ಸಿಕ್ಕರೆ ಆಟ, ಸಿಗದಿದ್ದರೆ ಮಾಟ

ಲಂಚ, ಭ್ರಷ್ಟಾಚಾರ, ಮುಂತಾದ ಪಿಡುಗುಗಳನ್ನು ಹಿಂದಕ್ಕೆ ಹಾಕಿ ಮನುಷ್ಯ ತಲೆ ತಗ್ಗಿಸುವಂತೆ ಮಾಡುತ್ತಿರುವ ಕೃತ್ಯವೆಂದರೆ ಲೈಂಗಿಕ ಹಿಂಸೆ. ದಿನ ಬೆಳಗಾದರೆ ಲೈಂಗಿಕ ದೌರ್ಜನ್ಯ, ಲೈಂಗಿಕ ಶೋಷಣೆ, ಲೈಂಗಿಕ ಪೀಡನೆ, ಲೈಂಗಿಕ ಅತ್ಯಾಚಾರ ಗಳು ನಮ್ಮ ಚಿತ್ತವನ್ನು ಕಲಕುತ್ತವೆ. ಇಂಥ ನೀಚ ಕೃತ್ಯಗಳಲ್ಲಿ ತೊಡಗಿಸಿಕೊಳ್ಳುವವರನ್ನು ಸಹಿಸಿಕೊಳ್ಳುವ ಸಮಾಜ, ಮತ್ತು ವ್ಯವಸ್ಥೆಯ ಬಗ್ಗೆ ತಾತ್ಸಾರ ಮೂಡುತ್ತದೆ.

ಲೈಂಗಿಕ ಪೀಡನೆಗಳು ಹತ್ತು ಹಲವು ಆಕಾರ ಪಡೆದು ಕೊಂಡು ಮುಗ್ಧ ರ ಮೇಲೆ ಎರಗುವುದು ನಾವು ಓದಿದ್ದೇವೆ, ಕೇಳಿದ್ದೇವೆ. ಈ ಶೋಷಣೆಗೆ ಸುಲಭವಾಗಿ ದಕ್ಕುವುದು ಮಕ್ಕಳು.   ಲೈಂಗಿಕ ಶೋಷಣೆ ಬೀದಿಯಲ್ಲಿ ನಡೆಯೋದಕ್ಕಿಂತ ಹೆಚ್ಚು ಮನೆಗಳಲ್ಲೇ ನಡೆಯುತ್ತವಂತೆ. ಹಾಗಾಗಿ ಬೀದಿಗಳಿಂತ ಹೆಚ್ಚು ಅಪಾಯಕರ ಮನೆ ಎಂದರೆ ಯಾರೂ ಬೆಚ್ಚದೆ ಇರಲಾರರು.

ಲೈಂಗಿಕ ಶೋಷಣೆಯ ಮತ್ತೊಂದು ವಿಧ ಇಲ್ಲಿದೆ ನೋಡಿ.

