v a r i a

 
 
 

  

 

varia (ವೆರೀಯ) ಅಂದರೆ ಸಾಹಿತ್ಯಕ್ಕೆ ಸಂಬಂಧಿಸಿದ ತುಣುಕುಗಳು ಅಥವಾ ಚೂರು ಪಾರು (A miscellany, especially of literary works).  ಸಮಯ ಸಿಕ್ಕಾಗ merriam webster’s ನಿಘಂಟನ್ನು ತೆರೆದು ಕೂತರೆ ಸ್ವಾರಸ್ಯಕರ ಪದಗಳು ಸಿಗುತ್ತವೆ.   
__________________________________________________________________________________________________

  

ಅಮೆರಿಕೆಯ ಆಗರ್ಭ ಶ್ರೀಮಂತ ನಿಕೊಲಸ್ ಬರ್ಗ್ರೆವಿನ್ ಎಲ್ಲ ಧನವಂತರ ಹಾಗೆ ಧನಪಿಶಾಚಿ ಅಲ್ಲ. ಈತ ಒಬ್ಬ ಮಹಾ ಸಾತ್ವಿಕ.  ತನ್ನ ಧನದ ಮದದಿಂದ ಓಲಾಡದೇ ಬಡವರಿಗೆ ದಾನ ಮಾಡುವ, ಕಾಳಜಿ ಇರುವ ಶ್ರೀಮಂತ. quotes32 

ಕಾಂಬೋಡಿಯದಲ್ಲಿ ಕೃಷಿಕರಿಗೆ ಸಹಾಯ ಮತ್ತು ಬಡ ರಾಷ್ಟ್ರಗಳಲ್ಲಿ ಗಗನಚುಂಬಿ ಕಟ್ಟಡಗಳ ನಿರ್ಮಾಣ ಹೀಗೆ ಹತ್ತು ಹಲವು ದಾರಿದ್ರ್ಯ ನಿವಾರಣಾ ಚಟುವಟಿಕೆಗಳಲ್ಲಿ ತಮ್ಮನ್ನು ತೊಡಗಿಸಿಕೊಂಡಿರುವ ನಿಕೊಲಸ್ ಇತರ ಧನವಂತರಿಗೆ ಮಾದರಿಯಾಗಿದ್ದಾರೆ. 

ಷೇರುಮಾರುಕಟ್ಟೆಯಲ್ಲಿ ಅಗಾಧವಾಗಿ ಸಂಪಾದಿಸಿದ ನಿಕೊಲಸ್ ಹಣದೊಂದಿಗೆ ಬರುವ ಎಲ್ಲಾ ಸೌಕರ್ಯಗಳನ್ನೂ ಪಡೆದರು. ಫ್ಲೋರಿಡಾದ ಖಾಸಗಿ ದ್ವೀಪವೊಂದರಲ್ಲಿ ಬಂಗಲೆ, ನ್ಯೂಯಾರ್ಕಿನಲ್ಲಿ ಅತಿ ದುಬಾರಿ ಮನೆ, ಇವೆಲ್ಲವನ್ನೂ ಮಾರಿ ಹೋಟೆಲ್ನಲ್ಲಿ ಬಾಡಿಗೆಗಿದ್ದು ತಮ್ಮ ಸಂಪತ್ತನ್ನು ಬಡವರ ಏಳಿಗೆಗಾಗಿ ಇಟ್ಟಿದ್ದಾರೆ ನಿಕೊಲಸ್.    

ಥಳಕು ಬೆಳಕಿನ ಜೀವನ ಮತ್ತು ಜನರಿಗೆ ಪ್ರದರ್ಶಿಸುವ ತೋರಿಕೆಯ ಬದುಕು ಶೂನ್ಯ, ನನ್ನ ಹತ್ತಿರ ಇರುವುದೆಲ್ಲವೂ ಕ್ಷಣಿಕ, ನಾವೀ ಜಗತ್ತಿನಲ್ಲಿರುವುದು ಅಲ್ಪ ಸಮಯ ಮಾತ್ರ. ಶಾಶ್ವತವಾಗಿ ನಿಲ್ಲುವ ನಮ್ಮ ನಡವಳಿಕೆಗಳೇ ನಿಜವಾದ ಮೌಲ್ಯ” ಇವು ನಿಕೊಲಸ್ ಅವರ ನುಡಿಮುತ್ತುಗಳು.    

