ಜಿಹಾದ್

ಜಿಹಾದ್ ಬಗ್ಗೆ ತಪ್ಪು ಗ್ರಹಿಕೆಗಳು ವ್ಯಾಪಕವಾಗಿದೆ. ಕಾರಣ, ಸರಿಯಾದ ವಿದ್ಯಾಭ್ಯಾಸವಿಲ್ಲದ ಸಂಸ್ಕಾರ ವಿಹೀನರು ಪತ್ರಕರ್ತರಾಗಿ ಜನರನ್ನು ದಾರಿ ತಪ್ಪಿಸುತ್ತಿರುವುದು.

ಜಿಹಾದ್ ಎಂದರೆ “ಪ್ರಯತ್ನ ಅಥವಾ ಹೋರಾಟ” ಅಂತ. ಮದ್ಯವ್ಯಸನಿಯಾದ ವ್ಯಕ್ತಿಯೊಬ್ಬ ಮದ್ಯದ ಚಟದಿಂದ ಹೊರಬರಲು ಶ್ರಮಿಸಿದಾಗ,

ಜೂಜುಕೋರ ವ್ಯಕ್ತಿಯೊಬ್ಬ ಜೂಜಿನ ಚಟದಿಂದ ವಿಮುಕ್ತನಾಗಲು ಬಯಸಿದಾಗ,

ಅಥವಾ,

ಮತ್ಯಾವುದೇ ದುರ್ಚಟಗಳಿಗೆ ಬಿದ್ದು ಸೋತು ಕಂಗಾಲಾದ ಯಾವನಾದರೂ ತಾನು ಒಳ್ಳೆಯ ಪ್ರಜೆಯಾಗಿ, ಸನ್ನಡತೆಯನ್ನು ರೂಢಿಸಿ ಕೊಂಡು ಜೀವನದಲ್ಲಿ ಯಶಸ್ಸನ್ನು ನೆಮ್ಮದಿಯನ್ನು ಕಂಡು ಕೊಳ್ಳಬೇಕು ಎನ್ನುವ ಹಂಬಲದಿಂದ ನಡೆಸುವ ಹೋರಾಟ, ಪರಿಶ್ರಮವೇ “ಜಿಹಾದ್”.

#ಜಿಹಾದ್ #Islam #Word #India

ನಿಮ್ಮ ಟಿಪ್ಪಣಿ ಬರೆಯಿರಿ