ಹಣಕಾಸಿನ ಕೊರತೆ

ಬಡ ರೈತನ ಸಾಲ ಮನ್ನಾ ಮಾಡಲು

ಹಣಕಾಸಿನ ಕೊರತೆ.

ಒಳ್ಳೆ ರಸ್ತೆ ಸಂಪರ್ಕ ನಿರ್ಮಿಸಲು

ಹಣಕಾಸಿನ ಕೊರತೆ.

ಹಳ್ಳಿಗಳಲ್ಲಿ ಪ್ರಾಥಮಿಕ ಆರೋಗ್ಯ ಕೇಂದ್ರ ತೆರೆಯಲು

ಹಣಕಾಸಿನ ಕೊರತೆ.

ಸೈನ್ಯಕ್ಕೆ ಬೇಕಾದ ಅವಶ್ಯ ಉಪಕರಣ ಕೊಳ್ಳಲು

ಹಣಕಾಸಿನ ಕೊರತೆ.

ಆದರೆ….

ಬ್ಯಾಂಕ್ ದರೋಡೆ ಮಾಡಿ, ಸರಕಾರಕ್ಕೆ ಪಂಗ ನಾಮ ಹಚ್ಚಿ, ದೇಶ ಬಿಟ್ಟು ಓಡಿ ಹೋಗೋ ನೀರವ್ ಮೋದಿಯಂಥವರಿಗೆ ಇಲ್ಲ…

ಹಣಕಾಸಿನ ಕೊರತೆ 🤔

#NiravModi #India #ನೀರವ್_ಮೋದಿ

Advertisements

ರಿಯಾದ್ ಕ್ಷಿಪಣಿ ಆಕ್ರಮಣ.

ಇಂದು ಸಂಜೆ .೪೧ ಕ್ಕೆ ರಿಯಾದ್ ನಗರದ ಮೇಲೆ ಕ್ಷಿಪಣಿ ಆಕ್ರಮಣ. ಕಚೇರಿ ಹೊರಗೆ ಫೋನಿನಲ್ಲಿ ಮಾತನಾಡ್ತಾ ಇದ್ದಾಗ ಢಮ್ ಢಮ್ ಎಂದು ಎರಡು ಸದ್ದುಗಳು. ಸದ್ದೇನೆಂದು ಒಬ್ಬರು ಕೇಳಿದಾಗ ಗುಡುಗು ಎಂದೆ. ಯಾಕೆಂದರೆ ಮೂರ್ನಾಲ್ಕು ದಿನಗಳಿಂದ ಸಂಜೆ ಮೋಡ ಕವಿದ ವಾತಾವರಣ, ಮಿಂಚು ಗುಡುಗು ಒಂದಿಷ್ಟು ಮಳೆ ಆಗ್ತಾ ಇತ್ತು ರಿಯಾದ್ನಲ್ಲಿ. ಹಾಗಾಗಿ ನಾನು ಎರಡು ಶಬ್ದಗಳನ್ನು ಗುಡುಗು ಎಂದೇ ಭಾವಿಸಿದ್ದೆ. ಕೆಲವೇ ಸೆಕೆಂಡುಗಳಲ್ಲಿ ಮತ್ತೊಂದು ಭಾರೀ ಶಬ್ದ. ಶಬ್ದ ಗುಡುಗಲ್ಲ ಎಂದು ಕೂಡಲೇ ಟ್ವಿಟರ್ ಮೊರೆ ಹೋದೆ. ಬಂದವು ಟ್ವೀಟ್ ಗಳು. ನನ್ನ ಬಿಲ್ಡಿಂಗ್ ಅಲುಗಾಡುವಂತೆ ಮಾಡಿದ ಶಬ್ದವೇನು ಅಂತ ಒಬ್ಬ ಟ್ವೀಟ್ಸಿದ್ರೆ, ಮತ್ತೊಬ್ಬ, wtf, ವಾಟ್ಸ್ ಹ್ಯಾಪನಿಂಗ್ ಎಂದು ಉಲಿಯುತ್ತಿದ್ದ. ಇಷ್ಟು ಹೊತ್ತಿಗೆ ಆಕಾಶದಲ್ಲಿ ಸುರುಳಿ ಸುರುಳಿಯಾಗಿ ಹೊಗೆ ಕಾಣಿಸಿ ಕೊಂಡಿತು. ರಿಯಾದ್ ನಗರದ ಮೇಲಿನ ಕ್ಷಿಪಣಿ ದಾಳಿಯನ್ನ ಯಶಸ್ವಿಯಾಗಿ ತಡೆದು, ಕ್ಷಿಪಣಿಗಳನ್ನು ಹೊಡೆದುರುಳಿಸಲಾಯಿತೆಂದು ಸುದ್ದಿ ಹೊರಗೆ ಬಂತು.

