ಹೊಟ್ಟೆ ಪಕ್ಷದ ರಂಗ ಸ್ವಾಮೀ ಮತ್ತು ಮೋದಿ

ಚುನಾವಣೆಯ ಬಿಸಿ ತಾರಕಕ್ಕೇರುತ್ತಿದ್ದಂತೆ ದಿಗ್ಗಜರು ಮತ್ತು ನಾಟ್ ಸೋ ದಿಗ್ಗಜರು ಎಲ್ಲಿಂದ ಸ್ಪರ್ದಿಸುತ್ತಾರೆ ಎನ್ನುವ ಕಡೆ ಎಲ್ಲರ ಕುತೂಹಲ. ಎಲ್ರಿಗೂ ಬೇಕು ಸೇಫ್ ಸೀಟು. ಕೆಲಸ ಮಾಡಬೇಕಾದ ಸಮಯದಲ್ಲಿ, ಮತದಾರನಿಗೆ ನೀಡಿದ ಆಶ್ವಾಸನೆ ನೆರವೇರಿಸುವ ನಿಟ್ಟಿನಲ್ಲಿ ಸೋತಾಗ ಈ ಅಲೆದಾಟ ಸೇಫ್ ಸೀಟ್ ಗಾಗಿ. ರಾಜಕಾರಣಿ ದಿಕ್ಕೆಟ್ಟು ಅಲೆಯುವ ಹಲವು ಸನ್ನಿವೇಶಗಳಲ್ಲಿ ಇದೂ ಒಂದು. 

ನರೇಂದ್ರ ಮೋದಿ ವಾರಾಣಸಿ ಯಿಂದ ಸ್ಪರ್ದಿಸುವ ಕುರಿತು ಅವರ ಭಕ್ತರಲ್ಲಿ ಒಂದು ತೆರನಾದ ರೋಮಾಂಚನ. ಪವಿತ್ರ ಕ್ಷೇತ್ರದಿಂದ ಸ್ಪರ್ದಿಸೋದು ಯಾರಿಗೂ ಮುದ ಕೊಡುವ ವಿಷಯವೇ. ಖ್ಯಾತ ಶಹನಾಯ್ ವಾದಕ ಭಾರತ ರತ್ನ ಉಸ್ತಾದ್ ಬಿಸ್ಮಿಲ್ಲಾ ಖಾನರೂ ಈ ನಗರದಲ್ಲಿ ತಮ್ಮ ಪ್ರತಿಭೆ ಮೆರೆದಿದ್ದರಂತೆ. ಉಸ್ತಾದ್ ರ ಹೃದಯವೈಶಾಲ್ಯತೆ, ಮತೀಯ ಸಾಮರಸ್ಯ ವಾರಣಾಸಿಯಿಂದ ಸ್ಪರ್ದಿಸುವ ಎಲ್ಲರಿಗೂ ಮಾದರಿಯಾಗಲೀ ಎನ್ನುವುದು ಮತದಾರರ ಆಶಯ. ಮತ್ತೊಂದು ಸುದ್ದಿ ಏನೆಂದರೆ ಭಾಜಪ ದ ಪ್ರಧಾನಿ ಅಭ್ಯರ್ಥಿ ವಾರಣಾಸಿ ಜೊತೆಗೆ ತನ್ನ ರಾಜ್ಯ ಗುಜರಾತ್ ನ ವಡೋದರ ದಿಂದಲೂ ಸ್ಪರ್ದಿಸುವ ತೀರ್ಮಾನ ಮಾಡಿದ್ದು. ಅರರೆ ಏನಿದು. ಮೋದಿ ಅಲೆ, ಮೋದಿ ಸೆಲೆ ಎಂದೆಲ್ಲಾ ಎದೆ ಉಬ್ಬಿಸಿಕೊಂಡು ನಡೆಯುತ್ತಿದ್ದ ಜನರಿ ಮೇಲೆ ಈ ಸುದ್ದಿ ಯಾವ ಪ್ರಭಾವ ಬೀರಬಹುದು, ಎಂದು ಕೊಳ್ಳಬೇಡಿ. ಕಳ್ಳನಿಗೊಂದು ಪಿಳ್ಳೆ ನೆವ ಎಂದು ಕೇಳಿದ್ದೀರಾ ತಾನೇ, ಸಾಕಷ್ಟು ಅಬ್ಯೂಸ್ ಮಾಡಿಸಿ ಕೊಂಡ ಮಾತಿದು. ಎಲ್ಲಾ ನಾಣ್ಣುಡಿಗಳೂ ಹೀಗೆಯೇ. ಸುದ್ದಿ ಸೃಷ್ಟಿ ಮಾಡಿದ ಹಾಗೆ ಪ್ರಾವರ್ಬ್ಸ್ ಗಳನ್ನ ಸೃಷ್ಟಿ ಮಾಡೋಕೆ ಆಗುತ್ಯೇ? ಅದಕ್ಕೇ ಅಬ್ಯೂಸು. take it or leave it. ಅಲೆಯ ಮೇಲೆ ಸವಾರಿ ಮಾಡುತ್ತಿದ್ದ ನಾಯಕನಿಗೆ ಇದು ತರವೇ ಎಂದು ಪ್ರಶ್ನಿಸಿದ ಕೂಡಲೇ ಧುಮ್ಮಿಕ್ಕಿತು ಉತ್ತರ. ಯಾಕೆ, ತಪ್ಪೇನು? ಹೊಟ್ಟೆ ಪಕ್ಷದ ರಂಗ ಸ್ವಾಮೀ ಗಳು ಐದು ಕಡೆಗಳಿಂದ ನಿಂತಿಲ್ಲವೇ, ಇನ್ನೂ ಮೂರು ಬಾಕಿ ಇದೆಯಲ್ಲಾ ಎಂದು ಮೀಸೆಯ ಮರೆಯಲ್ಲಿ ನಗು. ವಾಹ್, ಕಂಪ್ಯಾರಿಸನ್ ಎಂದರೆ ಹೀಗಿರಬೇಕು. ಎತ್ತರದಿಂದ ಬೀಳುವ ಬೆಕ್ಕು ಲ್ಯಾಂಡ್ ಆಗೋದು ಹೇಗೆ ಅಂತ ಗೊತ್ತು ತಾನೇ?

