ಕೊರೊನಾ ವೈರಸ್

“2019-nCoV” ಅಥವಾ ಕೊರೊನಾ ವೈರಸ್. ಚೀನಾ ದೇಶವನ್ನು ಕಂಗೆಡಿಸಿದ ಈ ಮಾರಣಾಂತಿಕ ರೋಗಕ್ಕೆ, ಮದ್ದಿಲ್ಲ, ಚಿಕಿತ್ಸೆಯಿಲ್ಲ, ನೂರಾರು ಜನ ಬಲಿ. ಇದರ ರೋಗ ಲಕ್ಷಣ ಉಸಿರಾಟದಲ್ಲಿ ತೊಂದರೆ, ಜ್ವರ ಇತ್ಯಾದಿ. ಕೆಲವೊಮ್ಮೆ ಯಾವುದೇ ಲಕ್ಷಣಗಳೂ ಗೋಚರವಾಗುವುದಿಲ್ಲ. ಹಾಗಾಗಿ ಇದು ಡಬಲ್ ಡೆಡ್ಲಿ.

ಹಲವು ದೇಶಗಳಿಗೆ ಹರಡುತ್ತಿರುವ ಈ ಖಾಯಿಲೆಗೆ ಮದ್ದನ್ನು ಕಂಡು ಹಿಡಿಯಲು ಔಷಧ ಕಂಪೆನಿಗಳು ಹಗಲಿರುಳು ಶ್ರಮಿಸುತ್ತಿವೆ. ಪರಸ್ಪರ ಭೇಟಿಯಾಗಲು ಜನ ಅಂಜುತ್ತಿದ್ದಾರೆ. ಸೋಂಕು ಹರಡದಿರಲು ಚೀನಾದ ಒಂದು ನಗರವನ್ನೇ ಸಂಪೂರ್ಣವಾಗಿ ಹೊರಗಿನ ಸಂಪರ್ಕದಿಂದ ನಿಷೇಧಿಸಲಾಗಿದೆ. ವಿಮಾನ ಯಾನ ಸ್ಥಗಿತ. ಹೊರಗಿನವರು ಬರುವ ಹಾಗಿಲ್ಲ, ಒಳಗಿನವರು ಹೊರ ಹೋಗುವ ಹಾಗಿಲ್ಲ.  

ಹತ್ತು ಲಕ್ಷ ಜನಸಂಖ್ಯೆಯುಳ್ಳ ನಗರವಾದ ವುಹಾ (Wuhan), ಚೈನಾದ ಹುಬೆ ಪ್ರಾಂತ್ಯದ ರಾಜಧಾನಿ. ಇಲ್ಲಿಂದ ಶುರುವಾಗಿದ್ದು ಕೊರೊನಾ ಪಿಡುಗು.

ಶೀಘ್ರದಲ್ಲೇ ಈ ಸೋಂಕಿಗೆ ಮದ್ದನ್ನು ಕಂಡು ಹಿಡಿಯಲೆಂದು ಹಾರೈಸುತ್ತಾ….   

#ಕೊರೊನಾ #ವೈರಸ್ #ಹುಬೆ #ಜ್ವರ#ಪಿಡುಗು #ಚೈನಾ 

ನಿಮ್ಮ ಟಿಪ್ಪಣಿ ಬರೆಯಿರಿ