ಭಾಷೆಗಳ ಸ್ವಾರಸ್ಯ

ಭಾಷೆಗಳ ಅಧ್ಯಯನ ಸ್ವಾರಸ್ಯಕರ. ನಮಗೆ ಕೇಳ ಸಿಗುವ ಸಾವಿರಾರು ಭಾಷೆಗಳಲ್ಲಿ ಪ್ರತಿಯೊಂದರಲ್ಲೂ ವಿಶೇಷಾಂಶಗಳು ಖಂಡಿತ ಇರುತ್ತವೆ. ಪ್ರೊ. ಜಿ. ವೆಂಕಟಸುಬ್ಬಯ್ಯನವರ “ಇಗೋ ಕನ್ನಡ” ಸಾಮಾಜಿಕ ನಿಘಂಟು ಸ್ವಾರಸ್ಯದ ಗಣಿಯನ್ನೇ ಒಳಗೊಂಡಿದೆ. ಆಫ್ರಿಕಾದ “ಮಸಾಯಿ ಮಾರಾ” ಬುಡಕಟ್ಟಿನವರು ಮಾತನಾಡುವ ಭಾಷೆಯಲ್ಲಿ, ದೊಡ್ಡ ವಸ್ತುವನ್ನು “ಪುಲ್ಲಿಂಗ” ಎಂತಲೂ, ಚಿಕ್ಕ ವಸ್ತುವನ್ನ “ಸ್ತ್ರೀ ಲಿಂಗ” ಎಂತಲೂ ಗುರುತಿಸುತ್ತಾರಂತೆ. ಹಾಗೆಯೇ ಆನೆಯ ಲದ್ದಿ ‘ಪುಲ್ಲಿಂಗ’ ವಾದರೆ, ಆಡಿನ ಹಿಕ್ಕೆ ‘ಸ್ತ್ರೀ ಲಿಂಗ’. ಚಿಕ್ಕ ಗಾತ್ರದ್ದಕ್ಕೆಲ್ಲಾ ಹೆಣ್ಣಿನೊಂದಿಗೆ ಸಂಬಂಧ ಜೋಡಿಸೋ ಈ ಭಾಷೆಗಳ ಜನರಲ್ಲೂ ಹೆಣ್ಣು ಅಬಲೆ ಎನ್ನೋ ಮನೋಭಾವ ಇರಲೇ ಬೇಕಲ್ಲವೇ? ಇರದೇ ಏನು? ಹೆಣ್ಣನ್ನು ತುಚ್ಚೀಕರಿಸುವುದರಲ್ಲಿ ಮಾತ್ರ ಎಲ್ಲಾ ಬಗೆಯ ಜನರಲ್ಲೂ ಸಮನತೆಯನ್ನು ನಾವು ಕಾಣಬಹುದು. ಈಗ ಚರ್ಚೆ ಶುರು ಹಚ್ಚಿಕೊಂಡಿರೋದು ಶಬ್ದಗಳಲ್ಲಿ, ಪದಗಳಲ್ಲಿ ಸ್ತ್ರೀ ಲಿಂಗ ಮತ್ತು ಪುಲ್ಲಿಂಗದ ಪಾರುಪತ್ಯದ ಬಗ್ಗೆ. ಹೆಣ್ಣು ಗಂಡಿನ ಮಧ್ಯೆ ಕಲಹ ತರೋದಲ್ಲ. ಹಾಗಾಗಿ ರಿಟರ್ನ್ ಟು ದ ಸಬ್ಜೆಕ್ಟ್…

ಸ್ಕ್ರೂ (screw) ನಿಮಗೆ ಗೊತ್ತೇ ಇದೆಯಲ್ಲ? ಆಂಗ್ಲ ಭಾಷೆಯಲ್ಲಿ ಈ ಸ್ಕ್ರೂಗೂ ಪುಲಿಂಗ ಸ್ತ್ರೀಲಿಂಗ ಅನ್ವಯ ಆಗುತ್ತೆ. ಹಾಂ…, ಹೇಗೆ…? ಹೀಗೆ… male screw, female screw. ನಟ್ಟು ಬೋಲ್ಟು ಟೈಟ್ ಮಾಡೋದನ್ನ ನೋಡಿದ್ದೀರಿ. ಒಳಗೆ ಹೋಗೋ ಸ್ಕ್ರೂ ವನ್ನು ಮೇಲ್ ಸ್ಕ್ರೂ ಎಂತಲೂ, ಒಳಕ್ಕೆ ಬಿಡಿಸಿ ಕೊಳ್ಳುವ ಸ್ಕ್ರೂ ವನ್ನು ಫೀಮೇಲ್ ಸ್ಕ್ರೂ ಎಂತಲೂ ಕರೆಯುತ್ತಾರೆ.

ಅರಬ್ಬೀ ಭಾಷೆಯಲ್ಲಿ ಒಬ್ಬ ಗಂಡು “ಶುಕ್ರನ್” (ವಂದನೆಗಳು) ಎಂದು ಮಹಿಳೆಗೆ ಹೇಳುವಾಗ “ಅಷ್ಕುರುಕೀ” ಎನ್ನುತ್ತಾನೆ. ಮಹಿಳೆ, ಗಂಡಿಗೆ “ಅಷ್ಕುರಕ್” ಎನ್ನುತ್ತಾಳೆ.