ಪ್ರಚಾರಗಳಿಂದ ಯಾವಾಗಲೂ ದೂರವಿರುವ ಈ ಯುವ ಶ್ರೀಮಂತ ಅನೇಕರಿಗೆ ದೊಡ್ಡ ಒಗಟು. ಕೆಲ ವರ್ಷಗಳ ಹಿಂದೆ ಡಚ್ ಪತ್ರಿಕೆಯೊಂದು ಅವರ ಬಗ್ಗೆ  ಬರೆದಾಗ ಪತ್ರಿಕೆಯ ಎಲ್ಲ ಪ್ರತಿಗಳನು ಖರೀದಿಸಿ ಬಿಸಾಕಿದರು. 

ನಮ್ಮಲ್ಲಿನ ಶ್ರೀಮಂತರಾದ ಅಂಬಾನಿಯಂಥವರು, ಮೈಮಾಟ ಪ್ರದರ್ಶಿಸಿ ಹಣಗಳಿಸುವ ಬಾಲಿವುಡ್ನ ನರ್ತಕ ನರ್ತಕಿಯರು ಮತ್ತು ಇತರ ಹಣವಂತರು ನಿಕೊಲಸ್ ಬರ್ಗ್ರೆವಿನ್ ಅವರಿಂದ ಕಲಿಯಲು ಬಹಳಷ್ಟಿದೆ.     

ಈಗಿನ ಕಾಲದ ಹಣವಂತರ ಅಹಂಕಾರ, ಧಿಮಾಕನ್ನು ಕಂಡ ನಮಗೆ ನಿಕೊಲಸ್ ಒಂದು ಕಾರಂಜಿ ಇದ್ದಂತೆ. ಒಂದು ಆಹ್ಲಾದಕರ ತಂಗಾಳಿ. 

___________________________________________________________________________________________ 

 

 

 quote-compassion 

ವಿವಿಧ ರೀತಿಯ ಸ್ಯಾಂಡ್ವಿಚ್ ತಿಂದು ಪರಿಚಯ ಇರುವ ನಿಮಗೆ mother-in-law sandwich ಬಗ್ಗೆ ಗೊತ್ತಾ? ಅಮೆರಿಕೆಯ ಶಿಕಾಗೋ ನಗರದಲ್ಲಿ ಮಾರಲ್ಪಡುವ ಈ ಜನಪ್ರಿಯ ತಿನಿಸು ಅತ್ತೆ ಯ ಹೆಸರಿನೊಂದಿಗೆ ಕರೆಯಲ್ಪಡುತ್ತಿರುವುದು ಸೋಜಿಗದ ಸಂಗತಿ.  

ಮಾಂಸದ ಬದಲು ಬನ್ನಿನೊಳಗೆ ಮೆಕ್ಸಿಕೋ ಶೈಲಿಯ ಟಮಾಲೀ (tamale) ಖಾದ್ಯ ಪದಾರ್ಥ ಹಾಕಿ ಮಾರಲ್ಪಡುವ ಈ ಖಾದ್ಯ sells like hot cake. ಈ ತಿನಿಸನ್ನು mother-in-law sandwich ಎಂದು ಏಕೆ ಕರೆಯುತ್ತಾರೆ ಎಂದು ಯಾರಿಗೂ ಗೊತ್ತಿಲ್ಲದಿದ್ದರೂ ಬಿಸಿ ಬೆಣ್ಣೆ ಕಾಲಿಯಂತೆ ವ್ಯಾಪಾರವಾಗುವ ಈ ತಿಂಡಿ ಶಿಕಾಗೋ ಜನರ ಫೇವರಿಟ್. ಅಂತೂ busy busy ಬದುಕಿನಲ್ಲೂ ಅತ್ತೆಗೊಂದು ಕಾಲ . 

