anni-war-sary

funnyಮನೆಯೊಡತಿ ಮಾತನ್ನು veto ಮಾಡಿದರೆ ಶುರು ಸಂಗೀತ ಸಂಜೆ. ಹರಿಕಥೆಯಾದರೂ ಅನ್ನಿ. ಯಾವುದಕ್ಕೂ ಬಂತು ಪಾತ್ರೆಗಳಿಗೆ ತಾಪತ್ರಯ. ಧಡಲ್, ಭಡಲ್, ದಬರಿಯಿಂದ ಬಾಂಡ್ಲಿ ವರೆಗೆ ಎಲ್ಲವಕ್ಕೂ ಮಂಗಳಾರತಿ. ಮಹಿಳೆಯರಿಗೆ ಕೋಪ ವ್ಯಕ್ತಪಡಿಸಲು ಹಲವಾರು ಮಾರ್ಗಗಳು. ಸೌಟು, ಗ್ಯಾಸ್ ಲೈಟರ್. ನಮಗೋ? ಬಡವನ ಕೋಪ ದವಡೆಗೆ ಮೂಲ, ದನಗಳ ಥರ ಕೋಪವನ್ನು ದವಡೆಗಿಟ್ಟು ಅಗಿಯುತ್ತಾ ಕೂರಬೇಕು. ಕೆಲವೊಮ್ಮೆ ಅಡುಗೆ ಮನೆಗೆ ಕಾಲಿಡುವಾಗ ಪಾತ್ರೆ ಪಗಡಿಗಳು ದೀನವಾಗಿ ನನ್ನನ್ನು ನೋಡಿ ಈಗ ಅದ್ಯಾವ ಹೊಸ scandal ತಂದೆಯಪ್ಪಾ ನಮ್ಮ ಜೀವನ ನರಕ ಮಾಡಲು ಎಂದು ಕರುಣೆಯಿಂದ ನೋಡುತ್ತವೆ. ಗ್ರಾನೈಟ್ ಮೇಲೆ ಕುಟ್ಟಿಸಿ ಕೊಂಡು ಮುಖ ಮೂತಿ ಕಳೆದುಕೊಂಡಿರುವ ಪಾತ್ರೆಗಳ ಹಾಗೆಯೇ bachelorhood ಕಳಕೊಂಡ ಗಂಡಿನ ಬಾಳು. customer is always right, ಆದರೆ ಸಂಸಾರದಲ್ಲಿ ಹೆಂಡತಿಯೇ ರೈಟ್. ಕೆಲವೊಮ್ಮೆ customer is always the loser, ಸಂಸಾರ ರಥದಲ್ಲಿ ಇದರ ಪಟ್ಟ ಗಂಡಿಗೆ. ನಮ್ಮ ಹಣೆಯಲ್ಲಿ ಗೆಲುವನ್ನು ಬರೆಯಲು ಮರೆತ ಗಂಡಸಾದ ಆ ಪರಮಾತ್ಮ. ನಿಲ್ಲಿ, ನಿಲ್ಲಿ. ಒಂದು ಮಾತು ನೆನಪಿಗೆ ಬಂತು.  “ಹೆಣ್ಣು ಎಷ್ಟು ಬೇಗ ಮದುವೆ ಆಗುತ್ತಾಳೋ ಅಷ್ಟು ಲಾಭಕರ ಅವಳಿಗೆ, ಗಂಡು ಎಷ್ಟು ತಡ ಮಾಡುತ್ತಾನೋ ಅಷ್ಟು ಲಾಭಕರ ಅವನಿಗೆ”. 

ನಿಜಾನಾ?

 ಮದುವೆ ಅನ್ನೋ ವಿಶೇಷವೇ ಹೀಗೆ, ಹಳೆ ಗಾದೆಗಳೆಲ್ಲ ನೆನಪಿಗೆ ಬಂದು ಬಿಡುತ್ವೆ.

 ಈಗಿನ ಹೊಸ ತಗಾದೆ ಎಂದರೆ wedding anniversary ಮಾಡಬೇಕು. ನಾನು, ಅದು ನಮ್ಮ ಸಂಸ್ಕಾರ ಅಲ್ಲ ಎಂದರೆ ಕುಕ್ಕರ್ ಅನ್ನು ಕೌಂಟರ್ ಟಾಪಿನ ಮೇಲೆ ಕುಕ್ಕಿ ಹೇಳುತ್ತಾಳೆ, ಇಂಗ್ಲಿಷ್ ಹಾಡು ಕೇಳಲು ಸಂಸ್ಕಾರ ಅಡ್ಡ ಬರೋದಿಲ್ಲವಲ್ಲ? facebook ನಲ್ಲಿ ಕಾಲ ಕಳೆಯಲು ಸಂಸ್ಕೃತಿ ತಗಾದೆ ಮಾಡೋದಿಲ್ವಲ್ಲ?

If I lay here, If I just lay here, Would you lie with me, And just forget the world?

