ರಿಯಾದ್ ಕ್ಷಿಪಣಿ ಆಕ್ರಮಣ.

ಇಂದು ಸಂಜೆ .೪೧ ಕ್ಕೆ ರಿಯಾದ್ ನಗರದ ಮೇಲೆ ಕ್ಷಿಪಣಿ ಆಕ್ರಮಣ. ಕಚೇರಿ ಹೊರಗೆ ಫೋನಿನಲ್ಲಿ ಮಾತನಾಡ್ತಾ ಇದ್ದಾಗ ಢಮ್ ಢಮ್ ಎಂದು ಎರಡು ಸದ್ದುಗಳು. ಸದ್ದೇನೆಂದು ಒಬ್ಬರು ಕೇಳಿದಾಗ ಗುಡುಗು ಎಂದೆ. ಯಾಕೆಂದರೆ ಮೂರ್ನಾಲ್ಕು ದಿನಗಳಿಂದ ಸಂಜೆ ಮೋಡ ಕವಿದ ವಾತಾವರಣ, ಮಿಂಚು ಗುಡುಗು ಒಂದಿಷ್ಟು ಮಳೆ ಆಗ್ತಾ ಇತ್ತು ರಿಯಾದ್ನಲ್ಲಿ. ಹಾಗಾಗಿ ನಾನು ಎರಡು ಶಬ್ದಗಳನ್ನು ಗುಡುಗು ಎಂದೇ ಭಾವಿಸಿದ್ದೆ. ಕೆಲವೇ ಸೆಕೆಂಡುಗಳಲ್ಲಿ ಮತ್ತೊಂದು ಭಾರೀ ಶಬ್ದ. ಶಬ್ದ ಗುಡುಗಲ್ಲ ಎಂದು ಕೂಡಲೇ ಟ್ವಿಟರ್ ಮೊರೆ ಹೋದೆ. ಬಂದವು ಟ್ವೀಟ್ ಗಳು. ನನ್ನ ಬಿಲ್ಡಿಂಗ್ ಅಲುಗಾಡುವಂತೆ ಮಾಡಿದ ಶಬ್ದವೇನು ಅಂತ ಒಬ್ಬ ಟ್ವೀಟ್ಸಿದ್ರೆ, ಮತ್ತೊಬ್ಬ, wtf, ವಾಟ್ಸ್ ಹ್ಯಾಪನಿಂಗ್ ಎಂದು ಉಲಿಯುತ್ತಿದ್ದ. ಇಷ್ಟು ಹೊತ್ತಿಗೆ ಆಕಾಶದಲ್ಲಿ ಸುರುಳಿ ಸುರುಳಿಯಾಗಿ ಹೊಗೆ ಕಾಣಿಸಿ ಕೊಂಡಿತು. ರಿಯಾದ್ ನಗರದ ಮೇಲಿನ ಕ್ಷಿಪಣಿ ದಾಳಿಯನ್ನ ಯಶಸ್ವಿಯಾಗಿ ತಡೆದು, ಕ್ಷಿಪಣಿಗಳನ್ನು ಹೊಡೆದುರುಳಿಸಲಾಯಿತೆಂದು ಸುದ್ದಿ ಹೊರಗೆ ಬಂತು.

ತೀರಾ ಇತ್ತೀಚಿನವರೆಗೂ ಸೌದಿ ಸುರಕ್ಷಿತ ದೇಶ. ಯೆಮನ್ ದೇಶದ ಮೇಲೆ ಸೌದಿ ಅರೇಬಿಯಾ ಯುದ್ಧ ಸಾರಿದಂದಿನಿಂದ ಆಗಾಗ ಆತಂಕದ ಕ್ಷಣಗಳು. ಕ್ಷಿಪಣಿ ಉಡುಗೊರೆಗಳು. ಮುಯ್ಯಿಗೆ ಮುಯ್ಯಿ ಪ್ರತಿ ಆಕ್ರಮಣಗಳು.

