ಕೊರೊನಾ ವೈರಸ್

“2019-nCoV” ಅಥವಾ ಕೊರೊನಾ ವೈರಸ್. ಚೀನಾ ದೇಶವನ್ನು ಕಂಗೆಡಿಸಿದ ಈ ಮಾರಣಾಂತಿಕ ರೋಗಕ್ಕೆ, ಮದ್ದಿಲ್ಲ, ಚಿಕಿತ್ಸೆಯಿಲ್ಲ, ನೂರಾರು ಜನ ಬಲಿ. ಇದರ ರೋಗ ಲಕ್ಷಣ ಉಸಿರಾಟದಲ್ಲಿ ತೊಂದರೆ, ಜ್ವರ ಇತ್ಯಾದಿ. ಕೆಲವೊಮ್ಮೆ ಯಾವುದೇ ಲಕ್ಷಣಗಳೂ ಗೋಚರವಾಗುವುದಿಲ್ಲ. ಹಾಗಾಗಿ ಇದು ಡಬಲ್ ಡೆಡ್ಲಿ.

ಹಲವು ದೇಶಗಳಿಗೆ ಹರಡುತ್ತಿರುವ ಈ ಖಾಯಿಲೆಗೆ ಮದ್ದನ್ನು ಕಂಡು ಹಿಡಿಯಲು ಔಷಧ ಕಂಪೆನಿಗಳು ಹಗಲಿರುಳು ಶ್ರಮಿಸುತ್ತಿವೆ. ಪರಸ್ಪರ ಭೇಟಿಯಾಗಲು ಜನ ಅಂಜುತ್ತಿದ್ದಾರೆ. ಸೋಂಕು ಹರಡದಿರಲು ಚೀನಾದ ಒಂದು ನಗರವನ್ನೇ ಸಂಪೂರ್ಣವಾಗಿ ಹೊರಗಿನ ಸಂಪರ್ಕದಿಂದ ನಿಷೇಧಿಸಲಾಗಿದೆ. ವಿಮಾನ ಯಾನ ಸ್ಥಗಿತ. ಹೊರಗಿನವರು ಬರುವ ಹಾಗಿಲ್ಲ, ಒಳಗಿನವರು ಹೊರ ಹೋಗುವ ಹಾಗಿಲ್ಲ.  

ಹತ್ತು ಲಕ್ಷ ಜನಸಂಖ್ಯೆಯುಳ್ಳ ನಗರವಾದ ವುಹಾ (Wuhan), ಚೈನಾದ ಹುಬೆ ಪ್ರಾಂತ್ಯದ ರಾಜಧಾನಿ. ಇಲ್ಲಿಂದ ಶುರುವಾಗಿದ್ದು ಕೊರೊನಾ ಪಿಡುಗು.

ಶೀಘ್ರದಲ್ಲೇ ಈ ಸೋಂಕಿಗೆ ಮದ್ದನ್ನು ಕಂಡು ಹಿಡಿಯಲೆಂದು ಹಾರೈಸುತ್ತಾ….   

#ಕೊರೊನಾ #ವೈರಸ್ #ಹುಬೆ #ಜ್ವರ#ಪಿಡುಗು #ಚೈನಾ 

ಅಕ್ಕಮಹಾದೇವಿ

ಬೆಟ್ಟದ ಮೇಲೊಂದು ಮನೆಯ ಮಾಡಿ,

ಮೃಗಂಗಳಿಗಂಜಿದೊಡೆಂತಯ್ಯ?  

ಸಮುದ್ರದ ತಡಿಯಲೊಂದು ಮನೆಯ ಮಾಡಿ, ನೊರೆತೆರೆಗಳಿಗಂಜಿದೊಡೆಂತಯ್ಯ?

ಸಂತೆಯೊಳಗೊಂದು ಮನೆಯ ಮಾಡಿ,

ಶಬ್ದಕ್ಕೆ ನಾಚಿದೊಡೆಂತಯ್ಯ?

ಚೆನ್ನಮಲ್ಲಿಕಾಜುನದೇವ ಕೇಳಯ್ಯ

ಲೋಕದೊಳಗೆ ಹುಟ್ಟಿದ ಬಳಿಕ, ಸ್ತುತಿ-ನಿಂದೆಗಳು ಬಂದರೆ

ಮನದಲ್ಲಿ ಕೋಪವ ತಾಳದೆ ಸಮಾಧಾನಿಯಾಗಿರಬೇಕು

#ಅಕ್ಕಮಹಾದೇವಿ.

#ವಚನ

ಪದ್ಮಶ್ರೀ

ಸಮುದಾಯಗಳ ಮಧ್ಯೆ ರೋಷ, ದ್ವೇಷ, ಹಗೆ, ಹಿಂಸೆ ಗೆ ಪ್ರಚೋದನೆ ನೀಡುವ ಪಶುಗಳ ಮಧ್ಯೆ ದೈತ್ಯಾಕಾರವಾಗಿ ನಿಲ್ಲುವ “ಅಕ್ಷರ ಸಂತ“ ಬಿರುದಾಂಕಿತ, ಕಿತ್ತಳೆ ಮಾರಿ ಹೊಟ್ಟೆ ಹೊರೆದುಕೊಳ್ಳುವ, “ಹರೇಕಳ ಹಾಜಬ್ಬ”……

ಈಗ “ಪದ್ಮ ಶ್ರೀ” ಪುರಸ್ಕೃತ.

#ಸಮುದಾಯ #ರೋಷ, #ದ್ವೇಷ #ಹಗೆ #ಹಿಂಸೆ #ಪ್ರಚೋದನೆ