ಮುಯ್ಯಿಗೆ ಮುಯ್ಯಿ…

ಮುಯ್ಯಿಗೆ ಮುಯ್ಯಿ… ಪಾಕ್ನಂಥ ದೇಶಗಳಿಗೆ ಅರ್ಥವಾಗೋ ಭಾಷೆ ಇದೇ. ಪುಲ್ವಾಮಾ ಕ್ರೌರ್ಯಕ್ಕೆ ಆಗಸದಿಂದ ಬಂದೆರಗಿತು ಆಪತ್ತು, ಸೇಡು. ವಾಯುಸೇನೆಯ ಅದ್ಭುತ ಸಾಹಸಕ್ಕೆ ದೇಶ ಮಾತ್ರವಲ್ಲ ಇಡೀ ವಿಶ್ವವೇ ಭೇಶ್ಎಂದು ಹೊಗಳಿತು.

ಜೈ ಹೋ!!!

#ಭಾರತ #ಪಾಕಿಸ್ತಾನ #ವಾಯುಸೇನೆ #IAF #ಪುಲ್ವಾಮಾ #ಕಾಶ್ಮೀರ

ನಿಮ್ಮಜ್ಜಿ ನಿಮ್ಗ್ ಹೇಳ್ಕೊಟ್ಟ ಪಾಠ ಏನು?

ನಿಮ್ಮಜ್ಜಿ ನಿಮ್ಗ್ ಹೇಳ್ಕೊಟ್ಟ ಪಾಠ ಏನು?

ಮೂರೂ ಬಿಟ್ಟೋರು ಊರಿಗ್ ದೊಡ್ಡೋರು, ಅಂಥವರ ಬಗ್ಗೆ ತಲೆ ಕೆಡುಸ್ಕೊಳ್ಬೇಡ …”

ಇದು ನನ್ನಜ್ಜಿ ನನಿಗ್ ಹೇಳ್ಕೊಟ್ಟ ಪಾಠ.

#ಅಜ್ಜಿ #ಪಾಠ #ಕನ್ನಡ #ನೀತಿ #ಅನುಭವ

ಬೀದಿ ಫುಟ್ ಬಾಲ್

ನನ್ನ ಫ್ಲಾಟ್ ನ ಹತ್ತಿರ ಐದಾರು ಸೌದಿ ಹುಡುಗರು ಬೀದಿ ಫುಟ್ ಬಾಲ್ ಆಡುತ್ತಿದ್ದರು. ಆಟದ ಮಧ್ಯೆ ಸುಮಾರು ೧೦-೧೨ ವರ್ಷ ಪ್ರಾಯದ ಹುಡುಗ ಅಲ್ಲೇ ಪಕ್ಕದಲ್ಲಿ ಊರುಗೋಲಿನೊಂದಿಗೆ ನಿಂತಿದ್ದ ವ್ಯಕ್ತಿಯ ಹತ್ತಿರ ಹೋಗಿ ಆತನ ಕಾಲಿಗೆ ಹೇಗೆ ಏಟಾಯಿತು ಎಂದು ಅನುಕಂಪದಿಂದ ವಿಚಾರಿಸಿ, ಆತನಿಗೆ ಹಸ್ತ ಲಾಘವ ನೀಡಿ ಮರಳಿದ ತನ್ನ ಆಟ ಮುಂದುವರೆಸಲು.

�ಬದುಕಿನ ನಾಗಾಲೋಟದಲ್ಲಿ ನಮಗೆ ಇಂಥ ದಯೆ ತೋರಿಸಲು ಸಮಯ ಸಿಗೋಲ್ಲ, ಅಥವಾ ಅದರ ಕಡೆ ನಾವು ಗಮನ ಹರಿಸೋಲ್ಲ. ಈ ಪುಟ್ಟ ಹುಡುಗ ಒಂದು ಸುಂದರ ಪಾಠ ನನಗೆ ನೀಡಿದ. ಎಲ್ಲೆಲ್ಲೂ ಹಿಂಸೆ, ಅಸಹನೆ, ಹಗೆ, ಧ್ವೇಷ, ಅವುಗಳ ಮಧ್ಯೆ ಇಂಥ ಅವಿಸ್ಮರಣೀಯ ದೃಶ್ಯ.