Advertisements

ವಿಶ್ವ ಸುಂದರಿ

ಮಾನುಷಿಚಿಲ್ಲರ್. ವಿಶ್ವಸುಂದರಿ. ಈಕೆಯ  ಹೆಸರಿನಲ್ಲಿಚಿಲ್ಲರೆ ಕಂಡ ಸಂಸದ  ಶಶಿತರೂರ್ಟೀಕೆಗೆ ಒಳಗಾದರೆ, ಮಾನುಷಿ ಮಾತ್ರ ಕೇರ್ಫ್ರೀ ಆಗಿ, ತರೂರ್ಮೇಲೆ ಕೋಪಗೊಳ್ಳದೆಹೇಳಿದ್ದು, ನನ್ನಹೆಸರು Cchillar ನಲ್ಲಿ ‘chill’ ಇರೋದನ್ನುಮರೆಯಬೇಡಿ ಅಂತ.

ಚಿಕ್ಕಪುಟ್ಟಸಂಗತಿಗಳಿಗೆ ತಲೆಕೆಡಿಸಿಕೊಳ್ಳಬಾರದು, ಎಲ್ಲರನ್ನೂ ಮನ್ನಿಸುತ್ತಾ ಮುಂದೆಸಾಗಬೇಕು ಎನ್ನುವಮನೋಭಾವನೆ ಈ ಸುಂದರಿಯಲ್ಲಿಇರೋದು, ಆಕೆಯ ಸೌಂದರ್ಯಕ್ಕೆ ಮತ್ತಷ್ಟು  ಮೆರುಗು ಕೊಟ್ಟಿತು.

ಅಂದ ಹಾಗೆ ಆಕೆಯ ಹೆಸರು ಮನುಷಿಯೋ, ಮಾನುಷಿಯೋ? ನನಗಂತೂ ಮಾನುಷಿ ಸುಂದರವಾಗಿಕಂಡಿತು, ಆ ಬೆಡಗಿಯಥರ. 😀

ರೋಲ್ ಮಾಡೆಲ್

ರಾಜಕಾರಣಿ ನಮ್ಮಮಕ್ಕಳಿಗೆ ರೋಲ್ಮಾಡೆಲ್ ಅಲ್ಲ….

ಓರ್ವ ನಟ,ಖ್ಯಾತ ಕ್ರೀಡಾ ಪಟು ಸಾರ್ವಜನಿಕವಾಗಿ ಸಿಗರೇಟ್ಸೇದಿದರೆ, ಅಸಭ್ಯವಾಗಿವರ್ತಿಸಿದರೆ, ಮದ್ಯಪಾನ ಮಾಡಿದರೆ ಥಟ್ಟನೆಆಕ್ರೋಶ, ಟೀಕೆಎದುರಾಗುತ್ತೆ. ನೀವು, ನಮ್ಮ ಮಕ್ಕಳ ರೋಲ್ಮಾಡೆಲ್ಗಳೇ ಹೀಗೆ ನಡೆದುಕೊಂಡರೆ, ಬೇಜವಾಬ್ದಾರಿಯಾಗಿ ವರ್ತಿಸಿದರೆ, ಹೇಗೆ? ನಮ್ಮಮಕ್ಕಳೂ ನಿಮ್ಮಂತೆಯೇ ನಡೆದುಕೊಂಡರೆ ಅದಕ್ಕೆ ನೀವೇ ಜವಾಬ್ದಾರಿ ಎಂದು ಮಾಧ್ಯಮಗಳೂ ಸೇರಿ ಎಲ್ಲರೂ ದಬಾಯಿಸುತ್ತಾರೆ. ಆದರೆ