 

 

__________________________________________________________________________________

ನಾನೂ ಬರೆಯಬೇಕು

 

 quotes-sayings-21 

ಬರೆಯಬೇಕು ಎನ್ನೋ ಆಸೆ ಬಹು ದಿನಗಳದು. ಆದರೆ ಬರೆಯುವುದಾದರೂ ಏನನ್ನು? ಈ ವಿಚಾರ ಬಂದಾಗ ಬರೆಯಲು ತಯಾರಾದ ಲೇಖನಿ ನಿರಾಶೆಯಿಂದ ನಿಟ್ಟುಸಿರು ಬಿಟ್ಟು ಕನಿಕರದಿಂದ ನನ್ನೆಡೆ ನೋಡುತ್ತದೆ.  

ಒಳ್ಳೆಯ ಲೇಖನ, ಕವಿತೆ, ಪ್ರಬಂಧ ಇವುಗಳನ್ನು ಓದಿದಾಗ ನನಗೂ ಬರೆಯಬೇಕು ಅನ್ನಿಸುತ್ತಿತ್ತು. ವಿಷಯಗಳು, ವಿಚಾರಗಳು ಕೆಲವೊಮ್ಮೆ ಹೊಳೆಯುತ್ತಿದ್ದರೂ ಅಕ್ಷರಗಳ ರೂಪದಲ್ಲಿ ಸಾಕಾರಗೊಳ್ಳುತ್ತಿರಲಿಲ್ಲ. 
ವಿಶೇಷವಾಗಿ ಬಾತ್ರೂಂನಲ್ಲೂ, ಷವರ್ ಕೆಳಗೆ ನಿಂತಾಗಲೂ ಒಮ್ಮಿಂದೊಮ್ಮೆಗೆ ಹೊಸ ಹೊಸ ಸಂಗತಿಗಳು ಗೋಚರವಾಗುತ್ತವೆ. ಕೆಲವೊಮ್ಮೆ ರಾತ್ರಿಗಳಿಗೆಯಲ್ಲಿ ನಿದ್ದೆ ಬಾರದೆ ಮಗ್ಗುಲು ಬದಲಾಯಿಸುತ್ತಲೋ, ಸಹನೆಯನ್ನು ಪರೀಕ್ಷೆಗೊಡ್ಡುವ ಸೊಳ್ಳೆಗಳೊಂದಿಗಿನ ಎನ್ಕೌಂಟರ್ ಸಮಯದಲ್ಲೋ ನುಗ್ಗಿ ಬರುತ್ತವೆ ವಿಚಾರಗಳು.  

ಈಗಂತೂ ಯಾವ ವಿಷಯದ ಬಗೆಗೂ ತಿಳಿಯಬೇಕಾದರೆ ಗ್ರಂಥಾಲಯಕ್ಕೆ ಓಡುವುದು ಬೇಡವಲ್ಲ. ಕೈಗೆಟುಕುವ ಹಾಗೆ ಕಂಪ್ಯೂಟರ್ ಹಾಗೂ ಇಂಟರ್ನೆಟ್ ಕನೆಕ್ಷನ್ ಇದ್ದರೆ ಪ್ರಪಂಚ ನಿಮ್ಮ ಕೀಬೋರ್ಡ್ ಮೇಲೆ ಕುಣಿಯುತ್ತಿರುತ್ತದೆ. ಸರಿ, ಬರವಣಿಗೆ ಬಗ್ಗೆ, ಬರೆಯುವುದು ಹೇಗೆ ಎಂಬುದನ್ನು ಗೂಗಲ್ ಸರ್ಚ್ ಎಂತ್ರಕ್ಕೆ ಬಿಸಾಕಿದಾಗ ತೆರೆದವು ಲಕ್ಷಗಟ್ಟಲೆ ಪುಟಗಳು. ಈಗ ಹೆಕ್ಕಿ ತೆಗೆಯಬೇಕು, ಏನು ಬೇಡ, ಏನು ಬೇಕು, ಯಾವುದು ಕಷ್ಟ, ಯಾವುದು ಅಸಂಬದ್ಧ ಎನ್ನುವುದನ್ನು.  

