ಗಳ ಗಳ ಅತ್ತಳಾ ಪೋರಿ?

ಈ ತಮಾಷೆ ಓದಿ. ಮಾಧ್ಯಮಗಳು ಮಾಡುವ ವರದಿಗಳು, ಯಾವುದಾದರೂ ಒಂದು ವಿಶೇಷ ಸಿಕ್ಕಿ ಬಿಟ್ಟರೆ ಹಗಲೂ ರಾತ್ರಿ ಅದರ ಬಗ್ಗೆ ಪುಂಖಾನು ಪುಂಖವಾಗಿ ಇರುವುದನ್ನೂ, ಇಲ್ಲದ್ದನ್ನೂ, ಸೇರಿಸಿ, ಕೂಡಿಸಿ, ಕಳೆದು,  ಒದರೀ, ಒದರೀ ನಮ್ಮ ಚಿತ್ತ ಕೆಡಿಸೋ ಪರಿಪಾಠಕ್ಕೆ ನಾವು ಒಗ್ಗಿ ಕೊಂಡಿದ್ದೇವೆ. ಹಾಳಾದ ಮೀಡಿಯಾ ದವರಿಗೆ ಏನಾದರೂ ಸಿಕ್ ಬಿಟ್ರೆ ಸಾಕು ೨೪ ಘಂಟೆ ಅದರ ಬಗ್ಗೆಯೇ ಬಡ್  ಕೊಳ್ತಾರೆ ಎಂದು ಗೊಣಗಿ ಸುಮ್ಮನಿರುತ್ತೇವೆ.

ಈಗ ಅಮೆರಿಕೆಯಲ್ಲಿ ಚುನಾವಣೆಯ ಬಿಸಿ, ನಮ್ಮ ದೇಶದಲ್ಲಿ ಬೆಳಗಾದರೆ  ಹೊಸ ಹೊಸ ವೇಷದ ಲಂಚ ಗುಳಿಗಳ ಬಗ್ಗೆ  ವರದಿಯಾಗುವಂತೆ ಅಲ್ಲಿ ಯಾರು ಈ ಬಾರಿ ಅಧ್ಯಕ್ಷರಾಗಬಹುದು ಎನ್ನುವದರ ಮೇಲೆ ಅವಿರತ ಚರ್ಚೆ. “ಬ್ರಾನ್ಕೋ” ಒಬಾಮ  ಮಿಟ್ ರಾಮ್ನಿ ಬಗ್ಗೆ ಕೇಳೀ ಕೇಳೀ ಸಾಕಾಯಿತು ಎಂದು ನಾಲ್ಕು ವರ್ಷದ ಅಬಿಗೇಲ್ ಇವಾನ್ಸ್ ಕಣ್ಣೀರಿಟ್ಟಳು. ಈಕೆಗೆ ಅಮೆರಿಕೆಯ ಖ್ಯಾತ npr (national dpublic radio) ಚಪಲವೋ ಏನೋ.  ಈ ಅಳುವಿಗೆ ಕರುಳು ಚುರುಕ್ಕೆನಿಸಿ ಕೊಂಡ ಹೆತ್ತಬ್ಬೆ ಅಬಿಗೇಲ್ ಳನ್ನು ಸಂತೈಸಲು ಓಡಲಿಲ್ಲ. ಬದಲಿಗೆ ಕಪಾಟಿನತ್ತ ಓಟ ಕಿತ್ತು ಹೊರತಂದಳು ವೀಡಿಯೊ ಕ್ಯಾಮ್. ಮಗಳ ‘ಗಳ ಗಳ’ ದ ಶೂಟಿಂಗ್ ಮಾಡಿ ಏನಾದರೂ ಹೊಸ ಸ್ವಾರಸ್ಯಕ್ಕಾಗಿ  ಮೀಡಿಯಾದ ಥರವೇ ಬಾಯ್ಬಿಟ್ಟು ಕೂತ ‘ಯೂ ಟ್ಯೂಬ್’ ನ ಬಾಯಿಗೆ ತಳ್ಳಿದಳು. ಎರಡು ಮೂರು ದಿನಗಳಲ್ಲಿ ಪೋರಿಯ ಅಳುವಿನ ಈ ಕ್ಲಿಪ್ ೧೫ ಲಕ್ಷಕ್ಕೂ ಅಧಿಕ ಜನ ವೀಕ್ಷಿಸಿದರು. ಈ ಪುಟ್ಟ ಹುಡುಗಿಯ ಅಳುವನ್ನು ನೋಡಿದ ‘npr ರೇಡಿಯೋ ‘ ಅವಳ ತಾಯ ರೀತಿ ಪಬ್ಲಿಸಿಟಿ ಗೊಡವೆಗೆ ಹೋಗದೆ ನೇರಾ ನೇರಾ ಕ್ಷಮೆ ಯಾಚಿಸಿತು, “We must confess, the campaign’s gone on long enough for us, too. Let’s just keep telling ourselves: ‘Only a few more days, only a few more days, only a few more days.'”

ಈಗ ಯೋಚಿಸಿ. ನಮ್ಮ ದೇಶದ ಮಾಧ್ಯಮ ಈ ರೀತಿ ಕ್ಷಮೆ ಯಾಚಿಸ ಬಹುದೇ?  ಜನರನ್ನು ಬೋರ್ ಹೊಡೆಸಿದ್ದಕ್ಕೆ ಕೇಳುವ ಕ್ಷಮೆ ಇರಲಿ, ತೇಜೋವಧೆ, ಇಲ್ಲ ಸಲ್ಲದ ಗುಮಾನಿಗಳನ್ನು ಸೃಷ್ಟಿಸಿದ್ದಕ್ಕೆ, ಅಷ್ಟೇಕೆ ಇಡೀ ಊರಿಗೆ ಊರನ್ನೇ ಕೆಟ್ಟ ರೀತಿಯಲ್ಲಿ ಪ್ರತಿಬಿಂಬಿಸುವ ನಾಚಿಕೆ ಗೆಟ್ಟ, ಸಂಸ್ಕಾರ ವಿಹೀನ ಮಾಧ್ಯಮಗಳಿಗೆ  ಕ್ಷಮೆ ಕೇಳುವ ಸಂಸ್ಕಾರ ಎಲ್ಲಿಂದ ಬರಬೇಕು?

pic courtesy: yahoo.com

Advertisements

ನಿಮ್ಮದೊಂದು ಉತ್ತರ

Fill in your details below or click an icon to log in:

WordPress.com Logo

You are commenting using your WordPress.com account. Log Out /  Change )

Google+ photo

You are commenting using your Google+ account. Log Out /  Change )

Twitter picture

You are commenting using your Twitter account. Log Out /  Change )

Facebook photo

You are commenting using your Facebook account. Log Out /  Change )

w

Connecting to %s