ಅರಬ್ ಅಥವಾ ಅರಬೇತರ, ಮಾನವೀಯತೆ ಮಾತ್ರ ನಿರಂತರ, ಅಲ್ವಾ?

#ಅರಬ್ #ದಯೆ #ಅನುಕಂಪ #ಸೌದಿ

ಹೊಡಿಯೋ ಗಂಡನಿಗೆ ಪ್ರೀತಿ ಜಾಸ್ತಿ ಅಂತೆ

ಹೊಡಿಯೋ ಗಂಡನಿಗೆ ಪ್ರೀತಿ ಜಾಸ್ತಿ ಅಂತೆ. ನಮ್ಮಲ್ಲಿ ಮಾತ್ರ ಅಲ್ಲ, ರಶ್ಯಾದಲ್ಲೂ ಇದೇ ನಂಬಿಕೆ.

ರಷ್ಯಾದಲ್ಲಿ, ಹಿಂಸೆಗೆ ತಿರುಗುವ ಗೃಹ ಕಲಹಕ್ಕೆ ಶಿಕ್ಷೆ ಕಡಿಮೆ ಮಾಡುವ ಬಗೆಗಿನ ಕಾಯಿದೆಗೆ ಅಧ್ಯಕ್ಷ ಪ್ಯೂಟಿನ್ ಸಹಿ ಹಾಕಿದ್ದಾರೆ. ಅದರ ಬೆನ್ನಲ್ಲೇ ಅಲ್ಲಿನ ಪ್ರಸಿದ್ಧ ಪತ್ರಿಕೆಯೊಂದು ಗಂಡಂದಿರಿಂದ ಹೊಡೆತ ತಿನ್ನೋ ನಾರೀಮಣಿಗಳಿಗೆ ಮುತ್ತಿನ ಹಾರದಂಥ ಸಲಹೆಯನ್ನೂ ಕರುಣಿಸಿದೆ. ಅದೆಂದರೆ…

ಮಹಿಳೆಯರು ತಮ್ಮ ಮೈಮೇಲಿನ ಬರೆ, ಬಾಸುಂಡೆಗಳ ಬಗ್ಗೆ ಹೆಮ್ಮೆ ತಾಳಬೇಕಂತೆ. ಶಿವ ಸಿವಾ…ಎಲ್ಲಿಗ್ ಬಂದು ಮುಟ್ತಪ್ಪಾ ಈ ತಿಳಿಗೇಡಿತನ?

ತಡೀರಿ, ಇನ್ನಷ್ಟು ಕೋಸಂಬ್ರಿ ಬರ್ತಾ ಇದೆ…

ಅಲ್ಲಿನ ಖ್ಯಾತ ಸಮಾಜ ಶಾಸ್ತ್ರಜ್ಞ ಈ ಮುತ್ತನ್ನು ಉದುರಿಸಿದ, ಹೆಕ್ಕಿಕೊಳ್ರಪ್ಪಾ ಅಂತ. ಅದೇನೂಂದ್ರೆ….

ಹೊಡಿಯೋ ಬಡಿಯೋ ಗಂಡುಸ್ರು ಗಂಡು ಮಕ್ಳನ್ನೇ ಹುಟ್ಟುಸ್ತಾರಂತೆ.

ಅಲ್ಲಾ, ಇದೆಲ್ಲಾ ಓದಿದ್ ಮ್ಯಾಲೆ, ಒಂದ್ಸಲ ರಷ್ಯಾಗ್ ಹೋಗಿ ಹಣಕಿ ಹಾಕ್ ಬರೋಣ ಅಂತ ಅನ್ನುಸ್ತಾ ಇಲ್ವಾ?

ಈಗ ಮಲ್ಕಳಿ, ಬಾಸುಂಡೆ, ಬೋಂಡಾ ಎಲ್ಲಾ ಕನಸಲ್ಲಿ ಪಾರ್ಸಲ್ ಬರತ್ತೆ. ಗುಡ್ ನೈಟ್.