ಇದೇ ನಿಘಂಟಿನಲ್ಲಿ ನಾವು ಬಹು ಮಹಡಿ ಕಟ್ಟಡ, ಮಾಲುಗಳಲ್ಲಿ ಉಪಯೋಗಿಸೋ ಎಲಿವೇಟರ್ ಅಥವಾ ಲಿಫ್ಟ್ ಗೆ “ಏರಿಳಿ” ಎಂದು ಪ್ರಚಾರಕ್ಕೆ ತರಬೇಕು ಎಂದು ಲೇಖಕ ಬಯಸುತ್ತಾರೆ. ಹತ್ತುವುದಕ್ಕೆ ಇಳಿಯುದಕ್ಕೆ ಇರೋ ಯಾಂತ್ರಿಕ ಸಾಧನ ಅಥವಾ ವ್ಯವಸ್ಥೆಗೆ “ಏರಿಳಿ’ ಎಂದು ಉದ್ದದ ಪದ ಉಪಯೋಗಿಸೋ ಬದಲು ನಮ್ಮ ಅದೇ ಹಳೆಯ, ಕಾಲ ಬದಲಾದರೂ ನಾನು ಬದಲಾಗೋಲ್ಲ ಎಂದು ಹಠ ಹಿಡಿದು “ನಿಂತಿರುವ” ಏಣಿ ಎನ್ನುವ ಪದವನ್ನ ಉಪಯೋಗಿಸಬಾರದೆ? ‘ಏರಿಳಿ’ ಗೆ ಬದಲಾಗಿ ಏಣಿ ಎಂದು ಬಿಟ್ಟರೆ ಹೇಗೆ? ಏಣಿ ಎಲಿವೇಟರ್ ಮಾಡೋ ಕೆಲದವನ್ನ ತಾನೆ ಮಾಡೋದು?

ಎಲಿವೇಟರ್ ಗೋ ವಿದ್ಯುಚ್ಛಕ್ತಿ ಬೇಕು, ನಮ್ಮ ಏಣಿಗೆ ಏನೂ ಬೇಡ. ಸ್ವಲ್ಪ ತಾಕಿಸಿ ಕೊಂಡು ನಿಲ್ಲಲು ಗೋಡೆಯದೋ ಮತ್ಯಾವುದಾದರದೋ ಆಸರೆ ಸಾಕು….

…ಪರಸ್ಪರ ಆಸರೆ ಇದ್ದರೆ ಮನುಷ್ಯ ಮೇಲಕ್ಕೆ ಇರಬಹುದು, ಹೇ ಹೇ. ನೋಡಿ ಉದಾತ್ತ ಆಶಯ ಕೂಡಾ ಹೊಕ್ಕಿಕೊಂಡಿತು ಭಾಷೆಯ ಚರ್ಚೆಯಲ್ಲಿ.
ಮೇಲೆ ಹೇಳಿದ ಎಲ್ಲಾ ವಿಷಯಗಳೂ ಆ ನಿಘಂಟಿನಲ್ಲಿ ಕಾಣಲು ಸಿಗೊಲ್ಲ. ಕೆಲವು ನನ್ನ ಅನುಭವದ ಮೂಸೆಯಿಂದ ಬಂದಿದ್ದು.

Advertisements

ಪ್ರೇಮದ ಕಾದಂಬರಿ, ಬರೆದೇ ನಾ….

waveloveimage

ಈ ಬರಹದ ಶೀರ್ಷಿಕೆಯ ಸಾಲನ್ನು ಓದಿದ ಕೂಡಲೇ ನೆನಪು ದಶಕಗಳ ಹಿಂದೆ ಓಡುತ್ತದೆ ಅಲ್ಲವೇ?

ಪ್ರೇಮದಾ ಕಾದಂಬರಿ, ಬರೆದೆ ನಾ ಕಣ್ಣೀರಲಿ,
ಕಥೆಯು ಮುಗಿದೇ ಹೋದರೂ
ಮುಗಿಯದಿರಲೀ ಬಂಧನಾ…

ಬರಹದೊಂದಿಗೆ ಸೇರಿಸಿದ ಚಿತ್ರ ನೋಡುತ್ತಲೇ ಈ ಹಾಡು ನೆನಪಾಯಿತು. ಚಿತ್ರದಲ್ಲಿ ಕಡಲ ತೆರೆಯು ಸೃಷ್ಟಿಸಿದ ಈ ಪ್ರೇಮದ ಸಂಕೇತ ಎಷ್ಟು ಚೆನ್ನಾಗಿ ಮೂಡಿ ಬಂದಿದೆ ನೋಡಿ..

