ಅಕ್ಟೋಬರ್ ಒಂದು, ೧೯೬೨

ಅಕ್ಟೋಬರ್ ಒಂದು, ೧೯೬೨. ಈ ದಿನ ಅಮೆರಿಕೆಯ ಕರಿಯರ ಪಾಲಿಗೆ ವಿಶೇಷದಿನ. ಇಂದು ಅಮೆರಿಕೆಯ ಮಿಸ್ಸಿಸಿಪ್ಪಿ ವಿಶ್ವವಿದ್ಯಾಲಯದಲ್ಲಿ ಪ್ರಪ್ರಥಮವಾಗಿ ಕಪ್ಪುಜನಾಂಗಕ್ಕೆ ಸೇರಿದ ವಿದ್ಯಾರ್ಥಿಯನ್ನು ಸೇರಿಸಿಕೊಳ್ಳಲಾಯಿತು. ಅಮೆರಿಕೆಯಚರಿತ್ರೆಬಲ್ಲವರಿಗೆ ಕರಿಯ – ಬಿಳಿಯ ಜನಾಂಗದ ನಡುವಿನ ಕಂದಕ, ತಾರತಮ್ಯದ ಅರಿವು ಇದ್ದೇ ಇರುತ್ತದೆ. ಅಮೆರಿಕೆಯ ಈ ಜನಾಂಗಬೇಧ ನೀತಿ ೧೯೬೨ರಲ್ಲಿ ಮಾತ್ರವಲ್ಲ ಈಗಲೂ ಕೂಡ ಪ್ರಸ್ತುತ. ವ್ಯತ್ಯಾಸವೆಂದರೆ ಈಗಿನ ನೀತಿ ಅಲಿಖಿತ ಎನ್ನಬಹುದು. ಅಂದರೆ ಸರಕಾರ ಮತ್ತು ವ್ಯವಸ್ಥೆ ಜನಾಂಗ ಬೇಧಒಳ್ಳೆಯದಲ್ಲ ಎಂದು ಎಷ್ಟೇ ಸಾರಿದರೂ ಜನ ಮಾತ್ರ ಕೇಳಲೊಲ್ಲರು. ಎಲ್ಲರೂಅಲ್ಲ. ಸಾಕಷ್ಟುಮಂದಿ. ಹುಟ್ಟುಗುಣ….

ಮಿಸ್ಸಿಸಿಪ್ಪಿ ಪ್ರಾಂತ್ಯ ಜನಾಂಗ ಬೇಧ ನೀತಿಗೆ ಹೆಸರುವಾಸಿ. segregationist ಗಳ ತವರೂರು. ಇಲ್ಲಿನ ವಿಶ್ವವಿದ್ಯಾಲದಲ್ಲಿ ಕಪ್ಪುವಿರೋಧಿ ನೀತಿಅಂತ್ಯಗೊಂಡ ಸಂಭ್ರಮ ಈಗ ಅಮೆರಿಕೆಯಲ್ಲಿ.

ಅಮೆರಿಕೆಯ ಈಗಿನ ಅಧ್ಯಕ್ಷ ಬರಾಕ್ ಒಬಾಮ ಕಪ್ಪು ಜನಾಂಗಕ್ಕೆ ಸೇರಿದವರು. ನಾಲ್ಕು ವರ್ಷಗಳ ಹಿಂದೆ ನೆಡದ ಅಧ್ಯಕ್ಷೀಯ ಚುನಾವಣೆಯಲ್ಲಿ ಅಭೂತಪೂರ್ವ ಗೆಲುವನ್ನು ಸಾಧಿಸಿದವರು. ಇದೇ ವರ್ಷದ ನವೆಂಬರ್ತಿಂಗಳಿನಲ್ಲಿ ಮರುಆಯ್ಕೆಗಾಗಿ ರಿಪಬ್ಲಿಕನ್ಪಕ್ಷದ ಮಿಟ್ರಾಮ್ನಿಯವರೊಂದಿಗೆಸೆಣಸುತ್ತಿದ್ದಾರೆ. ಒಬಾಮಡೆಮಾಕ್ರಾಟ್.