ತೀರಾ ಇತ್ತೀಚಿನವರೆಗೂ ಸೌದಿ ಸುರಕ್ಷಿತ ದೇಶ. ಯೆಮನ್ ದೇಶದ ಮೇಲೆ ಸೌದಿ ಅರೇಬಿಯಾ ಯುದ್ಧ ಸಾರಿದಂದಿನಿಂದ ಆಗಾಗ ಆತಂಕದ ಕ್ಷಣಗಳು. ಕ್ಷಿಪಣಿ ಉಡುಗೊರೆಗಳು. ಮುಯ್ಯಿಗೆ ಮುಯ್ಯಿ ಪ್ರತಿ ಆಕ್ರಮಣಗಳು.

ವಿಶ್ವ ಸುಂದರಿ

ಮಾನುಷಿಚಿಲ್ಲರ್. ವಿಶ್ವಸುಂದರಿ. ಈಕೆಯ  ಹೆಸರಿನಲ್ಲಿಚಿಲ್ಲರೆ ಕಂಡ ಸಂಸದ  ಶಶಿತರೂರ್ಟೀಕೆಗೆ ಒಳಗಾದರೆ, ಮಾನುಷಿ ಮಾತ್ರ ಕೇರ್ಫ್ರೀ ಆಗಿ, ತರೂರ್ಮೇಲೆ ಕೋಪಗೊಳ್ಳದೆಹೇಳಿದ್ದು, ನನ್ನಹೆಸರು Cchillar ನಲ್ಲಿ ‘chill’ ಇರೋದನ್ನುಮರೆಯಬೇಡಿ ಅಂತ.

ಚಿಕ್ಕಪುಟ್ಟಸಂಗತಿಗಳಿಗೆ ತಲೆಕೆಡಿಸಿಕೊಳ್ಳಬಾರದು, ಎಲ್ಲರನ್ನೂ ಮನ್ನಿಸುತ್ತಾ ಮುಂದೆಸಾಗಬೇಕು ಎನ್ನುವಮನೋಭಾವನೆ ಈ ಸುಂದರಿಯಲ್ಲಿಇರೋದು, ಆಕೆಯ ಸೌಂದರ್ಯಕ್ಕೆ ಮತ್ತಷ್ಟು  ಮೆರುಗು ಕೊಟ್ಟಿತು.

ಅಂದ ಹಾಗೆ ಆಕೆಯ ಹೆಸರು ಮನುಷಿಯೋ, ಮಾನುಷಿಯೋ? ನನಗಂತೂ ಮಾನುಷಿ ಸುಂದರವಾಗಿಕಂಡಿತು, ಆ ಬೆಡಗಿಯಥರ. 😀

ರೋಲ್ ಮಾಡೆಲ್

ರಾಜಕಾರಣಿ ನಮ್ಮಮಕ್ಕಳಿಗೆ ರೋಲ್ಮಾಡೆಲ್ ಅಲ್ಲ….

