ಕಸಬ ಪಾಕಿ ಅಂತ ಇಮ್ರಾನ್ ಖಾನ್ಗೂ ಗೊತ್ತು, ಜ್ಯರ್ದಾರಿಗೂ ಗೊತ್ತು, ಗೀಲಾನೀಗೂ ಗೊತ್ತು ಮತ್ತು ಇವರ ತಾತ ಮುತ್ತಾತಂದಿರಿಗೂ ಗೊತ್ತು. ಕಸಬ ಯಾರೂಂತ ನಮಗೆ ಗೊತ್ತಿಲ್ಲ ಎಂದು ಪಾಕ್ ಹೇಳಿದ್ದು time buying tactics. ಇದಕ್ಕೆ ನಮ್ಮ ರಾಜಕಾರಣಿಗಳು ಗೋಣು ಹಾಕಿದ್ದು ನಮ್ಮ ದೌರ್ಭಾಗ್ಯ.
ಮುಂಬೈ ನರಹತ್ಯೆ ನಡೆದ ಮಾರನೆ ದಿನವೇ ನಮ್ಮ ವೈಮಾನಿಕ ದಳಕ್ಕೆ ಆಜ್ಞೆ ಕೊಟ್ಟಿದ್ದರೆ ಪಾಕ್ ಆಕ್ರಮಿತ ಕಾಶ್ಮೀರದ ಎಲ್ಲಾ ಭಯೋತ್ಪಾದಕ ಕೇಂದ್ರಗಳನ್ನು ಪಾಕಿಗಳಿಗೆ ಗೊತ್ತಾಗುವ ಮೊದಲೇ ಚಿಟಿಕೆ ಹೊಡೆಯುವಷ್ಟರಲ್ಲಿ ಭಸ್ಮ ಮಾಡಬಹುದಿತ್ತು. ಆದರೆ ಅದಕ್ಕೆ ಬೇಕಾದ ಎದೆಗಾರಿಕೆ ಎಲ್ಲಿಂದ ತರೋದು? pok ಮರಳಿ ಪಡೆಯುವ ಸುವರ್ಣಾವಕಾಶವನ್ನು ನಾವು ಬಿಟ್ಟೆವು. ಈಗ ಹಲುಬಿ ಪ್ರಯೋಜನವಿಲ್ಲ.
ಇನ್ನು ಮುಂಬೈ ಸಾಕ್ಷ್ಯಗಳನ್ನು ಪಾಕಿಗೆ ಹಸ್ತಾಂತರಿಸುವ ಬದಲು ಲುಚ್ಚಾ ಅಮೇರಿಕೆಗೆ ಕೊಟ್ಟಿದ್ದು ನನಗೆ ಕಗ್ಗಂಟು. ಅಮೇರಿಕಾ ನಮ್ಮ ಮಿತ್ರನಲ್ಲ. ಎಂದೂ ನಮ್ಮ ಮಿತ್ರನಾಗಿರಲಿಲ್ಲ. ಸಾಕ್ಷ್ಯಾಧಾರಗಳನ್ನು ಪಾಕಿಗೆ ಕೊಟ್ಟು ಕೂಡಲೇ ಅಪರಾಧಿಗಳನ್ನು ನಮಗೆ ಒಪ್ಪಿಸಲು ಕಾಲದ ಗಡುವು ಕೊಡೊ ಬದಲು ವಾಷಿಂಗ್ಟನ್ ಯಾತ್ರೆಗೆ ಚಿದಂಬರಂ ಆಗಲೀ ಮುಖರ್ಜೀ ಹೋಗುವ ಮರ್ಮ ಏನು ಅನ್ನುವುದೇ ರಹಸ್ಯ.
ಯಾವುದಕ್ಕೂ ಪಡೆದುಕೊಂಡು ಬರಬೇಕು ಅಂತಾರಲ್ಲ ಹಾಗೆ ನಮಗೆ ಸಿಕ್ಕ ನಾಯಕರಿಂದ ಹೆಚ್ಚಿನದನ್ನು ನಿರೀಕ್ಷಿಸುವುದು ಸರಿಯಲ್ಲವೇನೋ.