ನನಗೆ ಸಿಕ್ಕ ಕೆಲವು ಮಾಹಿತಿಗಳನ್ನು ಇಲ್ಲಿ ಬರೆದಿದ್ದೇನೆ.  

ಪ್ರಥಮವಾಗಿ, ಬರೆಯಬೇಕು ಎನ್ನೋ ಅದಮ್ಯ ಆಸೆ ಇರಬೇಕು  

ಏನಪ್ಪಾ ಬರೆಯೋದು ಅನ್ನೋ ವಿಚಾರ ತಲೆಗೆ ಬರಕೂಡದು,  

ನಿಮಗೆ ಅಕ್ಷರಗಳನ್ನು ಹೆಣೆದು ಪದ ಬಿಡಿಸಲು ಬಂದರೆ ನೀವು ಬರೆಯಬಹುದು,  

ಶಾಂತವಾದ, ಓದಲು, ಬರೆಯಲರ್ಹವಾದ ಸ್ಥಳ ಆಯ್ದುಕೊಳ್ಳಬೇಕು,  

ಬರೆಯುವುದು ತಪ್ಪಾಗಿಬಿಟ್ರೆ ಎನ್ನೋ ಪಾಪ ಭಾವನೆಯನ್ನು ಒದ್ದೋಡಿಸಬೇಕು. ನೀವು ಈಗಾಗಲೇ  booker prize ಗಾಗಿ ಬರೆಯುತ್ತಿಲ್ಲ ಎನ್ನೋದನ್ನು ನೆನಪಿನಲ್ಲಿಡಬೇಕು,  

ನಿಮ್ಮನ್ನು ನಿರುತ್ತೇಜಿಸುವ ಜೀವಿಗಳಿಂದ ತಿಗಣೆಯಿಂದ ತಪ್ಪಿಸಿಕೊಳ್ಳುವ ಥರ ತಪ್ಪಿಸಿಕೊಳ್ಳಬೇಕು. ನಮ್ಮ ಸಮಾಜದಲ್ಲಿ ಇಂಥ ತಿಗಣೆಗಳ ಅಭಾವವೇನೂ ಇಲ್ಲವಲ್ಲ. ತನ್ನಿಂದ ಆಗದಿದ್ದರೂ ಮತ್ತೊಬ್ಬನೂ  ಮಾಡಬಾರದು ಎನ್ನೋ ಸಮಾನತೆಯ ಭಾವ ಹಲವರಲ್ಲಿ.  

ಈಗ ಆರಂಭವಾಗಲಿ ನಿಮ್ಮ ಪಯಣ. ಲೇಖನಿ ಹಾಗೂ ಹಾಳೆ ಅಥವಾ ಕಂಪ್ಯೂಟರ್ನ ಕೀಬೋರ್ಡ್ ಒಂದಿಗಿನ ಸರಸ.  

ನೀವು ಬರೆದದ್ದನ್ನು ನಿಮ್ಮ favourite  ಸೋದರಿಗೋ, ಸೋದರನಿಗೋ ,ಪತಿ ಅಥವಾ ಪತ್ನಿಗೋ (ಇಲ್ಲಿ ಒಂದು ಅಪಾಯದಿಂದ ನೀವು ಪಾರಾಗುವ ದಾರಿ ಕಂಡುಕೊಂಡರೆ ಒಳ್ಳೇದು. ಏಕೆಂದರೆ sniping ನ ಸಮಸ್ಯೆ ಎದುರಾಗಬಹುದು), ನಿಮ್ಮ ನಲ್ಮೆಯ ಹಿತೈಶಿಗೋ ತೋರಿಸಿ ಅಭಿಪ್ರಾಯ ಪಡೆಯಿರಿ.
      
ನಂತರ, ಬರೆದ ಮಹಾ ಕೃತಿಗಳನ್ನು blog ಲೋಕಕ್ಕೆ ಹಾರಿಬಿಡಿ. ಗೋತ ಹೊಡೆದರೂ ಪರವಾಗಿಲ್ಲ, ಬರೆಯಬೇಕು, ಬರಹಗಾರನಾಗಬೇಕು ಎನ್ನೋ ಆ ಆಸೆ ಈಡೇರಿತಲ್ಲ. ಬೇಕಷ್ಟು ಪುಕ್ಕಟೆ ಬ್ಲಾಗ್ ಸೈಟ್ಗಳಿವೆ. ಅಕೌಂಟ್ ಓಪನ್ ಮಾಡಿ. ಅಷ್ಟು ಸಾಕು. ಇನ್ನು ಮುಂದೆ ನೀವು ಸಲೀಸಾಗಿ ಬರೆಯಬಲ್ಲಿರಿ.  