ಈ ಬಾಡಿ ಬಿಲ್ಡರ್ ಗೆ ಬರೀ ೯೩ ವರ್ಷ ಕಣ್ರೀ…

ಹೌದು ಲೆಕ್ಕ ತಪ್ಪಿಲ್ಲ, ೩೯ ಅಲ್ಲ, ಪೂರ್ತಿ ೯೩.  ನೈನ್ಟೀ ತ್ರೀ. ೯೩ ರ ಡಾಕ್ಟರ್ ಚಾರ್ಲ್ಸ್ ಯುಗ್ಸ್ಟರ್ ಇಳಿ   ವಯಸ್ಸಾದರೂ ಸ್ಫೂರ್ತಿ ಮತ್ತು ಆರೋಗ್ಯದ ಚಿಲುಮೆ. ‘ಜಿಮ್’ ಒಳಕ್ಕೆ ಹೊಕ್ಕರೆ ೨೧ ವರ್ಷದ ಪೋರರೂ ಸದ್ದಿಲ್ಲದೇ ಗಂಟು ಕಟ್ಟಬೇಕು ಇವರ ವರ್ಕ್ ಔಟ್ ನೋಡಿ. ಸಾಧಾರಣವಾಗಿ ೭೦ ದಾಟುತ್ತಿದ್ದಂತೆ ಜನ ಕೋಲು ಹಿಡಿಯುತ್ತಾರೆ, ಗೋಡೆ ಸವರುತ್ತಾ ನಡೆಯುತ್ತಾರೆ, ವೀಲ್ ಚೇರ್ ಗುಲಾಮ ರಾಗುತ್ತಾರೆ ಇಲ್ಲಾ ಹಾಸಿಗೆ ಹಿಡಿಯುತ್ತಾರೆ. ಅಪರೂಪಕ್ಕೆ ಎಂಭತ್ತು ತೊಂಭತ್ತು ದಾಟಿದವರು ಗಟ್ಟಿ ಮುಟ್ಟಾ ಗಿ ಇರೋದು ಕಾಣಲು ಸಿಗುತ್ತಾರೆ. ತೊಂಭತ್ತರ ಹತ್ತಿರ ಇರುವ ಕೇರಳದ ಮಾಜಿ ಮುಖ್ಯಮಂತ್ರಿ ವೀ. ಎಸ್. ಅಚ್ಯುತಾನಂದನ್, ಈಗ ವಿಪಕ್ಷ ನಾಯಕ. ಎಂ, ಎಫ್ ಹುಸೇನ್ ಸಹ ಇಳಿ ವಯಸ್ಸನ್ನು ಅಣಕಿಸಿದವರ ಸಾಲಿಗೆ ಸೇರಿದವರು. ರಾಜಕಾರಣಿಗಳು ದೀರ್ಘಾಯುಷಿಗಳು, ನನ್ನ ಪ್ರಕಾರ. ಕಣ್ಣಿಗೆ ಕಂಡವರದ್ದನ್ನೆಲ್ಲಾ ನುಂಗೀ, ನುಂಗೀ ಅದೂ ಒಂದು ರೀತಿಯ ವ್ಯಾಯಮವೇನೋ ಎಂದು ನಮಗೆ ತೋರ ಬೇಕು, ಆ ತೆರನಾದ ಆರೋಗ್ಯ. ಹಾಗಾದರೆ ನಾವೆಲ್ಲರೂ ಬಯಸುವ, ತಹ ತಹಿಸುವ ಚಿರ ಯೌವ್ವನ ಅನ್ನೋದು ಇದೆಯೇ? ಇಲ್ಲಾ ಎಂದೇ ವೈದಕೀಯ ವಲಯದ ತೀರ್ಪು. ಆದರೆ ಯಾವಾಗಲೂ ಚಟುವಟಿಕೆಯಿಂದ ಇರುತ್ತಾ, ಸಿಕ್ಕಿದ್ದನ್ನೆಲ್ಲಾ ಉದರಕ್ಕೆ ಇಳಿ ಬಿಡದೆ ಕೇರ್ಫುಲ್ ಆಗಿದ್ದರೆ ಊರ ಹೊರಗಿನ ಚಿರ ಯಾತ್ರೆ ಸ್ವಲ್ಪ ಮುಂದೂಡ ಬಹುದು ಅಷ್ಟೇ. ಈಗಿನ ಕಾಲದ ಈಟಿಂಗ್ ಹ್ಯಾಬಿಟ್ಸ್, sedantary lifestyle ಕಾರಣ ಹದಿಹರೆಯದ ಹುಡುಗರಿಂದ ಹಿಡಿದು, ೨೦, ಮೂವತ್ತು, ನಲವತ್ತರ ಯುವಕರು ದಿಢೀರ್ ಎಂದು ಕಾರ್ಡಿಯಾಕ್ ಖಾಯಿಲೆಗೆ ಬಲಿಯಾಗುತ್ತಿರುವುದು ದುರದೃಷ್ಟಕರ. ಹೃದ್ರೋಗಕ್ಕೆ ಬಲಿಯಾದ ನಮ್ಮ ಸ್ನೇಹಿತರ, ಪರಿಚಯಸ್ಥರ, ನೆಂಟರಿಷ್ಟರ ನ್ನು ನೋಡಿಯೂ ನಾವು ವ್ಯಾಯಾಮದ ಕಡೆ ಗಮನ ಹರಿಸುತ್ತಿಲ್ಲ.

ನನ್ನ ಕತೆಯಂತೂ ಇನ್ನಷ್ಟು ಶೋಚನೀಯ. ವಾಕಿಂಗ್, ಜಾಗಿಂಗ್, ಸೈಕ್ಲಿಂಗ್ ಗೆ ಬೇಕಾದ ಎಲ್ಲಾ ‘ಗೇರ್’ ಗಳಿದ್ದಾಗ್ಯೂ ಒಂದು ದಿನ ಹೋದರೆ ಎರಡು ವಾರ ರೆಸ್ಟ್. ನನ್ನನು ಕಟ್ಟಿಕೊಂಡು ನಡೀ ಎಂದು ದುರುಗುಟ್ಟುವ  ನೈಕೀ ಶೂ ನೋಡಿದ ಕೂಡಲೇ ಕಟುಕನ ಕೈಯ ಕತ್ತಿ ನೆನಪಾಗುತ್ತದೆ ನನಗೆ.  ಮಡದಿ ಎಷ್ಟೇ ಗೋಗರೆದರೂ ಊಹೂಂ ಎನ್ನುವ ಮೊಂಡುತನ. ನಡಿಗೆ monotonous ಎಂದು ಹೇಳಿ ಸೈಕಲ್ ಕೊಂಡು ಕೊಂಡೆ. ಪರ್ಸ್ ನ ಭಾರ ಕಡಿಮೆಯಾಯಿತೇ ವಿನಃ ಬೊಜ್ಜಿನ ಪ್ರಮಾಣ ಇಳಿಯಲಿಲ್ಲ. ಸೈಕಲ್ ನ  ಗಾಳಿ ಹೋದಾಗ ಗಾಳಿ ತುಂಬಿಸೋದು ಮಗನ ರೂಮಿನ ಮೂಲೆಗೆ ಅದನ್ನು ವಾಲಿಸಿ ಇಡೋದು, ಈ ಕೆಲಸವನ್ನ ಆವರ್ತಿಸಿ, ಆವರ್ತಿಸಿ ಸಾಕಾಗಿ ಹೋದರೂ ಇದುವರೆಗೆ ಒಂದೈದು ಕಿ. ಮೀ ದೂರ ಕ್ರಮಿಸಿಲ್ಲ. ದಿನಕ್ಕೆ ಸುಮಾರು ನಾಲ್ಕರಿಂದ ಐದು ಕೀ. ಮೀ. ಸೈಕ್ಲಿಂಗ್ ಮಾಡಿದರೆ ಹೃದ್ರೋಗದಿಂದ ಗೊಟಕ್ ಆಗುವ ಚಾನ್ಸ್ ಸುಮಾರು ಶೇಕಡಾ ಐವತ್ತು ಕಡಿಮೆಯಂತೆ. ಜಾಗಿಂಗ್ ಮಾಡಲು ಆಗದಿದ್ದರೂ, ಬಿರುಸಾದ ನಡಿಗೆ ಜಾಗಿಂಗ್ ಗಿಂತ ಒಳ್ಳೆಯದಂತೆ. ಒಟ್ಟಿನಲ್ಲಿ ಸೋಫಾದ ಮೇಲೆ ಕುಕ್ಕರು ಬಡಿಯುವುದಕ್ಕಿಂತ ಸೊಂಟ ನೆಟ್ಟಗೆ ಮಾಡಿ ಕಾರು, ಬೈಕಿನ ಕೀಲಿ ಮನೆಯಲ್ಲಿ ಬಿಟ್ಟು  ಮನೆಯಿಂದ ಹೊರಹೋದರೆ ಅಷ್ಟೊಂದು ಲಾಭ ನಮ್ಮ ಶರೀರಕ್ಕೆ. ಮೇಲೆ ಹೇಳಿದ ೯೩ ವರ್ಷದ ಬ್ರಿಟಿಶ್ ಡಾಕ್ಟರ್ ಥರ ವಲ್ಲದಿದ್ದರೂ ನಮ್ಮ ಕೈಗೋ, ಕಾಲಿಗೋ ಆಗುವ ಅಷ್ಟಿಷ್ಟು ಸಾಹಸದಲ್ಲಿ ನಾವು ತೊಡಗಿಸಿ ಕೊಳ್ಳದಿದ್ದರೆ ನಷ್ಟ ಮಾತ್ರ  ತುಂಬಲಾರದ್ದು.

