ಅಮೆರಿಕೆಯ ಹೊಸ ಅಧ್ಯಕ್ಷ

obamaನಂಬಲು ಅಸಾಧ್ಯವಾದ ರಾಜಕೀಯ ಘಟನೆ ಅಮೇರಿಕೆಯಲ್ಲಿ. ಸರಪಳಿ ಬಿಗಿದು ಆಫ್ರಿಕಾ ದೇಶಗಳಿಂದ ಗುಲಾಮಗಿರಿಗಾಗಿ ಅಮೆರಿಕೆಯ ಕಡಲತೀರದ ಮೇಲೆ ಎಸೆಯಲ್ಪಟ್ಟ ಕರಿಯರ ಪೈಕಿಯವರಾದ ಬರಾಕ್ ಒಬಾಮ ಅಮೆರಿಕೆಯ ಅಧ್ಯಕ್ಷ. ಇದನ್ನು ನೋಡಿದವರಿಗೆ ತಿರುಕನ ಕನಸು ನೆನಪಾಗದಿರದು.

 

ಕೇವಲ ಕೆಲವೇ ದಶಕಗಳವರೆಗೆ ಮತ ಚಲಾಯಿಸಲೂ ಸಾಧ್ಯವಾಗದಿದ್ದ ನಾಡಿಗೆ ಕರಿಯ ಅಧ್ಯಕ್ಷ. ಕ್ರೈಸ್ತರಾಗಿದ್ದಾರೂ ಬಣ್ಣ ಕಪ್ಪು ಎಂಬ ಒಂದೇ ಕಾರಣಕ್ಕೆ ಚರ್ಚುಗಳಿಗೆ ಪ್ರವೇಶವಿಲ್ಲ. ಬಿಳಿಯರು ಹೋಗುವ ಶಾಲೆಗೆ ಕರಿಯರ ಮಕ್ಕಳು ಹೋಗುವಂತಿಲ್ಲ. ಕರಿಯ ಅಪ್ಪಿತಪ್ಪಿಯೂ ಬಿಳಿ ಹೆಣ್ಣನ್ನು ಮದುವೆಯಾಗುವುದಿರಲಿ, ಕಣ್ಣೆತ್ತಿಯೂ ನೋಡುವಂತಿಲ್ಲ. ಸಾರ್ವಜನಿಕ ಬಸ್ಸುಗಳಲ್ಲಿ ಮುಂದಿನ ಬಾಗಿಲಿನಿಂದ ಹತ್ತುವಂತಿಲ್ಲ. ಒಂದೇ ಎರಡೆ ಅವರ ಮೇಲೆ ನಡೆದ ಅತಿರೇಕಗಳು. ಆ ದೇವರು ಬಿಳಿಯರ ಅಹಂಕಾರಕ್ಕೆ ಸರಿಯಾದ ಮದ್ದನ್ನೇ ಅರೆದ.

 

ತಮ್ಮ ಉದ್ಘಾಟನಾ ಭಾಷಣದಲ್ಲಿ, ಅರವತ್ತು ವರ್ಷಗಳ ಹಿಂದೆ ತನ್ನ ತಂದೆಗೆ ಹೋಟೆಲಿನಲ್ಲಿ ಊಟ ನಿರಾಕರಿಸಿರಬಹುದಾದ ಅಮೇರಿಕೆಯಲ್ಲಿ ಇಂದು ನಿಮ್ಮೆಲ್ಲರೆದುರಿಗೆ ಸತ್ಯಪ್ರತಿಜ್ಞೆ ಸ್ವೀಕರಿಸಲು ನಿಂತಿದ್ದೇನೆ ಎಂದು ಭಾವುಕರಾದ ಒಬಾಮ ನುಡಿದರು.

Advertisements

ಕಸಬ್ ನಮ್ಮವನಲ್ಲ ಎಂದ ಪಾಕ್

ಕಸಬ ಪಾಕಿ ಅಂತ ಇಮ್ರಾನ್ ಖಾನ್ಗೂ ಗೊತ್ತು, ಜ್ಯರ್ದಾರಿಗೂ ಗೊತ್ತು, ಗೀಲಾನೀಗೂ ಗೊತ್ತು ಮತ್ತು ಇವರ ತಾತ ಮುತ್ತಾತಂದಿರಿಗೂ ಗೊತ್ತು. ಕಸಬ ಯಾರೂಂತ ನಮಗೆ ಗೊತ್ತಿಲ್ಲ ಎಂದು ಪಾಕ್ ಹೇಳಿದ್ದು time buying tactics. ಇದಕ್ಕೆ ನಮ್ಮ ರಾಜಕಾರಣಿಗಳು ಗೋಣು ಹಾಕಿದ್ದು ನಮ್ಮ ದೌರ್ಭಾಗ್ಯ.