ಹಾರೈಕೆಗಳು  

_________________________________________________________________________________________________ 

ರಾಣಿಯ ಗಂಡ ರಾಜ ಅಲ್ಲ
 
 

ಎಂದಾದರೂ ಯೋಚಿಸಿದ್ದೀರಾ? ರಾಣಿ ಎಲಿಜಬೆತ್ ಪತಿ ಫಿಲಿಪ್ ರಾಜ ಏಕೆ ಅಲ್ಲ ಎಂದು? ಫಿಲಿಪ್ ನನ್ನು ಪ್ರಿನ್ಸ್ ಫಿಲಿಪ್ ಎಂದು ಕರೆಯತ್ತಾರೆ. ಇಂಗ್ಲೆಡಿನ ರಾಜ ಕುಟುಂಬ ವಿಂಡ್ಸರ್ ಮನೆತನದಿಂದ ಬಂದಿದ್ದು. ರಾಣಿ ಎಲಿಜಬೆತ್ ೬ನೆ king george ನ ಪುತ್ರಿ. ಫಿಲಿಪ್ ಆದರೋ ಡಚ್ ರಾಜಕುಟುಂಬದವ. ಎಲಿಜಬೆತ್ ಫಿಲಿಪ್ ನನ್ನು ವರಿಸಿದ ಕೂಡಲೇ ಆತ ಡಚ್ ಪೌರತ್ವ ತ್ಯಜಿಸಿ ಬ್ರಿಟಿಷ್ ಪೌರತ್ವ ಪಡೆದ. ಫಿಲಿಪ್ ವಿಂಡ್ಸರ್ ವಂಶಸ್ಥ ಅಲ್ಲದೆ ಇದ್ದುದರಿಂದ ಆತ ಬರೀ ರಾಜಕುಮಾರ. ಈಗ ರಾಣಿಯದೆ ದರ್ಬಾರು. ರಾಣಿಯ ಹಿರಿಯ ಪುತ್ರ ಚಾರ್ಲ್ಸ್ ರಾಣಿಯ ನಿಧನಾ ನಂತರ ರಾಜನಾಗುವರು. ಆದರೆ ಅವರ ಪತ್ನಿ ಕಾಮಿಲ್ಲ ಪಾರ್ಕರ್ ರಾಣಿ ಆಗುವ ಸಾಧ್ಯತೆ ಕಡಿಮೆ. ಅಷ್ಟಕ್ಕೂ ಮಾಧ್ಯಮದವರ ಕಣ್ಮಣಿ ಫಿಲಿಪ್ಗೆ ರಾಜನಾಗುವ ಆಸೆಯೇನೂ ಇಲ್ಲ. ಏಕೆಂದರೆ ಹೋದೆಡೆಯಲ್ಲೆಲ್ಲ ತನ್ನ ನೇರ, ನಿಷ್ಟುರ ಮಾತುಗಳಿಂದ ರಾಣಿಗೆ ಮಾತ್ರವಲ್ಲ buckingham ಅರಮನೆಗೆ ತಲೆನೋವಾಗಿರುವುದೇ ಸಾಕು. ಒಮ್ಮೆ google ಲಂಡನ್ HQ ಭೇಟಿ ಮಾಡಿದ ಫಿಲಿಪ್ ಅಲ್ಲಿನ ಹಿರಿಯ ಟೆಕ್ಕಿಯ ಜೋಗ್ಗಿಂಗ್ ಸೂಟ್ ನೋಡಿ, ಈಗ ತಾನೇ ಜೋಗ್ಗಿಂಗ್ ಮುಗಿಸಿ ಬಂದಿರಾ ಎಂದು ಕೇಳಿದ. ಟೆಕ್ಕಿ ಈ ಮಾತನ್ನು ಕೇಳಿ ಬೆಪ್ಪಾದ ಏಕೆಂದರೆ ಅಲ್ಲಿ ಕೆಲಸ ಮಾಡುವ ಬಹುತೇಕ ಜನ casual dress ನಲ್ಲೆ ಬರುತ್ತಾರೆ ಕೆಲಸಕ್ಕೆ. ನಮ್ಮ ಮುದಿ (ರಾಜ) ಕುಮಾರನಿಗೆ ಇದು ಹೊಳೆಯಲಿಲ್ಲ.
ಸ್ಲೊವೇನಿಯ ದೇಶದ ಪ್ರವಾಸದ ವೇಳೆ ” ಪ್ರವಾಸಿ ಉದ್ಯಮ ಒಂದು ಥರದ ವೇಶ್ಯಾವಾಟಿಕೆ ಇದ್ದಂತೆ” ಎಂದು ಹೇಳಿ ಎಲ್ಲರನ್ನೂ ದಂಗುಬಡಿಸಿದ ಈ ಫಿಲಿಪ್. ಒಮ್ಮೆ ಆಸ್ಟ್ರೇಲಿಯ ಪ್ರವಾಸದ ಸಮಯ ಅಲ್ಲಿನ aborigines ಎನ್ನೋ ಆದಿವಾಸಿಗಳನ್ನು ಭೇಟಿ ಮಾಡಿ ” ನೀವುಗಳು ಈಗಲೂ ಒಬ್ಬರ ಮೇಲೊಬ್ಬರು ಶೂಲ ಎಸೆಯುತ್ತೀರಎಂದು ಕೇಳಿ ತನಗೆ ತಾನೇ ನಕ್ಕ.  
 

