ರಮದಾನ್ ಶುಭಾಶಯಗಳು

 

ನಾಳೆ ಪವಿತ್ರ ರಮದಾನ್ ನ ಪ್ರಥಮ ದಿನ ಎಂದು ಸೌದಿ ಅರೇಬಿಯಾ ಮತ್ತು ಇತರ ರಾಷ್ಟ್ರಗಳು ಘೋಷಿಸಿವೆ. ಸಾವಿರ ಮಾಸಗಳಿಗಿಂತಲೂ ಶ್ರೇಷ್ಠ ಎಂದೂ, ವ್ರತಾಚರಣೆಯ ಪವಿತ್ರ ಮಾಸ ಎಂದೂ ಅರಿಯಲ್ಪಡುವ ರಮದಾನ್ ಜಗದಾದ್ಯಂತ ಮುಸ್ಲಿಂ ಬಾಂಧವರಲ್ಲಿ ಧಾರ್ಮಿಕ ಸಂಚಲನೆ ಆರಂಭಿಸಲಿದೆ. ಜಗತ್ತಿನ ಮೂಲೆ ಮೂಲೆಯಲ್ಲಿರುವ ಇನ್ನೂರು ಕೋಟಿ ಮುಸ್ಲಿಂ ಬಾಂಧವರಲ್ಲಿ ಸುಮಾರು ನೂರು ಕೋಟಿಗೂ ಹೆಚ್ಚು ಜನ ದಿನ ಪೂರ್ತಿ ಉಪವಾಸ ಇದ್ದು ಪವಿತ್ರ  ಕುರಾನ್ ಪಠಣ, ನಮಾಜ್, ದಾನ, ಮುಂತಾದ ಸತ್ಕರ್ಮಗಳಲ್ಲಿ ತಮ್ಮನ್ನು ತಾವು ತೊಡಗಿಸಿಕೊಳ್ಳುವ ಅತ್ಯಪೂರ್ವವಾದ ಧಾರ್ಮಿಕತೆ ವಿಶ್ವವನ್ನು ಬೆರಗುಗೊಳಿಸಲಿದೆ.

ರಮಾದಾನ್ ಮಾಸದ ಚಂದ್ರ ದರ್ಶನ ಆಗುತ್ತಲೇ ಸಮಾಜ ಬಾಂಧವರು ಪರಸ್ಪರರನ್ನು ಅಭಿನಂದಿಸುತ್ತಾ ಸಂದೇಶಗಳನ್ನು ಕಳಿಸುತ್ತಿದ್ದಾರೆ. ಫೇಸ್ ಬುಕ್, ಯೂ ಟ್ಯೂಬ್ ತಾಣಗಳಲ್ಲಿ ರಮಾದಾನ್ ಸಂದೇಶಗಳು ಆಗಮಿಸುತ್ತಿವೆ.  twitter ತಾಣವಂತೂ ರಮಾದಾನ್ tweet  ಗಳ ಅಭೂತಪೂರ್ವ ಸುಗ್ಗಿಯನ್ನೇ ಕಾಣುತ್ತಿದೆ. twitter ನಲ್ಲಿ ಸಿಕ್ಕ tweet  ಹೀಗಿವೆ ನೋಡಿ….

Ramadan is the time when you reboot your soul…

I wish everyone on the planet a beautiful ramadan..

Ramadan is coming, Shaitan is leaving…

Let us reflect on the year that has passed…

ರಮದಾನ್ ಮಾಸ ಮುಸ್ಲಿಂ ಬಾಂಧವರಿಗೂ, ಹಿಂದೂ, ಕ್ರೈಸ್ತ, ಸಿಖ್, ಬುದ್ಧ, ಜೈನ, ಪಾರ್ಸಿ, ಯಹೂದ್ಯ ಮತ್ತಿತರ ಧಾರ್ಮಿಕ ಬಾಂಧವರಿಗೂ ಸಂತಸ, ಉಲ್ಲಾಸವನ್ನು ತರಲಿ, ದೇಶದಲ್ಲಿ ಸುಭಿಕ್ಷೆ ಹೆಚ್ಚಲಿ, ಕೈ ಕೊಟ್ಟು ಕೂತಿರುವ ಮಳೆರಾಯ ರಮಾದಾನ್ ತಿಂಗಳ ಪುಣ್ಯದಿಂದ ಮೋಡಗಳನ್ನು ಕರಗಿಸಿ ಭೂಮಿಗೆ ನವ ಚೇತನ ತರಲಿ ಎಂದು ಹೃತ್ಪೂರ್ವಕವಾಗಿ ಹಾರೈಸುತ್ತಾ ,

 

ಸರ್ವರಿಗೂ ರಮಾದಾನ್ ತಿಂಗಳ ಶುಭಾಶಯಗಳು.