ಅಧಿಕಾರದ ಚುಕ್ಕಾಣಿ ಹಿಡಿದ, “ಲಾಮೇಕರ್ಎಂದು ಕರೆದುಕೊಳ್ಳುವ ರಾಜಕಾರಣಿ ಹರಕು ಕಚ್ಚೆಯವನಾದರೂ, ರಿಸಾರ್ಟ್ಗಳಲ್ಲಿ ಬೇಕಾದಂತೆ ಮಜಾ ಉಡಾಯಿಸಿದರೂ, ಬಾಯಿಗೆ ಬಂದಂತೆ ಅಶ್ಲೀಲವಾಗಿ ಬೈದಾಡಿದರೂ ನಾವ್ಯಾರೂ ಪ್ರತಿಭಟಿಸೋಲ್ಲ, ನಮ್ಮ ಮಕ್ಕಳ ರೋಲ್ ಮಾಡೆಲ್ ಆಲ್ವಾ ಅಂತ ಅವರನ್ನು ತಿವಿಯೋಲ್ಲ. ಯಾಕೆ…?

ರಾಜಕಾರಣ ಸಭ್ಯರ ದಂಧೆ ಅಲ್ಲಅಂತಲೋ?

ನಮ್ಮ ಮಕ್ಕಳು ಆರಿಸಿ ಕೊಳ್ಳಬೇಕಾದ ವೃತ್ತಿ ಅಲ್ಲ ಅಂತಲೋ?

#ರಾಜಕಾರಣಿ #ಪುಢಾರಿ #ನಟ #ವೃತ್ತಿ #ದಂಧೆ #ಕನ್ನಡ

 ‘ತಮ್ ಹೆಸ್ರು?

ಮಾತಿಗಿಳಿದ ಮರು ಕ್ಷಣದಲ್ಲೇ ‘ತಮ್ ಹೆಸ್ರು?” ಎಂದು ಕೇಳುವ ಉದ್ದೇಶ ಸಂಬಂಧ, ಸ್ನೇಹವನ್ನ ಸ್ಥಾಪಿಸುವುದಕ್ಕಲ್ಲ. ಬದಲಿಗೆ, ನಿಮ್ಮ ಹೆಸರಿನ ಆಧಾರದಲ್ಲಿ ಅಭಿಪ್ರಾಯ ರೂಪಿಸಿಕೊಳ್ಳೋಕೆ, ಪಥ್ಯವಾಗದಿದ್ದರೆ ಸಂಭಾಷಣೆಯನ್ನು ಅಲ್ಲಿಗೇ ಮೊಟಕುಗೊಳಿಸೋಕೆ. ಈ ನಡೆ ಸಾರ್ವತ್ರಿಕವೋ? ನೋ… …ಇದು ನಮ್ಮ ದೇಶಕ್ಕೆ ಮಾತ್ರ ಸೀಮಿತ.

ಏನಿದೆ ಟ್ವಿಟರ್ನಲ್ಲಿ? 


ಟ್ವಿಟರ್ ಒಂದು ನಶೆ. ಟ್ವಿಟರ್ ನೊಂದಿಗೆ ನಂಟನ್ನು ಇಟ್ಟುಕೊಂಡಿರುವ ಯಾರೂ ಸಹ ಒಪ್ಪುವ ಮಾತು ಇದು. ಇದರ ನಶೆ, ನಮಗೆ ಕೆಲಸ ಕೊಟ್ಟ ಯಜಮಾನನಿಂದ, ಮನೆಯ ಯಜಮಾನಿ ವರೆಗೂ, ಎಲ್ಲರಿಗೂ ಪಸರಿಸಿ ಅವರ ಕೆಂಗಣ್ಣಿಗೆ ನಮ್ಮನ್ನ ಈಡು ಮಾಡುತ್ತೆ. ಏನೇ ಆದ್ರೂ ಇದರ ಚಟ ಮಾತ್ರ ಇಳಿಯೋಲ್ಲ. ಇವರೀರ್ವರ(ಯಜಮಾನ/ನಿ) ವಾರ್ನಿಂಗ್ ಲೆಟರ್ಗಳು ನಶೆಯನ್ನು ಇಳಿಸೋ ಬದಲು aggravate ಮಾಡುತ್ತವೆ. ನನ್ನ ಟ್ವಿಟರ್ ನ ಸಹವಾಸ ನನ್ನ ಯಜಮಾನಿಗೆ ಮಾತ್ರಲ್ಲ, ನನ್ನ ಮಕ್ಕಳಿಗೂ ಕೆಲವೊಮ್ಮೆ ತಲೆನೋವು ತರುತ್ತದೆ. ಅದರಲ್ಲೂ ನನ್ನ ೯ ರ ಪ್ರಾಯದ ಮಗಳು ಇಸ್ರಾ ಳಿಗೆ. ಏನಿದೆ ಟ್ವಿಟರ್ನಲ್ಲಿ? always on twitter ಅಂತ ಅವಳಮ್ಮ ಕೇಳುವಂತೆ ಜೋರಾಗಿ ಹೇಳಿ ಸರ ಪಟಾಕಿಯ ನಿರೀಕ್ಷೆಯಲ್ಲಿ ಹಿಗ್ಗುತ್ತಾಳೆ. 