ಕೆಳಗಿವೆ ಫಿಲಿಪ್ನ ಅವಾಂತರಗಳು.   

ನೀವು ತಮಿಳು LTTE ಭಯೋತ್ಪಾದಕರೇ?” ಲೊಂದೊನ್ನಿನ ದೇವಾಲಯಕ್ಕೆ ಭೇಟಿ ಕೊಟ್ಟಾಗ ಕಾವಿ ತೊಟ್ಟ ಅರ್ಚಕರನ್ನುದ್ದೇಶಿಸಿ.  

  

೧೩ ವರ್ಷದ ಸ್ಥೂಲ ಕಾಯದ ಬಾಲಕನ್ನು ಉದ್ದೇಶಿಸಿ, ನೀನು ಗಗನಯಾತ್ರಿಯಾಗಲು ಅಯೋಗ್ಯ. 

  

ಬ್ರಿಟಿಷ್ ಮಹಿಳೆಯರಿಗೆ ಅಡುಗೆ ಮಾಡುವುದಕ್ಕೆ ಬರುವುದಿಲ್ಲ.  

  

During a state visit to China in 1986, he famously told a group of British students: “If you stay here much longer, you’ll all be slitty-eyed”.  

  

ಹಳೆಕಾಲದ ಫ್ಯೂಸ್  ಬಾಕ್ಸ್ ನೋಡಿ, ” ಇದು ಯಾರೂ ಭಾರತೀಯನದಿರಬೇಕು”  

  

ಕೇಮಾನ್ ದ್ವೀಪಗಳಿಗೆ ಭೇಟಿ ಕೊಟ್ಟಾಗ, ಅಲ್ಲಿನ ಜನರನ್ನು ಕೇಳಿದ್ದು ”  

ನೀವೆಲ್ಲಾ  “ಕಡಲುಗಳ್ಳರೋ” ಎಂದು   

Advertisements

One thought on “v a r i a

ನಿಮ್ಮದೊಂದು ಉತ್ತರ

Fill in your details below or click an icon to log in:

WordPress.com Logo

You are commenting using your WordPress.com account. Log Out /  Change )

Google+ photo

You are commenting using your Google+ account. Log Out /  Change )

Twitter picture

You are commenting using your Twitter account. Log Out /  Change )

Facebook photo

You are commenting using your Facebook account. Log Out /  Change )

w

Connecting to %s