ಅಜ್ಜಿ ಒಬ್ಬರೇ ಮನೆಯಲ್ಲಿ ಎಂದು ಮೊಮ್ಮಗಳು ಅವರೊಂದಿಗೆ ಇರಲು ಬರುತ್ತಾಳೆ. ಗಂಡಸರಾರೂ ಮನೆಯಲ್ಲಿಲ್ಲದ ಕಾರಣ ಹತ್ತಿರದ ಸಂಬಂಧಿಯೊಬ್ಬನನ್ನು ರಾತ್ರಿ ಮಲಗಿಸಿ ಕೊಳ್ಳುತ್ತಾರೆ. ಕರೆ ಘಂಟೆ ಶಬ್ದವಾದ್ದರಿಂದ ಯಾರು ಎಂದು ವಿಚಾರಿಸಲು ನೆಂಟ ನನ್ನು ಎಬ್ಬಿಸುತ್ತಾಳೆ ಯುವತಿ. ಆತ ಎದ್ದು ಆಕೆಗೆ ಸಹಾಯ ಮಾಡುವುದನ್ನು ಬಿಟ್ಟು ಬಿಗಿದಪ್ಪಿಕೊಳ್ಳುತ್ತಾನೆ. ಗಾಭರಿಯಾದ ಆಕೆ  ಹೇಗಾದರೂ ಅವನೊಂದಿಗೆ ಸೆಣಸಾಡಿ, ಬಿಡಿಸಿಕೊಂಡು ಅಜ್ಜಿಯ ಕೋಣೆ ಸೇರಿಕೊಂಡು ಚಿಲಕ ಹಾಕಿ ಕೊಳ್ಳುತ್ತಾಳೆ. ಬೆಳಗಾದ ಕೂಡಲೇ ಈ ವಿಷಯ ಯಾರಲ್ಲಾದರೂ ಆಕೆ ಹೇಳಿಬಿಟ್ಟರೆ ಎಂದು ಹೆದರಿ ನೆಂಟ ಆಕೆಯ ಕ್ಷಮೆ ಕೇಳಿ, ನನಗೆ ಯಾರೋ ಮಾಟ ಮಾಡಿ ಬಿಟ್ಟಿದ್ದಾರೆ, ಹಾಗಾಗಿ ನನಗೆ ನನ್ನ ಸೋದರಿಯರ, ಹತ್ತಿರದ ನೆಂಟರ ಹುಡುಗಿಯರನ್ನು ಕಂಡರೆ ಉದ್ರೇಕವಾಗುತ್ತದೆ, ಇನ್ನು ಎಂದೂ ಹೀಗೆ ಮಾಡೋಲ್ಲ ಎಂದು ಮತ್ತೂಮ್ಮೆ ಕೇಳಿ ಜಾಗ ಖಾಲಿ ಮಾಡುತ್ತಾನೆ. ಈತನ ವಿರುದ್ಧ, ಅಥವಾ ಈತ ಮಾಡಿದ ಕೆಲಸವನ್ನ ಈಕೆ ಯಾರ ಹತ್ತಿರವೂ ಹೇಳಲಿಕ್ಕೆ ಕಷ್ಟ, ಏಕೆಂದರೆ ಈ ಯುವತಿಯ ತಂದೆಯ ಸೋದರಿಯ ಮಗ ಈತ. ಎಷ್ಟು ಹತ್ತಿರದ ಸಂಬಂಧ ನೋಡಿ. ಮನೆಯವರು ನಂಬುವುದು ಕಷ್ಟ. ಈಗ ಹೇಳಿ ಯಾವುದಾದರೂ ಕಾರಣಕ್ಕೆ ಮನೆಯಲ್ಲಿ ತಂಗುವ ನೆಂಟರನ್ನು ನಂಬುವುದು ಹೇಗೆ ಎಂದು. ಈ ಯುವತಿ ಈತನ ಲಂಪಟ ತನವನ್ನು ಪ್ರತಿಭಟಿಸಿದ್ದರಿಂದ ಇದು “ಮಾಟ”, ಸಹಕರಿಸಿದ್ದರೆ ಇವನಿಗೆ ಇದೊಂದು ‘ಆಟ’.              

Advertisements

5 thoughts on “ಸಿಕ್ಕರೆ ಆಟ, ಸಿಗದಿದ್ದರೆ ಮಾಟ

  1. bhadravathi ಹೇಳುತ್ತಾರೆ:

   dear narendra. nice to see u after a very long time. I do agree there r perverts in this world who can misinterpret religious teaching to satisfy  their lusts; Devadasi system in our state and elsewhere in India is another example. we have to come out against perverts regardless of which religion or faith they follow. koneyalli ellara doseyoo toothe, alva?  http://www.antislavery.org/includes/documents/cm_docs/2009/w/women_in_ritual_slavery2007.pdf   have a good day and my regards to bhabhi and kids.    abdul  

   ________________________________

   1. Kumar ಹೇಳುತ್ತಾರೆ:

    ಅಬ್ದುಲ್, ನಿಮ್ಮ ಲೇಖನ ಓದುವುದಕ್ಕೆ ಸ್ವಲ್ಪ ಮೊದಲು “The Telegraph”ನಲ್ಲಿ ಬಂದಿದ್ದ ಲೇಖನವನ್ನು ಓದಿದ್ದೆ ಮತ್ತು ಅದು ಮನಸ್ಸಿನಲ್ಲೇ ಉಳಿದಿದ್ದರಿಂದ ನಿಮ್ಮೊಡನೆ ಹಂಚಿಕೊಂಡೆ.