ಇವತ್ತು ನನ್ನ ಟ್ವಿಟರ್ ಖಾತೆಗೆ ೧೦೦೦ನೇ follower ಸಿಕ್ಕ ಸಂಭ್ರಮ. 

೩೭,೦೦೦ ಕ್ಕೂ ಹೆಚ್ಚು ಟ್ವೀಟ್ ಗಳು, ೧೦೦೦ follower ಗಳು. ಒಂಥರಾ double whammy, ಅಲ್ವಾ?

 ಮನೆಯೇ ಮೊದಲ ಪಾಠ ಶಾಲೆ…

ರಾಜಕಾರಣಿಗಳು ತಮ್ಮ ಭಾಷೆ, ಸಂಸ್ಕಾರವನ್ನು ಎಲ್ಲಿಂದ ಕಲಿಯುತ್ತಾರೆ? ಸಾಮಾನ್ಯ ಜನರಾದ ನಾವು ಕಲಿಯೋದು ಮನೆಯಿಂದ. “ಮನೆಯೇ ಮೊದಲ ಪಾಠ ಶಾಲೆ, ತಾಯಿಯೇ ಮೊದಲ ಗುರು” ಅಲ್ಲವೇ? ಇದು ನಮ್ಮನ್ನಾಳೋ ಪಡಪೋಶಿ ಗಳಿಗೆ ಅನ್ವಯಿಸುತ್ತಾ? ಅನ್ವಯಿಸೋದಾದ್ರೆ ನಾವು ನಮ್ಮ ದುರ್ದೈವಿ ಕಿವಿಗಳಿಂದ ಕೇಳೋ ಅವರ ಭಾಷೆ ಅವರಿಗೆಲ್ಲಿಂದ ಸಿಗುತ್ತದೆ? “ರಾಜ್ಯ ಹೊತ್ತಿ ಉರಿಯುತ್ತೆ” “ಬೆಂಕಿ ಹತ್ಕೊಳತ್ತೆ” ಅಂತ ಹರುಕು ಬಾಯಿಂದ ನಮ್ಮ ಕಿವಿಯೊಳಗೆ ತುರುಕುವ ಇವರಿಗೆ ಜ್ಞಾನ ಅನ್ನೋದು ಸ್ವಲ್ಪ ಮಟ್ಟಿಗಾದರೂ ಇದೆಯೇ? ರಾಜ್ಯವೇನು ಅವರಿಗೆ ಸಿಕ್ಕ ವರದಕ್ಷಿಣೆಯೇ? 

ಇವರ ಮಾತುಗಳನ್ನ ದಿನ ಬೆಳಗಾದರೆ ಕೇಳುವ ಯಾವ ತಾಯಿ ತಾನೇ ತನ್ನ ಮಗ/ಳು ರಾಜಕಾರಣಿಯಾಗಲಿ, ದೇಶ ಬೆಳಗಲಿ ಎಂದು ಹಂಬಲಿಸಿಯಾಳು?