ಓರ್ವ ನಟ,ಖ್ಯಾತ ಕ್ರೀಡಾ ಪಟು ಸಾರ್ವಜನಿಕವಾಗಿ ಸಿಗರೇಟ್ಸೇದಿದರೆ, ಅಸಭ್ಯವಾಗಿವರ್ತಿಸಿದರೆ, ಮದ್ಯಪಾನ ಮಾಡಿದರೆ ಥಟ್ಟನೆಆಕ್ರೋಶ, ಟೀಕೆಎದುರಾಗುತ್ತೆ. ನೀವು, ನಮ್ಮ ಮಕ್ಕಳ ರೋಲ್ಮಾಡೆಲ್ಗಳೇ ಹೀಗೆ ನಡೆದುಕೊಂಡರೆ, ಬೇಜವಾಬ್ದಾರಿಯಾಗಿ ವರ್ತಿಸಿದರೆ, ಹೇಗೆ? ನಮ್ಮಮಕ್ಕಳೂ ನಿಮ್ಮಂತೆಯೇ ನಡೆದುಕೊಂಡರೆ ಅದಕ್ಕೆ ನೀವೇ ಜವಾಬ್ದಾರಿ ಎಂದು ಮಾಧ್ಯಮಗಳೂ ಸೇರಿ ಎಲ್ಲರೂ ದಬಾಯಿಸುತ್ತಾರೆ. ಆದರೆ

ಅಧಿಕಾರದ ಚುಕ್ಕಾಣಿ ಹಿಡಿದ, “ಲಾಮೇಕರ್ಎಂದು ಕರೆದುಕೊಳ್ಳುವ ರಾಜಕಾರಣಿ ಹರಕು ಕಚ್ಚೆಯವನಾದರೂ, ರಿಸಾರ್ಟ್ಗಳಲ್ಲಿ ಬೇಕಾದಂತೆ ಮಜಾ ಉಡಾಯಿಸಿದರೂ, ಬಾಯಿಗೆ ಬಂದಂತೆ ಅಶ್ಲೀಲವಾಗಿ ಬೈದಾಡಿದರೂ ನಾವ್ಯಾರೂ ಪ್ರತಿಭಟಿಸೋಲ್ಲ, ನಮ್ಮ ಮಕ್ಕಳ ರೋಲ್ ಮಾಡೆಲ್ ಆಲ್ವಾ ಅಂತ ಅವರನ್ನು ತಿವಿಯೋಲ್ಲ. ಯಾಕೆ…?

ರಾಜಕಾರಣ ಸಭ್ಯರ ದಂಧೆ ಅಲ್ಲಅಂತಲೋ?

ನಮ್ಮ ಮಕ್ಕಳು ಆರಿಸಿ ಕೊಳ್ಳಬೇಕಾದ ವೃತ್ತಿ ಅಲ್ಲ ಅಂತಲೋ?

#ರಾಜಕಾರಣಿ #ಪುಢಾರಿ #ನಟ #ವೃತ್ತಿ #ದಂಧೆ #ಕನ್ನಡ

 ‘ತಮ್ ಹೆಸ್ರು?

ಮಾತಿಗಿಳಿದ ಮರು ಕ್ಷಣದಲ್ಲೇ ‘ತಮ್ ಹೆಸ್ರು?” ಎಂದು ಕೇಳುವ ಉದ್ದೇಶ ಸಂಬಂಧ, ಸ್ನೇಹವನ್ನ ಸ್ಥಾಪಿಸುವುದಕ್ಕಲ್ಲ. ಬದಲಿಗೆ, ನಿಮ್ಮ ಹೆಸರಿನ ಆಧಾರದಲ್ಲಿ ಅಭಿಪ್ರಾಯ ರೂಪಿಸಿಕೊಳ್ಳೋಕೆ, ಪಥ್ಯವಾಗದಿದ್ದರೆ ಸಂಭಾಷಣೆಯನ್ನು ಅಲ್ಲಿಗೇ ಮೊಟಕುಗೊಳಿಸೋಕೆ. ಈ ನಡೆ ಸಾರ್ವತ್ರಿಕವೋ? ನೋ… …ಇದು ನಮ್ಮ ದೇಶಕ್ಕೆ ಮಾತ್ರ ಸೀಮಿತ.