ಪ್ರಶ್ನೆ ಏನೆಂದರೆ, ವಾರಣಾಸಿಯಿಂದ ಸ್ಪರ್ದಿಸಲಿರುವ ಅರವಿಂದ ಕೇಜರಿವಾಲ ಗೆಲ್ಲುವ ಸಾಧ್ಯತೆ ಕಾರಣ ನಯವಾಗಿ ವಡೋದರ ದ ಕಡೆ ಹೆಜ್ಜೆ ಹಾಕಿರಬಹುದೇ, ಮೋದಿ? ಈ ಅರವಿಂದ್ ಕೇಜರಿ ವಾಲ್ ಬಹುತ್ ಚಾಲಾಕ್ ಆದ್ಮಿ. ಬಯೋ ಡೇಟಾ ದಲ್ಲಿ ಒಬ್ಬರು ಸಿಕ್ಕಾಪಟ್ಟೆ ಬರೆದು ಬಿಟ್ಟರು, ಇದು ನಿಜವೇ ಎಂದು ನೋಡಲು ಗುಜರಾತ್ ಗೆ ಧಾವಿಸಿ ಬಿಟ್ಟರು. ೧೬ ಪ್ರಶ್ನೆಗಳ ಶಾಪಿಂಗ್ ಲಿಸ್ಟ್ ಹಿಡಿದು ಕೊಂಡು. ಪಾಪ, ಈತನ ಪ್ರಶ್ನೆಗಳಿಗೆ ಉತ್ತರ ಸಿಗಲಿಲ್ಲ. ಆದರೆ ಶತ್ರು ಪಾಳಯದಲ್ಲಿ ನಡುಕವಂತೂ ತರಿಸಿಬಿಟ್ಟಿತು ಈತನ gate crash ಯಾತ್ರೆ. ಹಾಗಾಗಿ ಈ ಎರಡನೇ ಕ್ಷೇತ್ರದಿಂದ ಸ್ಪರ್ದಿಸುವ ತೀರ್ಮಾನ.

