ಒಂದು ದೊಡ್ಡ ಜಾಡಿ ಮತ್ತು ಎರಡು ಕಪ್ಪು ಕಾಫಿ

ಒಬ್ಬ ಪ್ರೊಫೆಸರ್ ತಮ್ಮ ತತ್ವಶಾಸ್ತ್ರದ ತರಗತಿಯಲ್ಲಿ ತಮ್ಮೊಂದಿಗೆ ಒಂದಿಷ್ಟು ವಸ್ತುಗಳನ್ನು ತರುತ್ತಾರೆ. ವಿದ್ಯಾರ್ಥಿಗಳೊಂದಿಗೆ ಮಾತನಾಡುತ್ತಾ ಒಂದು ದೊಡ್ಡ ಜಾಡಿಯೊಳಗೆ ( jar ) ಚೆಂಡುಗಳನ್ನು ಹಾಕಿ ಜಾಡಿ ತುಂಬಿತಾ ಎಂದು ಕೇಳುತ್ತಾರೆ. ವಿದ್ಯಾರ್ಥಿಗಳು ಹೌದು ತುಂಬಿತು ಎನ್ನುತ್ತಾರೆ. ನಂತರ ಪ್ರೊಫೆಸರ್ ಒಂದಿಷ್ಟು ಸಣ್ಣ ಸಣ್ಣ ಕಲ್ಲುಗಳನ್ನು ಜಾಡಿಯೊಳಕ್ಕೆ ಹಾಕಿ ಮತ್ತೊಮ್ಮೆ ಕೇಳುತ್ತಾರೆ ಜಾಡಿ ತುಂಬಿತಾ ಎಂದು. ವಿದ್ಯಾರ್ಥಿಗಳು ಹೌದು ಎನ್ನುತ್ತಾರೆ. ಮುಂದುವರೆದ ಪ್ರೊಫೆಸರ್ ಜಾಡಿಯೊಳಗೆ ಒಂದಿಷ್ಟು ಮರಳನ್ನು ಹಾಕಿ ಅಲ್ಲಾಡಿಸಿ ಕೇಳುತ್ತಾರೆ ಅದೇ ಪ್ರಶ್ನೆಯನ್ನು. ವಿದ್ಯಾರ್ಥಿಗಳು ಹೌದು ಸಾರ್ ಜಾಡಿ ತುಂಬಿದೆ ಎನ್ನುತ್ತಾರೆ. ಕೊನೆಗೆ ಪ್ರೊಫೆಸರ್ ಚೆಂಡುಗಳು, ಕಲ್ಲುಗಳು ಮತ್ತು ಮರಳು ತುಂಬಿದ ಜಾಡಿಯೊಳಗೆ ಎರಡು ಕಪ್ಪು ಕಾಫಿ ಹಾಕಿ ತುಮ್ಬಿಸಿದಾಗ ವಿದ್ಯಾರ್ಥಿಗಳು ಗೊಳ್ಳೆಂದು ನಗುತ್ತಾರೆ. ವಿದ್ಯಾರ್ಥಿಗಳನ್ನು ಉದ್ದೇಶಿ ಮಾತನಾಡುವ ಪ್ರೊಫೆಸರ್ ಹೇಳುತ್ತಾರೆ ಈ ಜಾಡಿ ನಿಮ್ಮ ಜೀವನದ ಹಾಗೆ. ಚೆಂಡುಗಳು ಜೀವನದ ಪ್ರಮುಖ ಅಂಗಗಳು; ನಿಮ್ಮ ದೇವರು, ಕುಟುಂಬ, ಮಕ್ಕಳು, ನಿಮ್ಮ ಆರೋಗ್ಯ ಮತ್ತು ಇತರೆ ಅಮೂಲ್ಯ ವಸ್ತುಗಳು. ಬೇರೆಲ್ಲೇ ನಷ್ಟ ಬಂದರೂ ಇವುಗಳಿದ್ದರೆ ನಿಮ್ಮ ಜೀವನ ನಡೆಯುತ್ತದೆ. ಕಲ್ಲುಗಳು ನಿಮ್ಮ ಉದ್ಯೋಗ, ಕಾರು ಮತ್ತು ಮನೆ ಇದ್ದ ಹಾಗೆ. ಮರಳು ಚಿಕ್ಕ ಪುಟ್ಟ ಸಂಗತಿಗಳು. ನೀವು ಮೊದಲಿಗೇ ಮರಳನ್ನು ಜಾಡಿಯೊಳಕ್ಕೆ ತುಂಬಿದರೆ ಚೆಂಡುಗಳಿಗೂ ಮತ್ತು ಕಲ್ಲುಗಳಿಗೂ ಸ್ಥಳವಿರುವುದಿಲ್ಲ ಜಾಡಿಯಲ್ಲಿ. ಬದುಕೂ ಸಹ ಹೀಗೆಯೇ. ಪ್ರಥಮವಾಗಿ ನೀವು ನಿಮ್ಮ ಬಗ್ಗೆ, ಕುಟುಂಬದ ಬಗ್ಗೆ, ಮಕ್ಕಳ ಮತ್ತು ಆರೋಗ್ಯದ ಬಗ್ಗೆ ಹೆಚ್ಚು ಗಮನ ಹರಿಸಬೇಕು. ಸಣ್ಣ ವಿಷಯಗಳ ಬಗ್ಗೆ ಹೆಚ್ಚು ಗಮನ ನೀಡಿದರೆ ಬದುಕಿನ ದೊಡ್ಡ ಆನಂದಗಳನ್ನು ನಿರ್ಲಕ್ಷ್ಯ ಮಾಡಿದಂತೆ. ಮಕ್ಕಳೊಂದಿಗೆ ಆಡಿ, ಮಡದಿಯ ಕಡೆ ಗಮನ ನೀಡಿ, ಬದುಕನ್ನು ಚೆನ್ನಾಗಿ ಅನುಭವಿಸಿ. ಬಾಕಿಯೆಲ್ಲ ಮರಳು, ಗೌಣ. ಈ ಮಾತನ್ನು ಮುಗಿಸಿ ಪ್ರೊಫೆಸರ್ ಹೊರಡಲು ನಿಂತಾಗ ವಿದ್ಯಾರ್ಥಿಯೊಬ್ಬಳು ಕೇಳುತ್ತಾಳೆ, ಹೌದು ಸಾರ್ ಆದರೆ ಆ ಎರಡು ಕಪ್ಪು ಕಾಫಿ ಯಾವುದನ್ನು ಪ್ರತಿನಿಧಿಸುತ್ತವೆ? ಇದನ್ನು ಕೇಳಿ ಪ್ರೊಫೆಸರ್ ನಗುತ್ತಾ ಹೇಳುತ್ತಾರೆ. ಒಳ್ಳೆಯ ಪ್ರಶ್ನೆ:

ನಿಮ್ಮ ಬದುಕು ಎಷ್ಟೇ ತುಂಬಿದೆ, ತೃಪ್ತಿಕರ ಎಂದು ನಿಮಗನ್ನಿಸಿದರೂ ನಿಮ್ಮ ಮಿತ್ರರೊಂದಿಗೆ ಕಾಫಿ ಕುಡಿಯಲು ಸಮಯ ಇದ್ದೇ ಇರುತ್ತದೆ. ಇದನ್ನು ಕೇಳಿ ವಿದ್ಯಾರ್ಥಿಗಳು ಮೂಕವಿಸ್ಮಿತರಾಗಿ ಧನ್ಯತಾ ಭಾವದಿಂದ ಹೊರನಡೆಯುತ್ತಾರೆ.

how ever busy you are, stop once in a while and smell the grass, ಅಲ್ವಾ

Advertisements

4 thoughts on “ಒಂದು ದೊಡ್ಡ ಜಾಡಿ ಮತ್ತು ಎರಡು ಕಪ್ಪು ಕಾಫಿ

  1. Shamala ಹೇಳುತ್ತಾರೆ:

    ಖಂಡಿತಾ ಹೌದು…….. ಸ್ನೇಹಿತರು ಮಹಾರಾಜನ ರಥದ ಹಾಗೆ. ಎಷ್ಟೇ ಜನದಟ್ಟಣೆ, ನೂಕು ನುಗ್ಗಲು ಇದ್ದರೂ…. ರಥಕ್ಕೆ ಹೇಗೆ ತಾನೇ ತಾನಾಗಿ ಜಾಗ ಬಿಡುತ್ತಾರೊ ಹಾಗೆ ಎಷ್ಟೇ ಕೆಲಸ, ಕಷ್ಟ ಇದ್ದರೂ…. ಸ್ನೇಹಿತರಾಗಿ ಜೀವನದಲ್ಲಿ ಸಮಯ ಯಾವಾಗಲೂ ಇದ್ದೇ ಇರತ್ತೆ. ಒಳ್ಳೆಯ ಬರಹ. ನಮಗೆ ಪಾಠ ಹೇಳಿದ ಮೇಷ್ಟ್ರು ’ಕಾಫಿ’ ಹೇಳಿರಲಿಲ್ಲ….. ನೀರು ಸುರಿದು ತೋರಿಸಿದ್ದರು….. ಈ ಕಾಫಿಯ ಸೇರ್ಪಡೆ ನಿಮ್ಮ ಸ್ವಂತದ್ದಾ? 🙂 ಹ್ಹ ಹ್ಹ ಹ್ಹ……..

    ಶ್ಯಾಮಲ

ನಿಮ್ಮದೊಂದು ಉತ್ತರ

Fill in your details below or click an icon to log in:

WordPress.com Logo

You are commenting using your WordPress.com account. Log Out /  Change )

Google+ photo

You are commenting using your Google+ account. Log Out /  Change )

Twitter picture

You are commenting using your Twitter account. Log Out /  Change )

Facebook photo

You are commenting using your Facebook account. Log Out /  Change )

w

Connecting to %s