ನೈಕೀ ಶೂ ಗಳ ದುರುಗುಟ್ಟು ವಿಕೆಯಿಂದ ಮೆಲ್ಲಗೆ ಪಾರಾಗಿ  ಸೈಕಲ್ ಹತ್ತಿರ ಬಂದರೆ ಮತ್ತೊಮ್ಮೆ ಹೋಗಿದೆ ಅದರ ಗಾಳಿ. ಗಾಳಿ ತುಂಬಿಸಿ ಈ ಸಂಜೆಯಿಂದಲೇ ಶುರು ಮಾಡುತ್ತೇನೆ ನನ್ನ ಮನೆಯ ಹೊರಗಿನ ವರ್ಕ್ ಔಟ್ ಯಾತ್ರೆ. ನೀವೂ ರೆಡಿ ತಾನೇ?

ಚಿತ್ರ ಕೃಪೆ. yahoo.com

ಗಳ ಗಳ ಅತ್ತಳಾ ಪೋರಿ?

ಈ ತಮಾಷೆ ಓದಿ. ಮಾಧ್ಯಮಗಳು ಮಾಡುವ ವರದಿಗಳು, ಯಾವುದಾದರೂ ಒಂದು ವಿಶೇಷ ಸಿಕ್ಕಿ ಬಿಟ್ಟರೆ ಹಗಲೂ ರಾತ್ರಿ ಅದರ ಬಗ್ಗೆ ಪುಂಖಾನು ಪುಂಖವಾಗಿ ಇರುವುದನ್ನೂ, ಇಲ್ಲದ್ದನ್ನೂ, ಸೇರಿಸಿ, ಕೂಡಿಸಿ, ಕಳೆದು,  ಒದರೀ, ಒದರೀ ನಮ್ಮ ಚಿತ್ತ ಕೆಡಿಸೋ ಪರಿಪಾಠಕ್ಕೆ ನಾವು ಒಗ್ಗಿ ಕೊಂಡಿದ್ದೇವೆ. ಹಾಳಾದ ಮೀಡಿಯಾ ದವರಿಗೆ ಏನಾದರೂ ಸಿಕ್ ಬಿಟ್ರೆ ಸಾಕು ೨೪ ಘಂಟೆ ಅದರ ಬಗ್ಗೆಯೇ ಬಡ್  ಕೊಳ್ತಾರೆ ಎಂದು ಗೊಣಗಿ ಸುಮ್ಮನಿರುತ್ತೇವೆ.

ಈಗ ಅಮೆರಿಕೆಯಲ್ಲಿ ಚುನಾವಣೆಯ ಬಿಸಿ, ನಮ್ಮ ದೇಶದಲ್ಲಿ ಬೆಳಗಾದರೆ  ಹೊಸ ಹೊಸ ವೇಷದ ಲಂಚ ಗುಳಿಗಳ ಬಗ್ಗೆ  ವರದಿಯಾಗುವಂತೆ ಅಲ್ಲಿ ಯಾರು ಈ ಬಾರಿ ಅಧ್ಯಕ್ಷರಾಗಬಹುದು ಎನ್ನುವದರ ಮೇಲೆ ಅವಿರತ ಚರ್ಚೆ. “ಬ್ರಾನ್ಕೋ” ಒಬಾಮ  ಮಿಟ್ ರಾಮ್ನಿ ಬಗ್ಗೆ ಕೇಳೀ ಕೇಳೀ ಸಾಕಾಯಿತು ಎಂದು ನಾಲ್ಕು ವರ್ಷದ ಅಬಿಗೇಲ್ ಇವಾನ್ಸ್ ಕಣ್ಣೀರಿಟ್ಟಳು. ಈಕೆಗೆ ಅಮೆರಿಕೆಯ ಖ್ಯಾತ npr (national dpublic radio) ಚಪಲವೋ ಏನೋ.  ಈ ಅಳುವಿಗೆ ಕರುಳು ಚುರುಕ್ಕೆನಿಸಿ ಕೊಂಡ ಹೆತ್ತಬ್ಬೆ ಅಬಿಗೇಲ್ ಳನ್ನು ಸಂತೈಸಲು ಓಡಲಿಲ್ಲ. ಬದಲಿಗೆ ಕಪಾಟಿನತ್ತ ಓಟ ಕಿತ್ತು ಹೊರತಂದಳು ವೀಡಿಯೊ ಕ್ಯಾಮ್. ಮಗಳ ‘ಗಳ ಗಳ’ ದ ಶೂಟಿಂಗ್ ಮಾಡಿ ಏನಾದರೂ ಹೊಸ ಸ್ವಾರಸ್ಯಕ್ಕಾಗಿ  ಮೀಡಿಯಾದ ಥರವೇ ಬಾಯ್ಬಿಟ್ಟು ಕೂತ ‘ಯೂ ಟ್ಯೂಬ್’ ನ ಬಾಯಿಗೆ ತಳ್ಳಿದಳು. ಎರಡು ಮೂರು ದಿನಗಳಲ್ಲಿ ಪೋರಿಯ ಅಳುವಿನ ಈ ಕ್ಲಿಪ್ ೧೫ ಲಕ್ಷಕ್ಕೂ ಅಧಿಕ ಜನ ವೀಕ್ಷಿಸಿದರು. ಈ ಪುಟ್ಟ ಹುಡುಗಿಯ ಅಳುವನ್ನು ನೋಡಿದ ‘npr ರೇಡಿಯೋ ‘ ಅವಳ ತಾಯ ರೀತಿ ಪಬ್ಲಿಸಿಟಿ ಗೊಡವೆಗೆ ಹೋಗದೆ ನೇರಾ ನೇರಾ ಕ್ಷಮೆ ಯಾಚಿಸಿತು, “We must confess, the campaign’s gone on long enough for us, too. Let’s just keep telling ourselves: ‘Only a few more days, only a few more days, only a few more days.'”