ಅರವಿಂದ ಕೇಜರಿವಾಲ್ ಧಿಡೀರನೆ ಹೆಸರು ಮಾಡಿಬಿಟ್ಟರು. ನಮ್ಮ ಪ್ರಜಾಪ್ರಭುತ್ವ ವಿಶ್ವ ಅಂದು ಕೊಂಡಂತಹ ಅಂಗವಿಕಲ ಪ್ರಜಾಪ್ರಭುತ್ವ ಅಲ್ಲ ಎಂದು ಸೊಗಸಾಗಿ ತೋರಿಸಿ ಕೊಟ್ಟರು. ಈತನ ಪಕ್ಷದ ಹೆಸರು ಆಮ್ ಆದ್ಮಿ ಪಾರ್ಟಿ. ಗುರುತು, ಪರ್ಕೆ, ಪರಕೆ..ಪೊರಕೆ. ಕಾಕ್ಟೇಲ್ ಪಾರ್ಟಿಯಲ್ಲಿ ಸಿಗುವ ಎಲ್ಲಾ ಮನರಂಜನೆಯೂ ಈ ಪಕ್ಷ ಕೊಡುತ್ತಿದೆ ಹಲವು ರಾಜಕಾರಣಿಗಳಿಗೆ.

ಮೋದಿ ವಾರಣಾಸಿ ಜೊತೆಗೆ ವಡೋದರ ಕೂಡಾ ಇರಲಿ ಎಂದು ತೀರ್ಮಾನಿಸಿದ ಕಾರಣದ ಬಗೆಗಿನ ನನ್ನ take ಇದು.        

Advertisements

One thought on “ಹೊಟ್ಟೆ ಪಕ್ಷದ ರಂಗ ಸ್ವಾಮೀ ಮತ್ತು ಮೋದಿ

  1. SSNK ಹೇಳುತ್ತಾರೆ:

    ಅಲೆಯಿದೆಯೋ ಅಥವಾ ಅದು ಬರೇ ಗಾಳಿಸುದ್ದಿಯೋ ಅಥವಾ ಪ್ರವಾಹವೇ ನುಗ್ಗುತ್ತದೆಯೋ ಕಾದು ನೋಡುವಾ. ಇನ್ನು 57 ಕಾದರಾಯಿತಷ್ಟೇ.