ಗುನುಗಿಸುತ್ತಾ follow on ಪಡೆದ ಪೆಚ್ಚು ಮೋರೆಯ ನಾಯಕನಂತೆ ಮೆಲ್ಲನೆ ಅಡುಗೆ ಮನೆಯಿಂದ  ಹೊರ  ನಡೆಯುತ್ತೇನೆ.

 ನಿಮ್ಮಲ್ಲಿ ಒಂದು ಸೀಕ್ರೆಟ್:  ನಾನೇನಾದರೂ ಮನಸ್ಸು ಬದಲಾಯಿಸಿ ಅನ್ನಿವೆರ್ಸರಿ ಗೆ ಒಪ್ಪಿದ್ದೇ ಆದರೆ ಅವಳ ಗಿಫ್ಟ್ ಏನು ಗೊತ್ತಾ? ಒಂದು ಸುಂದರ ಹಿಡಿಕೆ ಇರುವ ಮೋಹಕ ಸುತ್ತಿಗೆ. ಹೌದ್ರೀ ಸುತ್ತಿಗೆ. ಕೋಪ ಬಂದಾಗ magistrate ಥರ ಕುಟ್ಟುತ್ತಾ ಕೂರಲಿ. 

 ನನ್ನ  ಮಗ ಹುಟ್ಟಿದ್ದು ಮೊರಾರ್ಜಿ ದೇಸಾಯಿ ಹುಟ್ಟಿದ ದಿನ. ಫೆಬ್ರವರಿ ೨೯, ೨೦೦೪. ಲೀಪ್ ಇಯರ್ ನಲ್ಲಿ (ಅಧಿಕ ವರ್ಷ ) ಹುಟ್ಟಿದ ನನ್ನ ಮಗನ ಹುಟ್ಟು ಹಬ್ಬ ೪ ವರ್ಷಗಳಿಗೊಮ್ಮೆ. ಅದನ್ನೂ ಸಹ ಆಚರಿಸಲಿಲ್ಲ ನಾನು, ಏಕೆಂದರೆ  birth ಡೇ ನಮ್ಮ ಸಂಸ್ಕೃತಿಯಲ್ಲ ಎಂದು. ನನ್ನ ಪ್ರೀತಿಯ ocean of pride, river of joy ಆದ ನನ್ನ ಮಗನಿಗೇ ಇಲ್ಲದ ಆಚರಣೆ ಇವಳಿಗ್ಯಾಕೋ ಏನೋ? ಇದೆಲ್ಲಾ ಅವಳಿಗೆ ಬೇಕಿಲ್ಲ. ಈ ಜೂನ್ ೧೧ ಕ್ಕೆ ಮಾಡಲೇಬೇಕು ಅನ್ನಿವೆರ್ಸರಿ.

ನನ್ನ (ಕಾರಾ) ಗೃಹ ವಾಸದ ಅನ್ನಿವೆರ್ಸರಿ.

ಮಹಿಳೆಯರಿಗೆ ತಮ್ಮ ಇನಿಯಂದಿರು ಅವರ ಹುಟ್ಟು ಹಬ್ಬಕ್ಕೆ, anniversary ಮತ್ತೇನೇನು ವಿಶೇಷ ಸಂದರ್ಭಗಳು ವಕ್ಕರಿಸಿ  ಕೊಳ್ಳುತ್ತವೆಯೋ ಅವಕ್ಕೆಲ್ಲ ಕೊಡ ಬೇಕು ಗಿಫ್ಟು, ಆದರೆ ಗಂಡಿಗೆ?. ಅದೇ ಹಳೆ ಬಾಟಾ ಕಂಪೆನಿಯ ಸವೆದ ಎಕ್ಕಡಗಳೋ? ಇದ್ಯಾವ ನ್ಯಾಯವೋ ಏನೋ?

 ಒಟ್ಟಿನಲ್ಲಿ ಮದುವೆಯೆಂಬ ಮೋಜಿನ ಮಜಾ ಉಡಾಯಿಸುತ್ತಿರುವುದು ಮಹಿಳೆಯರೇ, ನಾವಲ್ಲ.

ನಮ್ಮ balance ನಲ್ಲಿ ಮದುಮಗ, ಅಳಿಯಂದಿರು, ಅಂತ ಒಂದಿಷ್ಟು ಅತ್ತೆ ಮನೆಯಲ್ಲಿ ಉಪಚಾರ  ಸಿಗುತ್ತದಲ್ಲ ಅದೇ ಬಾಕಿ. ಅಷ್ಟಕ್ಕೆ ಮತ್ತು ಅಲ್ಲಿಗೇ ಸೀಮಿತ ನಮ್ಮ ಮೋಜು.

ಗಂಡಿನ ಮೋಜು.

Advertisements

ನಿಮ್ಮದೊಂದು ಉತ್ತರ

Fill in your details below or click an icon to log in:

WordPress.com Logo

You are commenting using your WordPress.com account. Log Out /  Change )

Google+ photo

You are commenting using your Google+ account. Log Out /  Change )

Twitter picture

You are commenting using your Twitter account. Log Out /  Change )

Facebook photo

You are commenting using your Facebook account. Log Out /  Change )

w

Connecting to %s