 

ಮುಂಬೈ ನರಹತ್ಯೆ ನಡೆದ ಮಾರನೆ ದಿನವೇ ನಮ್ಮ ವೈಮಾನಿಕ ದಳಕ್ಕೆ ಆಜ್ಞೆ ಕೊಟ್ಟಿದ್ದರೆ ಪಾಕ್ ಆಕ್ರಮಿತ ಕಾಶ್ಮೀರದ ಎಲ್ಲಾ ಭಯೋತ್ಪಾದಕ ಕೇಂದ್ರಗಳನ್ನು ಪಾಕಿಗಳಿಗೆ ಗೊತ್ತಾಗುವ ಮೊದಲೇ ಚಿಟಿಕೆ ಹೊಡೆಯುವಷ್ಟರಲ್ಲಿ ಭಸ್ಮ  ಮಾಡಬಹುದಿತ್ತು. ಆದರೆ ಅದಕ್ಕೆ ಬೇಕಾದ ಎದೆಗಾರಿಕೆ ಎಲ್ಲಿಂದ ತರೋದು? pok ಮರಳಿ ಪಡೆಯುವ ಸುವರ್ಣಾವಕಾಶವನ್ನು ನಾವು ಬಿಟ್ಟೆವು. ಈಗ ಹಲುಬಿ ಪ್ರಯೋಜನವಿಲ್ಲ.

 

ಇನ್ನು ಮುಂಬೈ ಸಾಕ್ಷ್ಯಗಳನ್ನು ಪಾಕಿಗೆ ಹಸ್ತಾಂತರಿಸುವ ಬದಲು ಲುಚ್ಚಾ ಅಮೇರಿಕೆಗೆ ಕೊಟ್ಟಿದ್ದು ನನಗೆ ಕಗ್ಗಂಟು.  ಅಮೇರಿಕಾ ನಮ್ಮ ಮಿತ್ರನಲ್ಲ. ಎಂದೂ ನಮ್ಮ ಮಿತ್ರನಾಗಿರಲಿಲ್ಲ. ಸಾಕ್ಷ್ಯಾಧಾರಗಳನ್ನು ಪಾಕಿಗೆ ಕೊಟ್ಟು ಕೂಡಲೇ ಅಪರಾಧಿಗಳನ್ನು ನಮಗೆ ಒಪ್ಪಿಸಲು ಕಾಲದ ಗಡುವು ಕೊಡೊ ಬದಲು ವಾಷಿಂಗ್ಟನ್ ಯಾತ್ರೆಗೆ ಚಿದಂಬರಂ ಆಗಲೀ ಮುಖರ್ಜೀ ಹೋಗುವ ಮರ್ಮ ಏನು ಅನ್ನುವುದೇ ರಹಸ್ಯ.

 

ಯಾವುದಕ್ಕೂ ಪಡೆದುಕೊಂಡು ಬರಬೇಕು ಅಂತಾರಲ್ಲ ಹಾಗೆ ನಮಗೆ ಸಿಕ್ಕ ನಾಯಕರಿಂದ ಹೆಚ್ಚಿನದನ್ನು ನಿರೀಕ್ಷಿಸುವುದು ಸರಿಯಲ್ಲವೇನೋ.  

 

Exit 2008

israa-mob-screenಬೈ ಬೈ ೨೦೦೮, ಹಾಯ್ ಹಾಯ್ ೨೦೦೯

ಹೊಸ ವರುಷದ ಹಮ್ಮು ಬಿಮ್ಮಿಗೆ ನಾವು ನಮ್ಮನ್ನೊಡ್ಡಿಕೊಳ್ಳುವ ಮೊದಲು ಸಂದು ಹೋದ ವರುಷದ ಆಗು ಹೋಗುಗಳನ್ನು ನೋಡೋಣ.

 ವೈಯಕ್ತಿವಾಗಿ ೨೦೦೮ರ ಆರಂಭ excitement ಮೂಲಕ ಆಯಿತು. ನಮ್ಮ ಮನೆ ಹಾಗೂ ಮನವನ್ನು  ಬೆಳಗಲು ಮಗಳ ಹುಟ್ಟು. ಅವಳಿಗಿಟ್ಟ ಹೆಸರು “ಇಸ್ರಾ ಮರ್ಯಮ್” ಎಂದು. ಇಸ್ರಾ ಅಂದರೆ “ದಿವ್ಯ ನಿಶಾ ಪಯಣ” ಹಾಗೂ ಮರ್ಯಮ್, “ಯೇಸು ಕ್ರಿಸ್ತರ ( ಈಸಾ ) ಮಾತೆ”.

 

ಬೀಜಿಂಗ್ ಒಲಂಪಿಕ್ಸ್, ಮೀನನ್ನು ನಾಚಿಸಿದ ಅಮೆರಿಕೆಯ ಮೈಕೆಲ್ ಪ್ಹೆಲ್ಪ್ಸ್, ಚಂದ್ರಯಾನ, ಮುಂಬೈ ನರಹತ್ಯೆ, ಒಬಾಮ, ಆರ್ಥಿಕ ಹಿಂಜರಿತ ( recession ), ಸೊಮಾಲಿಯಾದ ಕಡಲ್ಗಳ್ಳರು, ಅರವಿಂದ್ ಅಡಿಗರ ಬಿಳಿ ಹುಲಿ, ಮಧ್ಯಪೂರ್ವದಲ್ಲಿ ಇಸ್ರೇಲಿಗಳ ನರಸಂಹಾರ.. ಇವು ವಿಶ್ವಕ್ಕೆ ೨೦೦೮ರ ಕೊಡುಗೆಗಳು.