ಒಂದು ಎರಡು ಬೇಕು ಮೂರು ಮಕ್ಕಳು ಸಾಕು. ೭೦ ರ ದಶಕದಲ್ಲಿ ನಮ್ಮ ನಿಶಾ ಚಟುವಟಿಕೆ ಜೋರಾದಾಗ ಸರಕಾರ ನಿಷೇಧಾಜ್ಞೆ ಜಾರಿ ಮಾಡಿದ್ದು ಹೀಗೆ. ತದನಂತರ ಇಲಿ ಹೆಗ್ಗಣಗಳು FCI ಗೋಡೌನ್ನಿನ ದವಸ ಧಾನ್ಯಗಳನ್ನು ನುಂಗಿ ಹಾಕಿದಾಗ ಆ ಪ್ರಮಾದವನ್ನು ಮರೆಮಾಚಲು ಮತ್ತೊಂದು ಬಾಣ ಬಿಟ್ಟಿತು ಸರಕಾರ; food grain shortage ಇದೆ, ಮ್ಯಾಟಿನೀ, ಫರ್ಸ್ಟ್ ಶೋ ಎರಡು ದೆಖಾವೆಗಳು ಸಾಕು, ಆರತಿಗೊಬ್ಬ, ಕೀರ್ತಿಗೊಬ್ಬಳು ಅಂತ. ಸ್ವಲ್ಪ ವರ್ಷಗಳ ನಂತರ ರಾಜೀವ್ ಗಾಂಧಿಯ ವಿದೇಶ ಪ್ರವಾಸ ಜಾಸ್ತಿಯಾಗಿ ಮುಂದುವರಿದ ರಾಷ್ಟ್ರಗಳನ್ನು ನೋಡಿ one is fun ಎಂದು ನಮ್ಮ ಚೇಷ್ಟೇಗಳಿಗೆ ಪೂರ್ಣ ವಿರಾಮ ಹಾಕಿತು. ಇದ್ಯಾವುದರ ರಗಳೆಯೂ ಬೇಡ let us find middle course ಎಂದು ೨ ಮಕ್ಕಳಿಗೆ ಇನಿಂಗ್ಸ್ ಡಿಕ್ಲೇರ್ ಮಾಡಿದೆವು ನಾವು.
Advertisements