ಈಗ ಯೋಚಿಸಿ. ನಮ್ಮ ದೇಶದ ಮಾಧ್ಯಮ ಈ ರೀತಿ ಕ್ಷಮೆ ಯಾಚಿಸ ಬಹುದೇ?  ಜನರನ್ನು ಬೋರ್ ಹೊಡೆಸಿದ್ದಕ್ಕೆ ಕೇಳುವ ಕ್ಷಮೆ ಇರಲಿ, ತೇಜೋವಧೆ, ಇಲ್ಲ ಸಲ್ಲದ ಗುಮಾನಿಗಳನ್ನು ಸೃಷ್ಟಿಸಿದ್ದಕ್ಕೆ, ಅಷ್ಟೇಕೆ ಇಡೀ ಊರಿಗೆ ಊರನ್ನೇ ಕೆಟ್ಟ ರೀತಿಯಲ್ಲಿ ಪ್ರತಿಬಿಂಬಿಸುವ ನಾಚಿಕೆ ಗೆಟ್ಟ, ಸಂಸ್ಕಾರ ವಿಹೀನ ಮಾಧ್ಯಮಗಳಿಗೆ  ಕ್ಷಮೆ ಕೇಳುವ ಸಂಸ್ಕಾರ ಎಲ್ಲಿಂದ ಬರಬೇಕು?

pic courtesy: yahoo.com

ವಿದ್ಯೆಗಿಲ್ಲ ದಿಕ್ಕು ದಿಶೆ

ವಿದ್ಯೆ ಯಾವ ಕಡೆಯಿಂದ ಬರುತ್ತದೆ ಎಂದು ಹೇಳಲು ಬರುವುದಿಲ್ಲ. ವಿದ್ಯಾರ್ಥಿಗಳಾಗಿದ್ದಾಗ  ಶಿಕ್ಷಕ, ಲೆಕ್ಚರರ್  ಪ್ರೊಫೆಸರ್ ಗಳಿಂದ ನಮಗೆ ಶಿಕ್ಷಣ ದೊರೆತರೆ ಬದುಕಿನ ಉದ್ದಕ್ಕೂ ಓರ್ವ ಯಾಚಕ ನಿಂದ ಹಿಡಿದು ಯಾರಿಂದಲೂ ನಮಗೆ ಕಲಿಯಲು ಸಿಗುತ್ತದೆ. ಜೆಡ್ಡಾ ದಲ್ಲಿ ಸಮುದ್ರ ತೀರದಲ್ಲಿ ಮಕ್ಕಳಿಗೆ  ಬೈಕ್ ಗಳ ಸೌಕರ್ಯವಿದೆ. ನಾಲ್ಕು ಗಾಲಿಗಳೂ ಚಲಾಯಿಸಲ್ಪಡುವ ಬೈಕ್ ಇದು. ಮರಳಿನಲ್ಲಿ ಹೂತು ಕೊಳ್ಳುವುದಿಲ್ಲ. ಆ ಬೈಕ್ ನೋಡಿದಾಗಲೆಲ್ಲಾ ನನ್ನ ೯ ವರ್ಷದ ಮಗನಿಗೆ ಅದನ್ನು ಸವಾರಿ ಮಾಡಲೇಬೇಕು. ಕ್ವಾಡ್ ಬೈಕ್ ಕ್ವಾಡ್ ಬೈಕ್ ಎಂದು ಓಡುತ್ತಾನೆ. ನನಗೆ ಈ ಪದದ ಬಗ್ಗೆ ಸರಿಯಾಗಿ ಗೊತ್ತಿರಲಿಲ್ಲ. ಬೈಕ್ ಏನೋ ಸರಿ, ಈ ‘ಕ್ವಾಡ್’ ಏನಪ್ಪಾ ಎಂದು. ಆದರೆ ಇದರ ಕುರಿತು ನನ್ನ ಮಗನಲ್ಲಿ ಎಂದೂ ಕೇಳಿರಲಿಲ್ಲ. ಎಲ್ಲೋ ಯಾರೋ ಹೇಳಿದ್ದನ್ನು ಕೇಳಿದ್ದಾನೆ, ಸರಿಯಾಗಿ ಉಚ್ಚರಿಸಲು ಬಾರದೆ ಕ್ವಾಡ್ ಎನ್ನುತ್ತ್ದ್ದಾನೋ, ಅದರ ಬಗ್ಗೆ ಅವನಿಗೆ ಗೊತ್ತಿದೆಯೋ ಇಲ್ಲವೋ ಎಂದು ನಾನು ಸುಮ್ಮನಿದ್ದೆ. ಮೊನ್ನೆಯ ಬಕ್ರೀದ್ ರಜೆಗೆ ಜೆಡ್ಡಾ ದಿಂದ ೧೨೦೦ ಕಿ, ಮೀ ದೂರವಿರುವ ರಿಯಾದ್ಹ್ ನಗರಕ್ಕೆ ಬಂದೆವು. ನಗರದಿಂದ ಸುಮಾರು ೮೦  ಕಿ ಮೀ ದೂರ ಇರುವ ತುಮಾಮಾ ಹೆಸರಿನ ಮರುಭೂಮಿ ಇದೆ. ಕೆಂಪಾದ, ನುಣ್ಣಗಿನ ಅಗಾಧ ಮರಳ ರಾಶಿ. ಕಣ್ಣು ಹಾಯಿಸಿದಷ್ಟೂ ಮರಳೋ  ಮರಳು. ಇಲ್ಲಿ four wheel drive ನ ಕಾರುಗಳು, ಬೈಕುಗಳು ಮಾತ್ರ ಚಲಿಸುತ್ತವೆ. ಅಲ್ಲೂ ಬಾಡಿಗೆಗೆ ಈ ಬೈಕ್ ಗಳು ಇದ್ದವು, ಸರಿ ಮಗ ನ ಒತ್ತಡಕ್ಕೆ ಮಣಿದು ಒಂದನ್ನು ಬಾಡಿಗೆಗೆ ಪಡೆದು ಕೆಮ್ಮರಳಿನಲ್ಲಿ ಚಲಾಯಿಸಿದ ದೆವು. ಮರಳಿನ ಗುಡ್ಡಗಳ ಮೇಲೆ ಸರಾಗವಾಗಿ ಓಡುವ ಬೈಕ್ ಚಲಾಯಿಸಲು ಖುಷಿಯಾಗುತ್ತದೆ. ಮನೆಗೆ ಮರಳಿ ಬಂದು ಯಾವುದೋ ವೆಬ್ ತಾಣ ತೆರೆದಾಗ ಕ್ವಾಡ್ ಬೈಕ್ ಪ್ರಸ್ತಾಪ ಎದುರಾಯಿತು. quad bike ನೋಡಿದ ಕೂಡಲೇ ಮಗನನ್ನು ಕರೆದು ‘ಕ್ವಾಡ್’ ನ ಸ್ಪೆಲ್ಲಿಂಗ್ ಏನು ಎಂದಾಗ q-u-a-d ಸರಿಯಾಗೇ ಉಚ್ಚರಿಸಿದ ಮಗರಾಯ. ಈಗ ನನಗೂ ಅರ್ಥವಾಯಿತು ಈ ಕ್ವಾಡ್ ಬಾಯಿ ಎಂದರೇನು ಎಂದು.