    ಅದೇಕೆ ಕೇಜ್ರೀವಾಲರಿಗೆ ಮೋದಿಯ ಮೇಲೆ ಮಾತ್ರಾ ಕಣ್ಣೋ ತಿಳಿಯುತ್ತಿಲ್ಲ. ದೆಹಲಿಯಲ್ಲಿ ಅಧಿಕಾರಕ್ಕಾಗಿ ಭ್ರಷ್ಟ ಕಾಂಗ್ರೆಸ್ಸಿನ ‘ಕೈ’ ಹಿಡಿದರು. “ನನ್ನ ಮಕ್ಕಳ ಮೇಲೆ ಪ್ರಮಾಣ ಮಾಡಿ ಹೇಳುತ್ತೇನೆ, ಯಾವುದೇ ಕಾರಣಕ್ಕೂ ಅಧಿಕಾರಕ್ಕಾಗಿ ಕಾಂಗ್ರೆಸ್ಸಿನ ಬೆಂಬಲ ಪಡೆಯುವುದಿಲ್ಲ” ಎಂದು ಅವರೇ ಫಲಿತಾಂಶಕ್ಕೆ ಮುಂಚೆ ಹೇಳಿದ್ದನ್ನು ಮರೆತೇಬಿಟ್ಟರು! ಅಧಿಕಾರಕ್ಕೆ ಬಂದ 15 ದಿನಗಳಲ್ಲಿ ಶೀಲಾ ದೀಕ್ಷಿತರನ್ನು ಜೈಲಿಗೆ ಕಳುಹಿಸುವೆ ಎಂದು ಆಶ್ವಾಸನೆ ನೀಡಿದ್ದರು. 48 ದಿನಗಳಾದರೂ ಯಾವ ಭ್ರಷ್ಟರ ಮೇಲೂ ಚಾಟಿ ಬೀಸಲೇಯಿಲ್ಲ. ಇದೀತ ಶೀಲಾ ದೀಕ್ಷಿತರನ್ನು ರಾಜ್ಯಪಾಲರನ್ನಾಗಿ ಕೇರಳಕ್ಕೆ ಕಳುಹಿಸಲಾಗಿದೆ. ಭ್ರಷ್ಟರಾಗಿದ್ದ ಶೀಲಾ ಧೀಕ್ಷಿತರಿಗೆ ಅಧಿಕಾರ ನೀಡಬಾರದೆಂದು ಕೇಜ್ರೀವಾಲರು ಒಂದು ಸಣ್ಣ ಹೇಳಿಕೆಯನ್ನೂ ನೀಡಲಿಲ್ಲ. ಅಧಿಕಾರ ಹಿಡಿದು ಬದಲಾವಣೆ ತೋರಿಸುವ ಬದಲು, ಕೇವಲ ಬೀದಿ ನಾಟಕ ಮಾಡುತ್ತಾ ನಿಂತರು. ವಾರಣಾಸಿಯಲ್ಲಿ ಮೋದಿ ನಿಲ್ಲುತ್ತೇನೆ ಎಂದ ಕೂಡಲೇ ವಾರಣಾಸಿಯಲ್ಲಿ ತಾನೂ ನಿಲ್ಲುತ್ತೇನೆ ಎಂದರು. ಕಳೆದ 10 ವರ್ಷಗಳಿಂದ ಅಧಿಕಾರ ನಡೆಸಿ ಭ್ರಷ್ಟಾಚಾರದ ಬ್ರಹ್ಮಾಂಡವನ್ನೇ ಸೃಷ್ಟಿಸಿರುವ ಕಾಂಗ್ರೆಸ್ಸಿನ ಸೋನಿಯಾ ಗಾಂಧಿ ಅಥವಾ ರಾಹುಲ್ ಗಾಂಧಿಯ ವಿರುದ್ಧ ನಿಲ್ಲುವ ಕುರಿತು ಅವರು ಮಾತನಾಡುವುದಿಲ್ಲ. ಏಕೆಂದರೆ, ಚುನಾವಣೆಯಲ್ಲಿ ಸೋಲುತ್ತೇನೆ ಎಂದು ಖಚಿತವಾಗಿರುವ ಕಾಂಗ್ರೆಸ್ಸಿನ ತಂತ್ರದ ಭಾಗವೇ “ಕೇಜ್ರೀವಾಲ್ ಪುರಾಣ”! 😉
    ದೆಹಲಿಯ ಜನ ಅಧಿಕಾರ ಅವರನ್ನು ನಂಬಿ ಅಧಿಕಾರ ಕೊಟ್ಟರು. ಆ ಅವಕಾಶವನ್ನು ಬಳಸಿಕೊಂಡು ದೆಹಲಿಯನ್ನು ಗುಜರಾತಿಗಿಂತ ಹೆಚ್ಚು ಅಭಿವೃದ್ಧಿಪಡಿಸಿ ತೋರಿಸ ಬಹುದಿತ್ತಲ್ಲವೇ!? ಅಧಿಕಾರದಲ್ಲಿದ್ದ 49 ದಿನಗಳಲ್ಲಿ ಆ ನಿಟ್ಟಿನಲ್ಲಿ ಒಂದು ಸಣ್ಣ ಹೆಜ್ಜೆಯನ್ನೂ ಮುಂದಿಡುವ ಪ್ರಯತ್ನವನ್ನೇಕೆ ಅವರು ಮಾಡಲೇಯಿಲ್ಲ? ಇಷ್ಟೆಲ್ಲಾ ಆದಮೇಲೂ ಕೆಲವರಿಗೆ ಕೇಜ್ರೀವಾಲರ ಮೇಲೆ ವಿಶ್ವಾಸವಿದೆ ಎಂದರೆ ಆಶ್ಚರ್ಯವೇ!!
    ಚುನಾವಣೆ ಫಲಿತಾಂಶ ಮುಗಿದ ನಂತರ ಅವರು ಪೊರಕೆ ಎತ್ತಿಕಂಡು ಕಸ ಗುಡಿಸುವ ಕಾಯಕಕ್ಕೆ ಎಲ್ಲಿ ಸೇರುತ್ತಾರೋ ನೋಡೋಣ. 😀

ನಿಮ್ಮದೊಂದು ಉತ್ತರ

Fill in your details below or click an icon to log in:

WordPress.com Logo

You are commenting using your WordPress.com account. Log Out /  Change )

Google+ photo

You are commenting using your Google+ account. Log Out /  Change )

Twitter picture

You are commenting using your Twitter account. Log Out /  Change )

Facebook photo

You are commenting using your Facebook account. Log Out /  Change )

w

Connecting to %s