ಪಶ್ಚಿಮದ ಕ್ರೌರ್ಯ

ಅನಾಗರೀಕ ಜನರ ವಿರುದ್ಧ ವಿಷಾನಿಲ ಪ್ರಯೋಗಿಸುವುದನ್ನು ನಾನು ಬಲವಾಗಿ ಸಮರ್ಥಿಸುತ್ತೇನೆ. ಅದು ಆ ಜನರಲ್ಲಿ ಒಳ್ಳೆ ಭಯ ಹುಟ್ಟಿಸಬಹುದು. ಆಧುನಿಕ ವಿಜ್ಞಾನದ ನೆರವಿನಿಂದ ಯುದ್ಧ ತಂತ್ರಗಳನ್ನು ರೂಪಿಸುವುದರಲ್ಲಿ ಯಾವ ತಪ್ಪೂ ಇಲ್ಲ. ನಮ್ಮ ಸೈನಿಕರು ಸಾಮ್ರಾಜ್ಯದ ಗಡಿಗಳ ಜನರ ದಂಗೆ ಹತ್ತಿಕ್ಕಲು ತಮಗೆ ಸರಿ ಕಂಡ ಅಸ್ತ್ರಗಳನ್ನು ಉಪಯೋಗಿಸೋ ಹಕ್ಕನ್ನು ಯಾರೂ ನಿರಾಕರಿಸಕೂಡದು ಎಂದೂ ಆ ಅಧಿಕಾರಿ ಅಭಿಪ್ರಾಯ ಪಟ್ಟರು. ಆ ವ್ಯಕ್ತಿ ಬೇರೆ ಯಾರೂ ಅಲ್ಲ. ದ್ವಿತೀಯ ಮಹಾ ಯುದ್ಧದ ಹೀರೋ ವಿನ್ಸ್ಟನ್  ಚರ್ಚಿಲ್.

ಅಮೆರಿಕಕ್ಕೆ ವಿಶ್ವ ಒಂದು ಸಂತೆಯಿದ್ದಂತೆ. ನಾವೆಲ್ಲಾ ಬರೀ ಗಿರಾಕಿಗಳು. ಅಮೇರಿಕಾದ ಮಿತ್ರ ಎಂದರೆ ಗ್ರೇಟ್ ಬ್ರಿಟನ್ ಮಾತ್ರ. ಶೀತಲ ಯುದ್ಧದ ಸಮಯದಲ್ಲಿ ಸೋವಿಯತ್ ಒಂದಿಗೆ ನಾವಿದ್ದದ್ದು ಅಮೇರಿಕಾ ಮರೆಯುವುದಿಲ್ಲ. ಅಮೆರಿಕೆಗೆ ಬೇಕಿರುವುದು “ಹೌದಣ್ಣ”ರು ಮಾತ್ರ. ಅವರ ಸೈನಿಕ ಸಾಹಸ ಮತ್ತು ದುಸ್ಸಾಹಸಗಳಿಗೆ ವಿಶ್ವ ಸಂಸ್ಥೆಯ ಭದ್ರತಾ ಸಮಿತಿಯಲ್ಲಿ ಸಾಕ್ಷಿ ನಿಲ್ಲುವುದು ಹಾಗೂ ಹಾಡಿ ಹೊಗಳುವುದು. ಇವೆರಡೂ ನಮ್ಮಿಂದ ಸಾಧ್ಯವಿಲ್ಲ.

ಅಮೆರಿಕಾದಿಂದ ಹೆಚ್ಚಿನದನ್ನು ನಿರೀಕ್ಷಿಸಿದ್ದೆ ನಾವು ಮಾಡಿದ ದೊಡ್ಡ ತಪ್ಪು. ಮುಂಬೈ ನರಹತ್ಯೆ ಬಿಸಿಯಿರುವಾಗಲೇ ಪಾಕ್ನ ಮೇಲೆ ಧಾಳಿ ಮಾಡಿ ಆಕ್ರಮಿತ ಕಾಶ್ಮೀರವನ್ನು ಮರಳಿ ಪಡೆಯುವ ಸುವರ್ಣಾವಕಾಶವನ್ನು ನಾವು ಬಿಟ್ಟೆವು. 

