western bakeries “lusine” ಬ್ರಾಂಡ್ ಅಡಿಯಲ್ಲಿ ಸ್ವಾದಿಷ್ಟಕರವಾದ ತಿನಿಸುಗಳನ್ನು ಸೊಗಸಾಗಿ ಪ್ಯಾಕ್ ಮಾಡಿ ಮಾರುಕಟ್ಟೆಗೆ ಬಿಡುತ್ತದೆ. ಸೌದಿಯಲ್ಲಿರುವ ಅತೀ ದೊಡ್ಡ ಏಕೀಕೃತ ಡಯರಿ ಫಾರ್ಮ್ ಗಳಲ್ಲಿ ಒಂದಾದ “ಅಲ್-ಮರೈ” ಒಡೆತನದ ಈ ಕೇಕ್ ಕಂಪೆನಿ ಜಾಹೀರಾತು ವಿಭಾಗದಲ್ಲಿ ಎಂಥ ಹೆಡ್ಡ ರನ್ನು ಕೆಲಸಕ್ಕಿಟ್ಟುಗೊಂಡಿದ್ದಾರೆಂದು ತಿಳಿಯಲಿ ಎಂದು ಕಂಪೆನಿಗೆ ಫೋನಾಯಿಸಿದೆ. ಗ್ರಾಹಕ ಸಂಪರ್ಕ ವಿಭಾಗದಿಂದ ಒಬ್ಬ ತರುಣಿ ಉತ್ತರಿಸಿದಳು. ಸ್ವರಮಾಧುರ್ಯ ಕೇಳಿ ಪುಳಕವಾಗಿ ನನ್ನನ್ನು ಬಾಧಿಸಿದ ವಿಷಯ ಹೇಳಿದೆ. ಈ ಜಾಹೀರಾತು sick looking, ಅಷ್ಟೇ ಅಲ್ಲ ಇದನ್ನು ನೋಡಿದ ಯಾವನೂ ನಿಮ್ಮ ಕೇಕ್ ತಿನ್ನಲಿಕ್ಕಿಲ್ಲ, ನೀನು ಮಹಿಳೆ ಆದ್ದರಿಂದ ಆ ಚಿತ್ರ ನಿಜಕ್ಕೂ ಹೇಗೆ ಕಾಣುತ್ತಿದೆ ಎಂದು ಹೇಳಲು ಆಗುತ್ತಿಲ್ಲ, ಎಂದು ಹೇಳಿದಾಗ ಅತ್ಯಂತ ಗಮನ ಕೊಟ್ಟು ಆಲಿಸಿದ ಲಲನಾ ಮಣಿ ತನಗೂ ಆ ಜಾಹೀರಾತು ಅಷ್ಟು ಚೆನ್ನಾಗಿ ಕಾಣಲಿಲ್ಲ, ಆದರೆ ನೌಕರಳಾಗಿ ನಾನೇನೂ ಹೇಳುವಂತಿಲ್ಲವಲ್ಲ, ನಿಮ್ಮ ದೂರನ್ನು ನಾನು ಮುಖ್ಯಸ್ಥರಿಗೆ ತಲುಪಿಸುತ್ತೇನೆ ಎಂದು ನನ್ನ ಹೆಸರು, ಮೊಬೈಲ್ ನಂಬರ್ ತೆಗೆದುಕೊಂಡಳು. ಸುಂದರ ಆಂಗ್ಲ ಭಾಷೆಯಲ್ಲಿ ಮಾತನಾಡುತ್ತಿದ್ದ ಆಕೆಯನ್ನು ಕೇಳಿದೆ ಯಾವ ದೇಶದವಳೆಂದು. ಹೇಳಿಯೇ ಬಿಟ್ಟಳು, ನಮ್ಮ ಪರಮ ಮಿತ್ರ, ಆಪತ್ಕಾಲವನ್ನು ಆಗಾಗ ನಮ್ಮ ಹೊಸ್ತಿಲಿಗೆ ತಂದು ನಿಲ್ಲಿಸುವ ದೇಶದವಳು, ಪಾಕಿಸ್ತಾನ ಎಂದು.