    ನಾನು ಅದನ್ನು ಕಳುಹಿಸಿದ್ದು ಯಾವುದೋ ಒಂದು ಮತಕ್ಕೆ ಸೇರಿದವರು ಆ ರೀತಿ ಮಾಡುತ್ತಿದ್ದಾರೆ ಎಂದು ತೋರಿಸಲೆಂದಲ್ಲ. ಮಹಿಳೆಯರನ್ನು ನಮ್ಮ ದೇಶದಲ್ಲಿ ಎಷ್ಟು ಸುಲಭವಾಗಿ ಶೋಷಿಸುತ್ತಾರೆಂಬುದನ್ನು ತಿಳಿಸಲು.

    ಕಳೆದೆರಡು ದಿನಗಳಿಂದ ಓದುತ್ತಿರುವ ಸುದ್ದಿ “5 ವರ್ಷದ ಬಾಲಕಿಯ ಮೇಲೆ ಅತ್ಯಾಚಾರ” – ಅದನ್ನು ಮಾಡಿದವನ ಚಿತ್ರವನ್ನು ದಿನಪತ್ರಿಕೆಯಲ್ಲಿ ಇಂದು ಮುದ್ರಿಸಿದ್ದಾರೆ. ನೋಡಲು ಒಳ್ಳೆಯ ಮನೆತನದ ಹಿನ್ನಲೆಯಿಂದ ಬಂದಂತಿದ್ದಾನೆ; ಆದರೆ ಮಾಡಿದ್ದು ಈ ಹೊಲಸು ಕೆಲಸ.

    ಅತ್ಯಾಚಾರಿಗೆ ಯಾವ ಜಾತಿ/ಮತ/ಧರ್ಮ. ಅವನು/ಳು ರಾಕ್ಷಸ ಜಾತಿ ಎಂದು ಹೇಳಬಹುದಷ್ಟೇ.
    ನಾವು ಇಷ್ಟೆಲ್ಲಾ ಧರ್ಮ, ಕಾನೂನು ಕಟ್ಟಳೆಗಳನ್ನು ಹಾಕಿಕೊಂಡಿದ್ದರೂ, ಇಂತಹ ಅತ್ಯಾಚಾರಗಳನ್ನು ಇಲ್ಲವಾಗಿಸಲು ಆಗುತ್ತಿಲ್ಲವಲ್ಲ? ಮನುಷ್ಯನ ಮನಸ್ಸನ್ನು ಸರಿ ದಾರಿಗೆ ತರುವುದು ಹೇಗೆ? ಅದು ಸಾಧ್ಯವೇ? ಅಥವಾ ಎಲ್ಲಾ ಕಾಲದಲ್ಲಿಯೂ ಈ ತರಹದ ರಾಕ್ಷಸರಿದ್ದೇ ಇರುತ್ತಾರೆಂದು ಸಮಾಧಾನ ಪಟ್ಟುಕೊಂಡು ಬಿಡೋಣವೇ!?

    ರಾಮನಿರ್ದಂದು ರಾವಣನೊಬ್ಬನಿರ್ದನಲ
    ಭೀಮನಿರ್ದಂದು ದಃಶಾಸನನೋರ್ವನ್ |
    ಈ ಮಹಿಯೊಳನ್ಯಾಯಕಾರಿ ಇಲ್ಲದುದೆಂದು
    ರಾಮ ಭಟನಾಗು ನೀಂ ಮಂಕುತಿಮ್ಮ ||

ನಿಮ್ಮದೊಂದು ಉತ್ತರ

Fill in your details below or click an icon to log in:

WordPress.com Logo

You are commenting using your WordPress.com account. Log Out /  Change )

Google+ photo

You are commenting using your Google+ account. Log Out /  Change )

Twitter picture

You are commenting using your Twitter account. Log Out /  Change )

Facebook photo

You are commenting using your Facebook account. Log Out /  Change )

w

Connecting to %s