ನೋಡಿದಿರಾ ಶಿಕ್ಷಣ ಸಿಕ್ಕಿತಲ್ಲಾ ೯ ರ ಹರೆಯದ ಪೋರನಿಂದ.

“ತುಮಾಮಾ” ಬಗ್ಗೆ ಒಂದು ಮಾತು.

ಸಂಜೆ ನಾಲ್ಕೂವರೆ ಗೆ ತುಮಾಮಾ ತಲುಪಿದ್ದ ನಾವು ತಂದಿದ್ದ ಬುತ್ತಿಯನ್ನು ಮರಳು ಗಾಡಿನಲ್ಲಿ ಸುಮಾರು ೨೦೦ ಮೀಟರು ದೂರ ಹೋಗಿ ಎತ್ತರದ ಸ್ಯಾಂಡ್ ಡ್ಯೂನ್ಸ್ (ಮರಳ ರಾಶಿ) ನ ಮೇಲೆ ಕೂತು ಸುತ್ತಲಿನ ಪ್ರಕೃತಿ ವೀಕ್ಷಿಸುತ್ತಿದ್ದ್ದೆವು. ನಮ್ಮ ದೇಶದ ಥರ ಸುಂದರ ಗುಡ್ಡ ಗಾಡುಗಳೋ, ಗಿಡ ಮರಗಳೋ, ನದೀ ಹಳ್ಳ ಕೊಳ್ಳ ಗಳೋ ಕಾಣಲು ಸಿಗುವುದಿಲ್ಲ ಇಲ್ಲಿ. ಕಣ್ಣು ಹಾಯ್ಸಿದಷ್ಟೂ ಮರಳು. ಸುಮಾರು ನೂರು ಕಿ. ಮೀ. ವರೆಗೆ ದೃಷ್ಟಿ ನೆಡಬಹುದು. ಬಟಾಬಯಲು, ಮರಳು ತುಂಬಿದ ಬಯಲು. ಊಟ ಆದ ಕೂಡಲೇ ಸ್ವಲ್ಪ ಹೊತ್ತು ಹರಟುತ್ತಾ ಕೂರುತ್ತಿದ್ದಂತೆ ಆಗಸದಲ್ಲಿ ಮಿಂಚು ಕಾಣಿಸಿ ಕೊಳ್ಳಲು ತೊಡಗಿತು.  ಸ್ವಲ್ಪ ಗಾಭರಿಯಾದ ನಾನು ಮಳೆ ಗಿಳೆ ಬಂದೀತೆಂದು ಕೂಡಲೇ ಗಂಟು ಮೂಟೆ ಕಟ್ಟಿ ಎಲ್ಲರನ್ನೂ ಹೊರಡಿಸಿದೆ. ಮರಳಿನ ದಿನ್ನೆಯ ಮೇಲೆ ಇನ್ನೂ ಇಳಿದಿಲ್ಲ ದೂರದಲ್ಲಿ ಮರಳ ಬಿರುಗಾಳಿ ಆಗಮಿಸುವುದನ್ನು ಕಂಡ ಕೂಡಲೇ ನನ್ನ ಹೃದಯ ಬಾಯಿಗೆ ಬಂತು. ಪುಟಾಣಿ ಮಕ್ಕಳು, ನಾವು, ಮರಳು ಗಾಡಿನಲ್ಲಿ ಓಡಲು ಸಾಧ್ಯವೂ ಅಲ್ಲ. ನನ್ನ ಮಗಳನ್ನ ಎತ್ತಿಕೊಂಡು ಹೇಗಾದರೂ ಕಾರ್ ಪಾರ್ಕ್ ಕಡೆ ಹೋಗಿ ಮುಟ್ಟುವಾ ಎನ್ನುವಷ್ಟರಲ್ಲಿ ನಮ್ಮ ಕಡೆ ತಲುಪಿಯೇ ಬಿಟ್ಟಿತು ಬಿರುಗಾಳಿ. ಎಲ್ಲ ಕಡೆ ಕತ್ತಲು ಆವರಿಸಿಕೊಂಡಿತು. ಜನ ಚೆಲ್ಲಾ ಪಿಲ್ಲಿಯಾಗಿ ಓಡತೊಡಗಿದರು. ಮರಳಿನ ಆರ್ಭಟ ಜೋರಾಗುತ್ತಿತ್ತು. ಇಂಥ ಸ್ಯಾಂಡ್ storm ನಲ್ಲಿ ಸಿಕ್ಕು ಜನ ಸತ್ತ ಬಗ್ಗೆಯೂ ಸಾಕಷ್ಟು ಓದಿದ್ದೆ. ಈಗ ನನ್ನ ಸರತಿ ಬಂದು ಬಿಟ್ಟಿತೋ ಎನ್ನುವ ಅನುಮಾನ, ಭಯದಿಂದ, ನಾನು ಕಂಪಿಸುತ್ತಿದ್ದೆ. ಇಂಥ ಸನ್ನಿವೇಶದಲ್ಲಿ ಫೋರ್ ವೀಲ್ ಡ್ರೈವ್ ಮಾಡುತ್ತಿದ್ದವರಿಗೆ ತೊಂದರೆಯಿಲ್ಲ. ಮರಳಿನಲ್ಲಿ ಗಾಡಿ ಸಿಲುಕಿ ಕೊಳ್ಳುವುದಿಲ್ಲ. ಅಲ್ಲೇ ಹತ್ತಿರವಿದ್ದ ಬೆಂಗಳೂರಿನ ಶಿವಾಜಿ ನಗರದ ಕಡೆಯವರ ಫೋರ್ ವೀಲ್ ಗಾಡಿಯಲ್ಲಿ ರಸ್ತೆ ಬದಿಗೆ ಬಂದು ನನ್ನ ಕಾರನ್ನು ತಲುಪಿದಾಗ ಜೀವ ಮರಳಿ ಬಂತು. ಗಾಡಿಯಲ್ಲಿ ಎಲ್ಲರನ್ನೂ ತುಂಬಿಸಿ ಕೊಂಡು ಮುಂದೆ ಹೋಗುತ್ತಿದ್ದಂತೆ ನೂರಾರು ಕಾರುಗಳು ಬಂದ ದಾರಿಗೆ ಸುಂಕವಿಲ್ಲ ಎಂದು ರಸ್ತೆ ಆಕ್ರಮಿಸಿಕೊಂಡವು.

