಪಾಕಿ ಹುಳು ಸಹ ನಮ್ಮ ಗಡಿಯೊಳಗೆ ನುಗ್ಗದಂತೆ ಮಾಡಬೇಕು.

ಪಾಕ್ ವಿದ್ಯಾರ್ಥಿಗಳಿಗೆ ವೀಸಾ ಕೊಡಬಾರದು,

ಪಾಕ್ ರೋಗಿಗಳಿಗೆ ಭಾರತಕ್ಕೆ ಚಿಕಿತ್ಸೆಗಾಗಿ ಬರಲು ಅನುಮತಿ ಕೊಡಬಾರದು,

ಪಾಕ್ನೊಂದಿಗೆ ಯಾವ ವ್ಯಾಪಾರ ಸಂಬಂಧವೂ ಇರಕೂಡದು.

ಆದರೆ ಇದನ್ನೆಲ್ಲಾ ಈ ನಿರ್ವೀರ್ಯ ಸರಕಾರದಿಂದ ನಾವು ನಿರೀಕ್ಷಿಸಲು ಸಾಧ್ಯವೇ?

ಕೊನೆಯದಾಗಿ, ನಾವೆಲ್ಲ ಭಾರತೀಯರು ಒಂದಾಗಬೇಕು. ಜಾತಿ, ಮತ, ಭಾಷೆ, ಪ್ರದೇಶಗಳ ಹೆಸರಿನಲ್ಲಿ ಕಚ್ಚಾಡುವುದನ್ನು ಮೊದಲು ನಿಲ್ಲಿಸಬೇಕು. ಹಿಂದೂ ಹಾರಿಸಿದ ಗಾಳಿಪಟ ನನ್ನ ಹೆಂಚಿನ ಮೇಲೆ ಬಿತ್ತು ಎಂದು ಮುಸಲ್ಮಾನರು ಹಿಂದೂಗಳ ಕೊರಳು ಪಟ್ಟಿ ಹಿಡಿಯುವುದೋ, ನಮ್ಮ ಹುಡುಗಿಯನ್ನ ಚುಡಾಯಿಸಿದ ಅಂತ ಹಿಂದೂಗಳು ಮುಸಲ್ಮಾನರ ಬದುಕು ನರಕ ಮಾಡುವುದೋ ನಿಲ್ಲಬೇಕು. ನಮ್ಮಲ್ಲಿನ ಇಂಥ ಸಣ್ಣ, ಸಣ್ಣ ಒಡಕುಗಳನ್ನು ಉಪಯೋಗಿಸಿ ಪಾಕಿ ಪಾತಕಿಗಳು ದೊಡ್ಡ, ದೊಡ್ಡ ಹುನ್ನಾರಗಳನ್ನು ಈ ದೇಶದ ವಿರುದ್ಧ ಮಾಡುತ್ತಿದ್ದಾರೆ.  

ಬನ್ನಿ, ನಾವೆಲ್ಲ ಒಂದಾಗೋಣ. ಒಂದು ಮುಂಬೈ ಅಲ್ಲ ಇನ್ನು ನೂರು ಮುಂಬೈ ರೀತಿಯ ಅನಾಹುತವಾದರೂ ಈ ಮಹಾನ್ ದೇಶವನ್ನು ಅಳಿಸಲು ಯಾರಿಂದಲೂ ಸಾಧ್ಯವಿಲ್ಲ.

ಮೇರ ಭಾರತ್ ಮಹಾನ್, ಎಂದಿಗೂ ಮಹಾನ್ ಆಗೇ ಇರಲಿ.

ಜೈ ಹಿಂದ್!!!

Advertisements

jam baby, jam

accolade300The AccoLade ಎನ್ನೋ ರಾಕ್ ಬ್ಯಾಂಡ್ ಈಗ ಹೆಚ್ಚು ಸುದ್ದಿಯಲ್ಲಿದೆ. ಇದರಲ್ಲೆನಪ್ಪ ವಿಶೇಷತೆ ಎಂದು ನೀವು ಕೇಳಬಹುದು, ಇದು ಒಂದು ಬರೇ ಯುವತಿಯರ ಬ್ಯಾಂಡ್, ಇದರಲ್ಲೂ ವಿಶೇಷತೆ ಇಲ್ಲ ಎನ್ನಿ. ವಿಶ್ವದಾದ್ಯಂತ ಹರಡಿವೆ ಇಂಥ all girls bandಗಳು. ಈಗ fact of the matter ಗೆ ಬರೋಣ.

The AccoLade ಹೆಸರಿನ ಈ ಯುವತಿಯರ ಬ್ಯಾಂಡ್ ಇರುವುದು ಕಟ್ಟಾ ಸಂಪ್ರದಾಯವಾದಿ ರಾಷ್ಟ್ರವಾದ ಸೌದಿ ಅರೇಬಿಯದಲ್ಲಿ. ಓಹ್ ನಿಜವೇನ, ಇಲ್ಲ ತಲೆ ಗಿಲೆ ಕೆಟ್ಟಿದೆಯೋ ಎಂದು ಕೇಳಬೇಡಿ. ಸೌದಿ ಅರೇಬಿಯಾದ ಮಹಾನಗರ ಜೆಡ್ಡಾದಲ್ಲಿರುವ ಯುವತಿಯರು ಇದನ್ನು ಪ್ರಾರಂಭಿಸಿದ್ದು ಹಗಲಿನಲ್ಲಿ university ಸಂಜೆಯಾದ ಕೂಡಲೇ jam baby ಜಾಮ್ ಎಂದು ಡ್ರಮ್ ಬಾರಿಸುತ್ತಾರೆ. ಈಗಾಗಲೇ ತಮ್ಮ ಹಾಡುಗಳನ್ನು facebook, myspace ಸೈಟ್ಗಳಲ್ಲಿ ಹಾಕಿರೋ ಈ ತರುಣಿಯರು ಹಲವು ದೇಶಗಳಿಂದ ಕೇಳುಗರನ್ನು ಆಕರ್ಷಿಸುತ್ತಿದ್ದಾರೆ. 

ಮಹಿಳೆಯರಿಗೆ ಡ್ರೈವಿಂಗ್ ಸಹ ನಿಷಿದ್ಧವಾದ ಈ ದೇಶದಲ್ಲಿ ಹೀಗೆ ಚಳಿ, ಭಯ ಬಿಟ್ಟು rock band ಆರಂಭಿಸಿರೋ ಲಲನಾಮಣಿಗಳಿಗೆ ಶುಭ ಕೋರೋಣವೇ?