 

 

Advertisements

3 thoughts on “ರಮದಾನ್ ಶುಭಾಶಯಗಳು

 1. Kumar ಹೇಳುತ್ತಾರೆ:

  ಅಬ್ದುಲ್,

  ತಮಗೂ ರಮದಾನ್ ನ ಹೃತ್ಪೂರ್ವಕ ಶುಭಾಶಯಗಳು.
  ಬೆಂಗಳೂರಿನ ಎಲ್ಲಾ ಮೈದಾನಗಳಲ್ಲೂ ರಮದಾನ್ ನ ದಿನಗಳ ಬೆಳಗಿನ ಸಮಯದಲ್ಲಿ ಮುಸ್ಲಿಂ ಹುಡುಗರು ಆಟವಾಡುವುದು ಕಂಡುಬರುತ್ತದೆ.
  ನೀವು ಹೇಳಿದಂತೆ ಎಲ್ಲಾ ಮುಸಲ್ಮಾನರೂ ಈ ಸಮಯದಲ್ಲಿ ಬೆಳಗ್ಗೆ ಬೇಗನೆದ್ದು ಲವಲವಿಕೆಯಿಂದಿರುತ್ತಾರೆ.
  ಅವರ ಚಟುವಟಿಕೆಗಳೇ ರಮದಾನ್ ನೆನಪಿಸುತ್ತದೆ!

  ಒಂದು ಪ್ರಶ್ನೆ: ನಾವು ಆಡುಭಾಷೆಯಲ್ಲಿ ಇದನ್ನು ರಮ್ಜಾನ್ ಎನ್ನುತ್ತೇವೆ. ಆದರೆ, ಮುಸಲ್ಮಾನ ಗ್ರಂಥಗಳಲ್ಲಿ ಮತ್ತು ತಾವು ಬರೆದಿರುವ ಈ ಬ್ಲಾಗಿನ ಪುಟದಲ್ಲಿಯೂ ಇದನ್ನು ರಮದಾನ್ ಎಂದಿದೆ. ಇದೇಕೆ ಹೀಗೆ?

  -ನರೇಂದ್ರ

  1. bhadravathi ಹೇಳುತ್ತಾರೆ:

   ನರೇಂದ್ರ, ತಮಗೂ ರಮದಾನ್ ತಿಂಗಳ ಶುಭಾಶಯಗಳು. ತುಂಬಾ ದಿನಗಳ ನಂತರ ನಮ್ಮ ಭೇಟಿ. ಭಾಭಿ, ಮನೆಯಲ್ಲಿ ಎಲ್ಲರೂ ಚೆನ್ನಾಗಿದ್ದಾರೆಂದು ಭಾವಿಸುತ್ತೇನೆ. ಅರಬ್ಬೀ ಭಾಷೆಯ “ದಾ” ಕಾರ ಉರ್ದು ವಿನಲ್ಲಿ ಇಲ್ಲ, ಹಾಗಾಗಿ ಉರ್ದು ಭಾಷಿಕರು ramzan ಎನ್ನುತ್ತಾರೆ. ಸರಿಯಾದ ಉಚ್ಛಾರ ರಮದಾನ್. ವಂದನೆಗಳು.

   1. ಅಬ್ದುಲ್ ಭಾಯಿ.. ರಮದಾನ್ ತಿ೦ಗಳ ಶುಭಾಶಯಗಳು. ಆ ದೇವರು ನಿಮ್ಮೆಲ್ಲಾ ಆಸೆ-ಆಕಾ೦ಕ್ಷೆಗಳನ್ನು ಪೂರೈಸಿ, ಅನುಗ್ರಹಿಸಿ, ಹರಸಲೆ೦ಬ ಪ್ರಾರ್ಥನೆ. ಮನೆಯಲ್ಲೆಲ್ಲಾ ಕ್ಶ್ಃಏಮವೆ೦ದು ಭಾವಿಸುತ್ತೇನೆ.
    ನಮಸ್ಕಾರಗಳೊ೦ದಿಗೆ,
    ನಿಮ್ಮವ ನಾವಡ.

ನಿಮ್ಮದೊಂದು ಉತ್ತರ

Fill in your details below or click an icon to log in:

WordPress.com Logo

You are commenting using your WordPress.com account. Log Out /  Change )

Google+ photo

You are commenting using your Google+ account. Log Out /  Change )

Twitter picture

You are commenting using your Twitter account. Log Out /  Change )

Facebook photo

You are commenting using your Facebook account. Log Out /  Change )

w

Connecting to %s