ಮರುಭೂಮಿಯ ಬಿರುಗಾಳಿ ಭಯಾನಕ ಎಂದು ಓದಿದ್ದೆ, ಕೇಳಿದ್ದೆ ಆದರೆ ಅನುಭವಿಸಿದ್ದು ಇದೇ ಮೊದಲು. ಕಾರು ಹೈ ವೇ ಗೆ ಬರುತ್ತಿದ್ದಂತೆ ಮಳೆ ಆರಂಭವಾಯಿತು. ಈ ಸ್ಯಾಂಡ್ ಸ್ಟಾರ್ಮ್ ಮತ್ತು ಬಿರುಗಾಳಿಯನ್ನು ಶಮನಗೊಳಿಸುವ ಮಳೆ ಎರಡೂ ಒಟ್ಟಿಗೆ ಬಂದಾಗ ವಾತಾವರಣ ಬದಲಾಗುತ್ತದೆ. ಸುಡುಬಿಸಿಲ ರಿಯಾದ್ಹ್ ಗೆ ಚಳಿಗಾಲದ ಪ್ರವೇಶ. ಈ ನಗರದ ಚಳಿ ಕೂಡಾ ಕುಖ್ಯಾತ. ಊಟಿ, ಕೆಮ್ಮಣ್ಣು ಗುಂಡಿಗಳು ಹಿಂದೆ ನಿಲ್ಲಬೇಕು, ಅಂಥಾ ಚಳಿ. ಒಟ್ಟಿನಲ್ಲಿ ಜೀವ ಅಡವಿಗೆ ಇಡಬೇಕಾಗಿ ಬಂದಿದ್ದ  ಒಂದು ಡೆಸರ್ಟ್ ಔಟಿಂಗ್ ಈ ರೀತಿ ಸುಖಾಂತವಾಗಿ ಮುಕ್ತಾಯವಾಯಿತು.

 

ಪ್ರಣಯಿಗಳ ಚಿತ್ರ. ಇದ್ಯಾವ ರೀತಿಯ ಪಿರೀತಿ ಕಾಣಮ್ಮೋ?

lonliest planet passionate couple ಇವರು. backpacking ಅಡ್ವೆಂಚರ್ ಬಗೆಗಿನ ಈ ‘lonliest planet ಚಿತ್ರದಲ್ಲಿ ನಿಗೂಢತೆ ಮನೆ ಮಾಡಿದೆಯಂತೆ. ರಷ್ಯಾದ ಕಾಕಸ್ ಬೆಟ್ಟಗಳ ಶ್ರೇಣಿಯ ತಪ್ಪಲಿನಲ್ಲಿ ನಡೆಸಿದ ಚಿತ್ರೀಕರಣ ಬದುಕಿನ ಡ್ರಾಮಾ ವನ್ನು ಸೊಗಸಾಗಿ ಪ್ರದರ್ಶಿಸುತ್ತದಂತೆ. ಈ ಚಿತ್ರದ ಬಗ್ಗೆ ಮತ್ತಷ್ಟು ಡೀಟೇಲ್ www.npr.org ವೆಬ್ ತಾಣದಲ್ಲಿ ಕಾಣಬಹುದು. ಹಾಗೆಯೇ ಈ ಮೇಲಿನ ಕುದುರೆ ತೆರನಾದ ಪಿರೀತಿಯ ಚಿತ್ರದ ಕ್ರೆಡಿಟ್ಸ್ ಸಹ ಮೇಲಿನ ತಾಣಕ್ಕೆ. ಈ ಪಿರೀತಿಯಲ್ಲಿ kinky ಸುಖ ಕಾಣೋದಾದರೆ why not give it a try?