ಮತ್ತೊಂದು ಕಾರಣವೆಂದರೆ ನಮ್ಮ ವಿದೇಶಾಂಗ ನೀತಿಯ ಸಂಪೂರ್ಣ ವೈಫಲ್ಯ. ಎರಡನೆ ಮಹಾಯುದ್ಧದ ತಲೆಮಾರಿನ ಅಧಿಕಾರಿಗಳಿಗೆ ಪ್ರಸಕ್ತ new world order ನ ಗಂಧ ಗಾಳಿಯೂ ಇಲ್ಲ. ಕಳೆದ ಸಲ ನಡೆದ ಸಂಸ್ಥೆಯ ಮಹಾ ಕಾರ್ಯದರ್ಶಿ ಚುನಾವಣೆಯಲ್ಲಿ ಸ್ಪರ್ದಿಸಿದ್ದ ಶಶಿ ತರೂರ್ ಅವರಿಗೆ ದೂರದ ದೇಶಗಳ ಬೆಂಬಲ ಇರಲಿ, ಪಕ್ಕದ ಶ್ರೀ ಲಂಕೆಯೂ ಬೆಂಬಲಿಸಲಿಲ್ಲ. ರಾಜೀವ್ ಗಾಂಧಿ ಸಮಯದಲ್ಲಿ ನೇಪಾಳವನ್ನು ಸತಾಯಿಸಿದೆವು. ಚೀನಾಕ್ಕೆ ನಮ್ಮನ್ನು ಕಂಡರೆ ಮತ್ಸರ, ಹಗೆ. ಹಿಂದೀ ಚೀನೀ ಭಾಯಿ ಭಾಯಿ ಎಂದು ಹೇಳಿ ಚೀನಿ ನಾಯಕ ಚೌ ಏನ್ ಲೈ ಭಾರತದೊಳಕ್ಕೆ ಸೈನ್ಯವನ್ನು ನುಗ್ಗಿಸಿದ.

ಕೊನೆಗೆ ಅಮೇರಿಕೆಯನ್ನು ಸಂತಸಗೊಳಿಸಲು ನಮ್ಮ ಹಳೆ ಮಿತ್ರ ಇರಾನ್ ವಿರುದ್ಧ ಭದ್ರತಾ ಸಮಿತಿಯಲ್ಲಿ ಮತ ಚಲಾಯಿಸಿದೆವು.   

ಅಮೆರಿಕೆಯ ಸಹವಾಸವನ್ನು ಸಂಪೂರ್ಣವಾಗಿ ಬಿಟ್ಟು ಒಂದು ಹೊಸ ವಿದೇಶ ನೀತಿಯನ್ನು ನಾವು ಹೆಣೆಯದಿದ್ದರೆ ನಮಗೆ ಆಪತ್ತು ಕಾದಿದ್ದೆ. ಮಧ್ಯ ಪ್ರಾಚ್ಯ ದೇಶಗಳೊಂದಿಗೆ ನಮ್ಮ ಸಂಬಂದವನ್ನು ಮತ್ತಷ್ಟು ಸುಧಾರಿಸಿ, ಚೀನಾದೊಂದಿಗೆ ಒಡಂಬಡಿಕೆ ಮಾಡಿಕೊಂಡರೆ ಒಳ್ಳೆಯದು. ಅರಬರು ಭಾರತದ ಬಗ್ಗೆ ಅಭಿಮಾನವನ್ನೂ, ಅಮೆರಿಕೆಯ ಬಗ್ಗೆ ತಾತ್ಸರವನ್ನೂ ಇಟ್ಟಿರುವ ಈ ಅವಕಾಶವನ್ನು ನಾವು ಉಪಯೋಗಿಸಿಕೊಳ್ಳಬೇಕು. .       

 

 “ಪಶ್ಚಿಮದ  ಕ್ರೌರ್ಯ” ದ ಬಗ್ಗೆ ಇನ್ನಷ್ಟು ಬರೆಯುವುದಿದೆ. ಪಲೆಸ್ತಿನ್, ಕರಿಯರ ಮೇಲಿನ ದಬ್ಬಾಳಿಕೆ, ಹೈತಿ…..

Advertisements

2 thoughts on “ಪಶ್ಚಿಮದ ಕ್ರೌರ್ಯ

  1. Ramakant ಹೇಳುತ್ತಾರೆ:

    My dear Indian expat brother,

    I think addressing you as above (instead of your name) is much better (& purer) – for the purpose of objectivity. (Names bring association to our backgrounds, rather than addressing the issues head on). Though I liked your patriotism very much, I must express my reservations about some of the issues that you raised.

    I don’t think that forceful reclamation of Pakistan occupied Kashmir (after Bombay blasts) could be a sound idea. Why? There are plenty of people with wrong notions in India – misinterpreting their religious books for the sake of divisive politics. We have failed in proper education in our schools – in the first place.

    For instance, many of my muslim NRI friends in Kuwait (where I live) – who are quite normal otherwise – have this stupid idea firmly embedded in their mind that Kashmir problem should have been solved by a referendum in 1947. These friends fail to realize the havoc that referendum would have brought to all Kashmiris (Hindus, Muslims as well as Sikhs) in the aftermath of people who suffered in moving across the newly created border between India & Pakistan.

ನಿಮ್ಮದೊಂದು ಉತ್ತರ

Fill in your details below or click an icon to log in:

WordPress.com Logo

You are commenting using your WordPress.com account. Log Out /  Change )

Google+ photo

You are commenting using your Google+ account. Log Out /  Change )

Twitter picture

You are commenting using your Twitter account. Log Out /  Change )

Facebook photo

You are commenting using your Facebook account. Log Out /  Change )

Connecting to %s