ಹೀಗೊಂದು ಜಾಹೀರಾತು
ಸೌದಿ ಅರೇಬಿಯಾದ ಜೆಡ್ಡಾ ದ ನಗರದಲ್ಲಿ ಕಾಣ ಸಿಕ್ಕಿದ ಜಾಹೀರಾತು. ಡ್ರೈವ್ ಮಾಡುತ್ತಾ ಹೋಗುತ್ತಿದ್ದಾಗ ಈ ಚಿತ್ರ ನೋಡಿದ ಕೂಡಲೇ ನನಗನ್ನಿಸಿದು ಇದೇನೋ ಅಪ್ಪಿ ತಪ್ಪಿ ಅರಿವಿಲ್ಲದೆ ಬಂದು ಬಿಟ್ಟಿದೆ, ಯಾವುದೋ ಹಳೆಯ ಮಲಿನವಾದ ಚಿತ್ರವಿರಬೇಕು ಎಂದು. ನನ್ನ ಗ್ರಹಿಕೆ ಸುಳ್ಳಾಯಿತು ಎಂದು ಸ್ವಲ್ಪ ದೂರ ಒಂದು ರೌಂಡ್ ಅಬೌಟ್ (ಸರ್ಕಲ್) ಸಿಕ್ಕ ಕೂಡಲೇ ತಿಳಿಯಿತು. ಅಲ್ಲೂ ಹಿಂದಿನದಕ್ಕಿಂತ ದೊಡ್ಡ ಜಾಹೀರಾತು. ಇದನ್ನು ಸೃಷ್ಟಿಸಿದ ವ್ಯಕ್ತಿಯ ಕಲೆ, ತಲೆ ಬಗ್ಗೆ ವಿಪರೀತ ಅಭಿಮಾನ ಉಂಟಾಗಿ ಸೌದಿ ಅರೇಬಿಯಾದ ಪ್ರಸಿದ್ಧ ಕೇಕ್ ಕಂಪೆನಿ ನಗರದ ತುಂಬಾ ಜಾಹೀರಾತಿನ ಮೆರವಣಿಗೆಯನ್ನೇ ಶುರು ಮಾಡಿದ್ದರು.
ಚಿತ್ರ ದಲ್ಲಿರುವವನ ತಲೆ ಕೂದಲು, ಆ ದಾಡಿ, ಅವನ ಅವತಾರ ನೋಡಿದರೆ ತಿನ್ನುವ ಚಪಲ ಬಿಡಿ ವಾಕರಿಕೆ ಶುರುವಾಗುತ್ತದೆ.
ಈಗ ಸೌದಿ ಅರೇಬಿಯಾದಲ್ಲಿ ಬಹುತೇಕ ಕಂಪೆನಿಗಳು ಮಹಿಳೆಯರನ್ನು ಕೆಲಸಕ್ಕಿಟ್ಟುಕೊಂಡಿವೆ, ನಮ್ಮ ಕಂಪೆನಿಯನ್ನು ಹೊರತು ಪಡಿಸಿ. ಅದಕ್ಕೇ ಇರಬೇಕು ನಮ್ಮ ಕಂಪೆನಿ ಎಂದರೆ ನನ್ನ ಶ್ರೀಮತಿಗೆ ಪ್ರೀತಿ ಸ್ವಲ್ಪ ಜಾಸ್ತಿ, ನನ್ನ ದಾರಿಗೆ distraction ತಂದು ಒಡ್ಡುತ್ತಿಲ್ಲವಲ್ಲ ಎಂದು.
ಜಾಹೀರಾತಿನ ಎಡ ತುದಿಯಲ್ಲಿ ಅರಬಿಯಲ್ಲಿ ಬರೆದಿರುವುದು “ಎಚ್ಚರಿಕೆ, ಕೇಕ್ನಲ್ಲಿ ಕ್ರೀಮ್ ಹೆಚ್ಚಾಗಿ ತುಂಬಲ್ಪಟ್ಟಿದೆ” ಎಂದು. ನಿಮಗೆ ಹೇಗೆ ಕಾಣುತ್ತದೆ, ಈ ಜಾಹೀರಾತಿನ ಚಿತ್ರ ನೋಡಿ?
Advertisements