ಅತ್ಯಾಚಾರದ ಗರ್ಭಧಾರಣೆಗೆ “ದೈವೇಚ್ಚೆ” ಕಾರಣ

ಶೀಲಭಂಗದಿಂದ ಅಥವಾ ಅತ್ಯಾಚಾರದಿಂದ ಉಂಟಾದ ಗರ್ಭಧಾರಣೆ ದೈವೇಚ್ಚೆ ಎಂದ ಅಮೆರಿಕೆಯ ರಿಪಬ್ಲಿಕನ್ ಪಕ್ಷದ ನಾಯಕನೊಬ್ಬ. ಈಗ ಈ ಮಾತು ಅಮೆರಿಕೆಯ ರಾಜಕೀಯ ವಲಯದಲ್ಲಿ ಕಂಪನ ತರುತ್ತಿದೆ. ಡೆಮೊಕ್ರಾಟ್ ಪಕ್ಷದವರು ಈ ಮಾತನ್ನು ಹಿಡಿದು ಕೊಂಡು ರಾಜಕೀಯ ಬೇಳೆ ಬೇಯಿಸಿಕೊಳ್ಳಲು ಕಾತುರರಾಗಿದ್ದಾರೆ. ಅಮೆರಿಕೆಯಲ್ಲಿ ಅಧ್ಯಕ್ಷೀಯ ಚುನಾವಣೆಯ ಬಿಸಿ. ಬಲಪಂಥೀಯ ಎಂದು ರಿಪಬ್ಲಿಕನ್ ಪಕ್ಷ ಪರಿಗಣಿಸಲ್ಪಟ್ಟಿದೆ ಅಮೆರಿಕೆಯಲ್ಲಿ. ತಲೆಕೆಟ್ಟ ಕೆಲವು ಕ್ರೈಸ್ತ ಪಾದ್ರಿಗಳೂ ಈ ಪಕ್ಷವನ್ನ ಬೆಂಬಲಿಸುತ್ತಾರೆ. ಬಲಪಂಥವೋ, ಎಡ ಪಂಥವೋ, ನಡು ಪಂಥವೋ, ಪಂಥ ಯಾವುದೇ ಇರಲಿ ಮಾನವೀಯ ಮೌಲ್ಯಗಳ ವಿಷಯ ಬಂದಾಗ ಸರಿಯಾದ ವಿವೇಚನೆ, ತೋರದ ಪಂಥ ತಿಪ್ಪೆ ಸೇರುವುದಕ್ಕೆ ಮಾತ್ರ ಲಾಯಕ್ಕು.

Let us get back to rape-induced pregnancy. ಮತ್ತೊಮ್ಮೆ ಗರ್ಭ ಧಾರಣೆಗೆ ಬರೋಣ. ಅತ್ಯಾಚಾರದಿಂದ ಉಂಟಾದ ಗರ್ಭಧಾರಣೆ ದೈವೇಚ್ಚೆ ಎಂದ ಈತನ ಹೆಸರು ರಿಚರ್ಡ್ ಮುರ್ಡೋಕ್. ಇಂಡಿಯಾನ ರಾಜ್ಯದಿಂದ ಸೆನೆಟ್ ಗಾಗಿ ಸ್ಪರ್ದೆ ರಿಪಬ್ಲಿಕನ್ ಪಕ್ಷದ ಅಭ್ಯರ್ಥಿಯಾಗಿ. ತಾನಾಡಿದ  ಮಾತಿನಿಂದ ಎದ್ದ ವಿವಾದ ಈತನನ್ನು ವಿಚಲಿತನನ್ನಾಗಿಸಿದೆ.  ಈಗ ಈತ ಹೇಳುವುದು, “ನಾನು ಹೇಳಿದ ಅರ್ಥವೇ ಬೇರೆ. ನನ್ನ ಪಾಯಿಂಟ್ ಏನೆಂದರೆ ದೇವರು ಜೀವದ ಸೃಷ್ಟಿಗೆ ಕಾರಣ, ದೇವರಿಗ ಅತ್ಯಾಚಾರ ಇಷ್ಟವಿಲ್ಲ, ಅತ್ಯಾಚಾರ ಒಂದು horrible thing” ಈ ಸಮಜಾಯಿಷಿ ಈತನದು.

ಗರ್ಭಧಾರಣೆ ದೈವೇಚ್ಚೆ ಎಂದಾಗ ಒಂದು ಮಾತು ನೆನಪಿಗೆ ಬರುತ್ತದೆ. ಅದೆಂದರೆ “ತೇನ ವಿನಾ ತೃಣಮಪಿ ನ ಚಲತಿ”. ಈ ಮಾತಿನ ಅರ್ಥ ಒಂದು ಹುಲುಕಡ್ಡಿ ಅಲುಗಾಡಲೂ ಪರಮಾತ್ಮನ ಅಪ್ಪಣೆ ಬೇಕು. ಪವಿತ್ರ ಕುರ್’ಆನ್ ನ ಆರನೇ ಅಧ್ಯಾಯ, ೫೯ ನೇ ಸೂಕ್ತದಲ್ಲೂ ಇದೇ ಅರ್ಥ ಬರುವ ಮಾತಿದೆ. “Not a leaf fall but with His Knowledge”. ಈಗ ಈ ಮೇಲಿನ ಸೂಕ್ತಗಳನ್ನು ಉದ್ಧರಿಸಿ ಜಗತ್ತಿನಲ್ಲಿ ನಡೆಯುವ ಪ್ರತೀ ಅತ್ಯಾಚಾರ, ಅನಾಚಾರ, ಕೊಲೆ, ಸುಲಿಗೆ, ಮೋಸ ದಗಾ, ವಂಚನೆ… ಎಲ್ಲವಕ್ಕೂ ತಂದು ನಿಲ್ಲಿಸಲಿ ಪರಮಾತ್ಮನನ್ನು ಸಾಕ್ಷಿಯಾಗಿ.