ಅಮೆರಿಕೆಯಲ್ಲಿ ಈಗಚುನಾವಣೆಯ ಬಿಸಿ, ಅದರೊಂದಿಗೇ ಹಣಕಾಸು ತಾಪತ್ರಯಗಳ ಬಿಸಿ, ಸಲಿಂಗಿಗಳ ವಿವಾಹದ ಬಿಸಿ, ವಲಸಿಗರ ಬಿಸಿ,….ತರಾವರಿಬಿಸಿ. ಈ ಬಿಸಿ ಸಾಲದುಎನ್ನುವಂತೆ ಒಬಾಮಾರನ್ನು ಹೇಗಾದರೂ ಸೋಲಿಸಲು ರಿಪಬ್ಲಿಕನ್ಪಕ್ಷ ಎಲ್ಲಾಅಸ್ತ್ರಗಳನ್ನೂ ಬಳಸುತ್ತಿದೆ. ಒಬಾಮಾ ಕರಿಯ, ಒಬಾಮ ಸಲಿಂಗಿಪರ, ಒಬಾಮ ಉದಾರವಾದೀ, ಒಬಾಮ anti-christ, ಕೊನೆಗೆಮಹಾಅಸ್ತ್ರಗಳಲ್ಲೇ ಘನಘೋರ ಅಸ್ತ್ರ ಎನ್ನಬಹುದಾದ ಒಬಾಮ ಬಹುಶಃ ಓರ್ವಮುಸ್ಲಿಂ ಎನ್ನುವ ಶಂಕೆ. ಶಂಕೆ, ಗುಮಾನಿ, ಬಹುಶಃಗಳೇ ಇಂದು ಪ್ರಪಂಚವನ್ನು ನಿಷ್ಕಾರುಣ್ಯವಾಗಿ ಹುರಿಯುತ್ತಿರುವುದು. ಒಬಾಮ ಮುಸ್ಲಿಂ ಎನ್ನುವ ಈ ಶಂಕೆ ಜನರಲ್ಲಿ ಬಿತ್ತಿದರೆ ಒಬಾಮ ಚಳ್ಳೆಹಣ್ಣು ತಿನ್ನುವುದು ಖಚಿತ ಎನ್ನುವುದು ರಿಪಬ್ಲಿಕನ್ ಪಂಡಿತರ ಲೆಕ್ಕಾಚಾರ. ಶಂಕೆಗಳು, ಬಹುಶಃಗಳು ಸರ್ವನಾಶವಾಗಿ ಜನ ತಿಳಿವಳಿಕೆ ಪ್ರದರ್ಶಿಸಿಯಾರೇ ಎನ್ನುವುದು ಕಾದು ನೋಡಬೇಕಾದ ಬೆಳವಣಿಗೆ.

Advertisements

One thought on “ಅಕ್ಟೋಬರ್ ಒಂದು, ೧೯೬೨

 1. Kumar ಹೇಳುತ್ತಾರೆ:

  > ಒಬಾಮ ಮುಸ್ಲಿಂ ಎನ್ನುವ ಈ ಶಂಕೆ ಜನರಲ್ಲಿ ಬಿತ್ತಿದರೆ ಒಬಾಮ ಚಳ್ಳೆಹಣ್ಣು ತಿನ್ನುವುದು ಖಚಿತ
  > ಎನ್ನುವುದು ರಿಪಬ್ಲಿಕನ್ ಪಂಡಿತರ ಲೆಕ್ಕಾಚಾರ.
  ಅಮೆರಿಕನ್ನರಿಗೆ ಮುಸ್ಲಿಮರ ಮೇಲೆ ಏಕೆ ಅಷ್ಟೊಂದು ಕೋಪ?
  ಅದೇ ರೀತಿ ಮುಸ್ಲಿಮರಿಗೆ ಅಮೆರಿಕವೆಂದರೆ ಕೆಂಡದಂತಹ ಕೋಪ!
  ಇದು ಕ್ರೈಸ್ತ-ಮುಸಲ್ಮಾನ ಮತಗಳ ನಡುವೆ ಇರುವ ವೈಮನಸ್ಯದ ಪರಿಣಾಮವೇ?

ನಿಮ್ಮದೊಂದು ಉತ್ತರ

Fill in your details below or click an icon to log in:

WordPress.com Logo

You are commenting using your WordPress.com account. Log Out /  Change )

Google+ photo

You are commenting using your Google+ account. Log Out /  Change )

Twitter picture

You are commenting using your Twitter account. Log Out /  Change )

Facebook photo

You are commenting using your Facebook account. Log Out /  Change )

w

Connecting to %s